ಇಯು, ಅಮೆರಿಕ ಬಳಿಕ ಇನ್ನೂ 11 ದೇಶದ ಜತೆ ಟ್ರೇಡ್‌ ಡೀಲ್‌

Kannadaprabha News   | Kannada Prabha
Published : Feb 06, 2026, 10:27 AM IST
Piyush Goyal

ಸಾರಾಂಶ

ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯಲು ಅರ್ಥವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮುಂದಾಗಿರುವ ಭಾರತ, ಶೀಘ್ರವೇ ಇನ್ನೂ 11 ದೇಶಗಳೊಂದಿಗೆ ಶೀಘ್ರವೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವತ್ತ ಹೆಜ್ಜೆ ಇಟ್ಟಿದೆ.

ನವದೆಹಲಿ: ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯಲು ಅರ್ಥವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮುಂದಾಗಿರುವ ಭಾರತ, ಶೀಘ್ರವೇ ಇನ್ನೂ 11 ದೇಶಗಳೊಂದಿಗೆ ಶೀಘ್ರವೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವತ್ತ ಹೆಜ್ಜೆ ಇಟ್ಟಿದೆ. ಮಧ್ಯಪ್ರಾಚ್ಯದ 6 ದೇಶಗಳು ಹಾಗೂ ದಕ್ಷಿಣ ಅಮೆರಿಕದ 5 ರಾಷ್ಟ್ರಗಳು ಭಾರತದ ಜೊತೆಗೆ ಮಹತ್ವದ ಒಪ್ಪಂದಕ್ಕೆ ಮುಂದಾಗಿವೆ. ಯೂರೋಪಿಯನ್‌ ಒಕ್ಕೂಟ ಮತ್ತು ಅಮೆರಿಕ ಜತೆ ವ್ಯಾಪಾರ ಒಪ್ಪಂದದ ಘೋಷಣೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದು ಜಾಗತಿಕ ವಲಯದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವ, ಭಾರತದೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳಲು ದೇಶಗಳ ತವಕ, ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಸ್ಪಷ್ಟ ಉದಾಹರಣೆ ಎಂದು ವಿಶ್ಲೇಷಿಸಲಾಗಿದೆ.

ಜಿಸಿಸಿ ಜತೆ ಸಹಿ:

6 ಕೊಲ್ಲಿ ದೇಶಗಳನ್ನೊಳಗೊಂಡ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಜೊತೆ ಒಪ್ಪಂದದ ಆರಂಭಿಕ ಹಂತವಾದ ನಿಯಮಗಳ ರೂಪುರೇಷೆಗೆ ಗುರುವಾರ ಸಹಿ ಹಾಕಲಾಗಿದೆ. ಜಿಸಿಸಿಯಲ್ಲಿ ಸೌದಿ ಅರೇಬಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಕತಾರ್‌, ಕುವೈತ್‌, ಓಮನ್‌ ಹಾಗೂ ಬಹ್ರೈನ್‌ ದೇಶಗಳಿವೆ.

ಇನ್ನು ದಕ್ಷಿಣ ಅಮೆರಿಕದ 5 ದೇಶಗಳನ್ನೊಳಗೊಂಡ ವ್ಯಾಪಾರ ಒಕ್ಕೂಟವಾದ ಮರ್ಕೋಸರ್‌ ಜತೆ ಭಾರತ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಪೆರುಗ್ವೆಯ ಅಧ್ಯಕ್ಷ ಸ್ಯಾಟಿಯಾಗೋ ಪೆನಾ ಘೋಷಿಸಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ವಿಶ್ವ ಸರ್ಕಾರಗಳ ಶೃಂಗದಲ್ಲಿ ಮಾತನಾಡಿದ ಅವರು, ‘ನಾವು ವಿಶ್ವದಲ್ಲಿ 3 ಅತಿದೊಡ್ಡ ವ್ಯಾಪಾರ ಒಪ್ಪಂದಗಳು (ಭಾರತ-ಇಯು, ಭಾರತ-ಅಮೆರಿಕ, ಭಾರತ ಮರ್ಕೋಸುರ್‌) ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಹೊಸ ಸ್ವರೂಪ ನೀಡುತ್ತಿರುವುದನ್ನು ನೋಡುತ್ತಿದ್ದೇವೆ’ ಎಂದಿದ್ದಾರೆ.

ಮರ್ಕೋಸರ್‌ನಲ್ಲಿ ಅರ್ಜೆಂಟೀನಾ, ಬ್ರೆಜಿಲ್‌, ಪೆರುಗ್ವೆ, ಉರುಗ್ವೆ ಹಾಗೂ ಬೊಲಿವಿಯಾ ದೇಶಗಳಿವೆ.

ಏನು ಲಾಭ?:

ಸದ್ಯ ಜಿಸಿಸಿ ರಾಷ್ಟ್ರಗಳಲ್ಲಿ 1 ಕೋಟಿ ಭಾರತೀಯರು ನೆಲೆಸಿದ್ದಾರೆ. ಭಾರತವು ವಿಶ್ವದ ಪ್ರಮುಖ ಧಾನ್ಯ ಉತ್ಪಾದಕ ರಾಷ್ಟ್ರವಾದರೆ, ಜಿಸಿಸಿ ರಾಷ್ಟ್ರಗಳು ಪ್ರಮುಖ ತೈಲ ಮತ್ತು ಅನಿಲ ರಫ್ತುದಾರ ದೇಶಗಳಾಗಿವೆ. ಹೀಗಾಗಿ ಈ ಒಪ್ಪಂದವು ಎರಡೂ ಕಡೆಗಳಲ್ಲಿ ಆಹಾರ ಮತ್ತು ಇಂಧನ ಭದ್ರತೆಯನ್ನು ಹೆಚ್ಚಿಸಲಿದೆ. ಮೆರ್ಕೋಸರ್‌ ಜತೆಗಿನ ಒಪ್ಪಂದದಿಂದ ಔಷಧ, ರಾಸಾಯನಿಕಗಳು, ಆಹಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಭಾರತಕ್ಕೆ ಲಾಭವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನ-ಬೆಳ್ಳಿ ಬೆಲೆಯಲ್ಲಿ ಮಹಾಪತನ; ಶುಭ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ₹2,000 ಕುಸಿತ! ಬೆಂಗಳೂರಲ್ಲಿ ಪ್ರತಿ 10 ಗ್ರಾಮ್ ಚಿನ್ನದ ಬೆಲೆ ಎಷ್ಟು?
ಈಗಾಗಲೇ ಮದ್ವೆಯಾಗಿರುವ ಮಹಿಳೆ, ತನಗೆ ಮದ್ವೆ ಭರವಸೆ ನೀಡಿ ಅತ್ಯಾ*ಚಾರವೆಸಗಿದರು ಎಂದು ದೂರುವಂತಿಲ್ಲ: ಸುಪ್ರೀಂಕೋರ್ಟ್‌