ದಕ್ಷಿಣ ಭಾರತದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ನಡೆದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ದೊಡ್ಡ ಮಟ್ಟದ ಯಶಸ್ಸು ಕಂಡ ಬಳಿಕ ಯಾತ್ರೆಯ 2ನೇ ಭಾಗವನ್ನು ಆರಂಭ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಅರುಣಾಚಲ ಪ್ರದೇಶದಿಂದ ಗುಜರಾತ್‌ನವರೆಗೆ ಭಾರತ್ ಜೋಡೋ ಯಾತ್ರೆ 2.0 ನಡೆಸಲು ಪಕ್ಷ ತೀರ್ಮಾನ ಮಾಡಿದೆ.
ನವದೆಹಲಿ (ಫೆ,26): ಕಾಂಗ್ರೆಸ್ ಪಕ್ಷದ ಪಾಲಿಗೆ ದೊಡ್ಡ ಮಟ್ಟದ ಹುಮ್ಮಸ್ಸನ್ನು ಭಾರತ್ ಜೋಡೋ ಯಾತ್ರೆಯ ಯಶಸ್ಸು ನೀಡಿದೆ. ದಕ್ಷಿಣದಿಂದ ಉತ್ತರಕ್ಕೆ ಮಾಡಿರುವ ಯಾತ್ರೆ ಯಶಸ್ಸು ಕಂಡ ಬಳಿಕ, ಕಾಂಗ್ರೆಸ್ ಈಗ ಪೂರ್ವದಿಂದ ಪಶ್ಚಿಮಕ್ಕೆ ಭಾರತ್ ಜೋಡೋ ಯಾತ್ರೆಯ 2.0 ನಡೆಸಲು ಉದ್ದೇಶಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ತಿಳಿಸಿದ್ದಾರೆ. ಅರುಣಾಚಲಪ್ರದೇಶ ಪಾಸಿಘಾಟ್‌ನಿಂದ ಗುಜರಾತ್‌ನ ಪೋರ್‌ಬಂದರ್‌ವರೆಗೆ ನಡೆಯಲಿದೆ. ಭಾರತ್ ಜೋಡೋ ಯಾತ್ರೆಯ ತಪಸ್ಸನ್ನು ಮುಂದುವರಿಸಲು ರಾಹುಲ್ ಗಾಂಧಿ ಮನಸ್ಸು ಮಾಡಿರುವ ಕಾರಣ ಪಕ್ಷ ಈ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ. ಈ ಮೊದಲು ಏಪ್ರಿಲ್‌ನಿಂದ ಯಾತ್ರೆ ಶುರುವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದರೂ, ಹೊಸ ಮಾಹಿತಿಯ ಪ್ರಕಾರ, ಜೂನ್‌ನಿಂದ ಅಕ್ಟೋಬರ್ ನಡುವಿನ ಸಮಯದಲ್ಲಿ ಯಾತ್ರೆ ನಡೆಯುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನು ಪರಿಗಣಿಸಲಾಗುತ್ತಿದೆ ಆದರೆ ಅದರ ಸ್ವರೂಪ ಭಾರತ್ ಜೋಡೋ ಯಾತ್ರೆಗಿಂತ ಸ್ವಲ್ಪ ಭಿನ್ನವಾಗಿರಬಹುದು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
'ಬಹಳ ಉತ್ಸಾಹ ಮತ್ತು ಶಕ್ತಿ ಇದೆ. ವೈಯಕ್ತಿಕವಾಗಿ ಇದು ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಪೂರ್ವ-ಪಶ್ಚಿಮ ಯಾತ್ರೆಯ ಸ್ವರೂಪವು ದಕ್ಷಿಣದಿಂದ ಉತ್ತರಕ್ಕೆ ಭಾರತ್ ಜೋಡೋ ಯಾತ್ರೆಯ ಸ್ವರೂಪಕ್ಕಿಂತ ಭಿನ್ನವಾಗಿರಬಹುದು" ಎಂದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಈ ವರ್ಷದ ಜನವರಿವರೆಗೆ ಗಾಂಧಿ ಮತ್ತು ಹಲವಾರು ಕಾಂಗ್ರೆಸ್‌ನವರು ಕೈಗೊಂಡ ಸುಮಾರು 4,000 ಕಿಮೀ ಕನ್ಯಾಕುಮಾರಿ-ಕಾಶ್ಮೀರ ಪ್ರಯಾಣದ ನಂತರ ಮತ್ತೊಂದು ಯಾತ್ರೆಗೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಶಕ್ತಿ ತುಂಬಿದೆ ಎಂದು ಪಕ್ಷದ ಹಿರಿಯ ನಾಯಕ ತಿಳಿಸಿದ್ದಾರೆ. ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯಲ್ಲಿ ಪೂರ್ಣ ಪ್ರಮಾಣದ ಮೂಲಸೌಕರ್ಯ ವ್ಯವಸ್ಥೆಗಳು ಇದ್ದಿರೋದಿಲ್ಲ. ಇದರಿಂದಾಗಿ ಯಾತ್ರಿಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.
ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯ ಬಹುಪಾಲು 'ಪಾದಯಾತ್ರೆ' ಆಗಿರಲಿದೆ. ಈ ಮಾರ್ಗದಲ್ಲಿ ಅರಣ್ಯಗಳು ಹಾಗೂ ನದಿಗಳು ಕೂಡ ಸಿಗಲಿದೆ. ಇದು ಮಲ್ಟಿಮಾಡೆಲ್ ಯಾತ್ರೆ ಆಗಿರಲಿದೆ. ಆದರೆ, ಬಹುತೇಕ ಪಾದಯಾತ್ರೆಯ ಮೂಲಕ ಸಾಗಲಿದೆ ಎಂದು ಹೇಳಿದ್ದಾರೆ.
ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಚುನಾವಣೆ, ಜೂನ್‌ನಿಂದ ಮಳೆ ಮತ್ತು ನವೆಂಬರ್‌ನಲ್ಲಿ ಮತ್ತೆ ರಾಜ್ಯ ಚುನಾವಣೆಗಳು ಇರುವುದರಿಂದ ಯಾತ್ರೆಯನ್ನು ಜೂನ್‌ಗಿಂತ ಮೊದಲು ಅಥವಾ ನವೆಂಬರ್‌ಗಿಂತ ಮೊದಲು ಕೈಗೊಳ್ಳಬೇಕಾಗಬಹುದು ಎಂದು ರಮೇಶ್ ಹೇಳಿದರು. ಈ ಯಾತ್ರೆಯು ಭಾರತ್ ಜೋಡೋ ಯಾತ್ರೆಗಿಂತ ಕಡಿಮೆ ಅವಧಿಯದ್ದಾಗಿದೆ ಎಂದು ರಮೇಶ್ ಹೇಳಿದರು. ಮುಂದಿನ ಕೆಲವು ವಾರಗಳಲ್ಲಿ ಇದೆಲ್ಲವನ್ನೂ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Congress Plenary Session: 52 ವರ್ಷವಾಯ್ತು ನಮಗಿನ್ನೂ ಸ್ವಂತ ಮನೆಯಿಲ್ಲ ಎಂದ ರಾಹುಲ್ ಗಾಂಧಿ!
ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಭಾರತ್ ಜೋಡೋ ಯಾತ್ರೆಯ ಮೂಲಕ ಕೈಗೊಂಡ “ತಪಸ್ಯ” ವನ್ನು ಮುಂದುವರಿಸಲು ಪಕ್ಷವು ಹೊಸ ಯೋಜನೆಯನ್ನು ರೂಪಿಸಬೇಕು ಮತ್ತು ಇಡೀ ದೇಶದೊಂದಿಗೆ ತಾವು ಅದರಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು, ಇದು ಅಂತಹ ಮತ್ತೊಂದು ಕಾರ್ಯಕ್ರಮವಾಗಿದೆ.
‘ಕಾಂಗ್ರೆಸ್’ ಯೋಜನೆಗಳಿಗೆ ಗ್ಯಾರಂಟಿ ಇಲ್ಲ: ಸಚಿವ ಬಿ.ಸಿ.ಪಾಟೀಲ್ ಗೇಲಿ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ ಭಾರತ್ ಜೋಡೋ ಯಾತ್ರೆಯೊಂದಿಗೆ ತಮ್ಮ ಇನ್ನಿಂಗ್ಸ್ ಮುಕ್ತಾಯಗೊಳಿಸಲು ಸಂತೋಷವಾಗಿದೆ ಮತ್ತು ಯಾತ್ರೆಯ ಯಶಸ್ಸಿಗೆ ಕಾರಣವಾದ ನಾಯಕತ್ವ ಮತ್ತು ನಿರ್ಣಯವನ್ನು ಒದಗಿಸಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ಅಭಿನಂದಿಸಿದ್ದಾರೆ. “ಯಾತ್ರೆಯಿಂದ ಮಹತ್ವದ ತಿರುವು ಸಿಕ್ಕಿದೆ. ಭಾರತದ ಜನರು ಅಗಾಧವಾಗಿ ಸಾಮರಸ್ಯ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬಯಸುತ್ತಾರೆ ಎಂಬುದನ್ನು ಇದು ಸಾಬೀತುಪಡಿಸಿದೆ. ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳ ಮೂಲಕ ನಮ್ಮ ಪಕ್ಷ ಮತ್ತು ಜನರ ನಡುವಿನ ಸಂವಾದದ ಶ್ರೀಮಂತ ಪರಂಪರೆಯನ್ನು ಇದು ನವೀಕರಿಸಿದೆ. ಕಾಂಗ್ರೆಸ್ ಜನರೊಂದಿಗೆ ನಿಂತಿದೆ ಮತ್ತು ಅವರಿಗಾಗಿ ಹೋರಾಡಲು ಸಿದ್ಧವಾಗಿದೆ ಎಂಬುದನ್ನು ಇದು ನಮಗೆ ತೋರಿಸಿದೆ, ”ಎಂದು ಅವರು ಹೇಳಿದರು.