
ಚೆನ್ನೈ(ಡಿ.07): ಮುಂದಿನ ದಿನಗಳಲ್ಲಿ ಹಿಂದು ಮಹಾಸಾಗರದಲ್ಲಿ ಏಳಲಿರುವ ಚಂಡಮಾರುಗಳ ಪಟ್ಟಿಯಲ್ಲಿ ‘ಅರ್ನಬ್’ ಎಂಬ ಚಂಡಮಾರುತವೂ ಇದೆ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಇದಕ್ಕೂ ಪ್ರಸಿದ್ಧ ನ್ಯೂಸ್ ಚಾನಲ್ ಆ್ಯಂಕರ್‌ಗೂ ಸಂಬಂಧವಿಲ್ಲ. ಬಾಂಗ್ಲಾದೇಶ ಈ ಹೆಸರು ಸೂಚಿಸಿದ್ದು, ಹಿಂದು ಮಹಾಸಾಗರದ ಸುತ್ತ ಬರುವ ದೇಶಗಳು ಇದನ್ನು ಒಪ್ಪಿಕೊಂಡಿವೆ.
ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!
ಹಿಂದು ಮಹಾಸಾಗರದ ಪ್ರದೇಶದಲ್ಲಿರುವ 13 ದೇಶಗಳು ಈ ವರ್ಷ ಒಟ್ಟು 169 ಚಂಡಮಾರುತಗಳ ಹೆಸರನ್ನು ಅಂಗೀಕರಿಸಿವೆ. ಫನಿ, ವಾಯು, ಬುಲ್‌ಬುಲ್ ಹಾಗೂ ಹಿಕ್ಕಾ ಚಂಡಮಾರುತಗಳ ನಂತರ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಪಟ್ಟಿಬಿಡುಗಡೆ ಮಾಡಿದೆ. ಅದರಲ್ಲಿ ‘ಅರ್ನ್‌ಬ್’ ಎಂಬ ಹೆಸರೂ ಸೇರಿದೆ.
ಈ ಚಂಡಮಾರುತ ಯಾವಾಗ ಅಪ್ಪಳಿಸುತ್ತದೆ ಎಂಬುದು ತಿಳಿದಿಲ್ಲ. ‘ಬುರೆವಿ’ ನಂತರ ಕೆಲ ಚಂಡಮಾರುತಗಳು ಅಪ್ಪಳಿಸಿದ ನಂತರ ಬರುವ ಚಂಡಮಾರುತಕ್ಕೆ ಈ ಹೆಸರು ಇರಲಿದೆ.
ಬಿಗ್‌ಬಾಸ್ ಮನೆಗೂ ತಟ್ಟಿದ 'ನಿವಾರ್' ಚಂಡಮಾರುತ ಎಫೆಕ್ಟ್; ಸ್ಪರ್ಧಿಗಳು ಬೇರೆಡೆ ಶಿಫ್ಟ್?
ಚಂಡಮಾರುತ ಏಳುವ ಸಮುದ್ರದ ಅಕ್ಕಪಕ್ಕದ ದೇಶಗಳು ಸಾಕಷ್ಟುಮೊದಲೇ ಭವಿಷ್ಯದ ಚಂಡಮಾರುತಗಳಿಗೆ ಒಂದಷ್ಟುಹೆಸರನ್ನು ಆಯ್ಕೆ ಮಾಡಿರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ