Sunil Kanugolu: ಮಧ್ಯಪ್ರದೇಶ ಟಾಸ್ಕ್‌ಗೆ ರೆಡಿಯಾದ ಕಾಂಗ್ರೆಸ್‌ ಮಾಸ್ಟರ್‌ಮೈಂಡ್‌ ಸುನೀಲ್‌ ಕನುಗೋಲು!

By Santosh Naik  |  First Published May 14, 2023, 6:53 PM IST

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಐತಿಹಾಸಿಕ ಗೆಲುವಿಗೆ ಕಾರಣರಾದವರು ಚುನಾವಣಾ ತಂತ್ರಗಾರ ಸುನೀಲ್‌ ಕನುಗೋಲು. ಕರ್ನಾಟಕದಲ್ಲಿ ದೊಡ್ಡ ಮಟ್ಟದ ಯಶಸ್ಸಿನ ಬಳಿಕ ಕಾಂಗ್ರೆಸ್‌ ಪಕ್ಷ, ಮಧ್ಯಪ್ರದೇಶ ಚುನಾವಣೆಯ ಟಾಸ್ಕ್‌ಅನ್ನು ಇವರಿಗೆ ನೀಡಿದೆ ಎಂದು ವರದಿಯಾಗಿದೆ.
 


ನವದೆಹಲಿ (ಮೇ.14):  ಕರ್ನಾಟಕದಲ್ಲಿ ಐತಿಹಾಸಿಕ ಜನಾದೇಶದೊಂದಿಗೆ, ದಕ್ಷಿಣ ಭಾರತದಲ್ಲಿಕಾಂಗ್ರೆಸ್‌ನ ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು ಅವರಿಗೆ ಈಗ ಮಧ್ಯಪ್ರದೇಶದಲ್ಲಿ ಅದೇ ಫಲಿತಾಂಶವನ್ನು ತರುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಕಾಂಗ್ರೆಸ್‌ನ ಆಪ್ತ ಮೂಲಗಳು ತಿಳಿಸಿವೆ. ಕಳೆದ ವರ್ಷ ಮೇ ತಿಂಗಳಲ್ಲಿ ಕನುಗೋಲು ಅವರನ್ನು ಕಾಂಗ್ರೆಸ್ ತೆಕ್ಕೆಗೆ ಕರೆತರಲಾಗಿತ್ತು. ಅಂದಿನಿಂದ ಅವರು ಪಕ್ಷದ ಕಾರ್ಯತಂತ್ರಗಾರರಾಗಿ ಕೆಲಸ ಮಾಡಿದ್ದಾರೆ ಮತ್ತು ಕರ್ನಾಟಕದಲ್ಲಿ ಸಮೀಕ್ಷೆಗಳನ್ನು ಸಿದ್ಧಪಡಿಸುವುದು, ಪ್ರಚಾರ ಮಾಡುವುದು, ಅಭ್ಯರ್ಥಿಗಳನ್ನು ನಿರ್ಧರಿಸುವುದು ಮತ್ತು ಗೆಲ್ಲುವ ಕಾರ್ಯತಂತ್ರದ ಜವಾಬ್ದಾರಿಯನ್ನು ಅವರು ಹೊಂದಿದ್ದರು ಮತ್ತು ಅವರ ಕೆಲಸವು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಕಳೆದ ವರ್ಷ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ದೊಡ್ಡ ಮಟ್ಟದಲ್ಲಿ ಯಶಸ್ಸು ಮಾಡುವ ಜವಾಬ್ದಾರಿಯನ್ನು ಕನುಗೋಲು ವಹಿಸಿದ್ದರು. ಪಕ್ಷದ ನಾಯಕರ ಪ್ರಕಾರ, ಬಹುತೇಕ ತೆರೆಮರೆಯಲ್ಲಿ ಉಳಿಯುವ ಕನುಗೋಲು ದಕ್ಷಿಣ ರಾಜ್ಯದ ಪ್ರತಿ ವಿಧಾನಸಭಾ ಸ್ಥಾನಕ್ಕೆ ತಮ್ಮ ತಂತ್ರವನ್ನು ಸಿದ್ಧ ಮಾಡಿಟ್ಟುಕೊಂಡಿದ್ದರು.

ಕರ್ನಾಟಕದ ಸ್ಪರ್ಧೆ ತ್ರಿಕೋನವಾಗದಂತೆ ಬಿಜೆಪಿ ಮತ್ತು ಜೆಡಿಎಸ್ ಅನ್ನು ಮೂಲೆಗುಂಪು ಮಾಡುವುದು ಅವರ ತಂತ್ರವಾಗಿತ್ತು ಮತ್ತು ಅದು ಪಕ್ಷದ ಪರವಾಗಿ ಅವರಿಗೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತು. ಇತರ ಪಕ್ಷಗಳ ಆರೋಪಗಳನ್ನು ಎದುರಿಸಲು ಅವರು ಮತ್ತು ಅವರ ತಂಡವು ನಿರಂತರವಾಗಿ ತಮ್ಮ ಅಭ್ಯರ್ಥಿಗಳಿಗೆ ಅಗತ್ಯವಾದ ಇನ್‌ಪುಟ್‌ಗಳನ್ನು ನೀಡುವ ಮೂಲಕ ಬೆಂಬಲಿಸಿತ್ತು. ಪಕ್ಷದ ನಾಯಕರ ಪ್ರಕಾರ, ಕನಗೋಲು ಅವರು ಬಿಜೆಪಿ ವಿರುದ್ಧ ರೇಟ್‌ ಕಾರ್ಡ್ ಬಿಡುಗಡೆ, ಪೇ-ಸಿಎಂ, 40 ಪರ್ಸೆಂಟ್ ಕಮಿಷನ್ ಸರ್ಕಾರ ಮುಂತಾದ ಕಾಂಗ್ರೆಸ್ ಪ್ರಚಾರದ ಕ್ಯಾಂಪೇನ್‌ಗಳಿಗೆ ಕಾರಣರಾಗಿದ್ದರು. ಕರ್ನಾಟಕ ವಿಧಾನಸಭೆಯ ಕೊನೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದರು. ತಮ್ಮ ಮೇಲೆ ಕಾಂಗ್ರೆಸ್‌ ಬಳಸುತ್ತಿರುವ ನಿಂದನಾರ್ಹ ಪದಗಳ ಡಿಕ್ಷನರಿಯನ್ನೇ ಮಾಡಬಹುದು ಎನ್ನುವುದಕ್ಕೆ ಪ್ರತಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯೆ ನೀಡಿದ್ದಾಗ, 'ಕ್ರೈಪಿಎಂ' ಎನ್ನುವ ಅಭಿಯಾನವನ್ನು ಯಶಸ್ವಿಯಾಗಿ ಮಾಡಲಾಗಿತ್ತು.

ಬಿಜೆಪಿಯ ಪ್ರಚಾರದ ಭಾಗವಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೆಲಸ ಮಾಡಿದ್ದ ಕನುಗೋಲು, ಪಕ್ಷವನ್ನು ಬಿಡುವ ಮೊದಲು 2014 ರಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಿದ್ದರು. ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದರು ಮತ್ತು 2017 ರಲ್ಲಿ ಯೋಗಿ ಆದಿತ್ಯನಾಥ್ ಅವರ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿತ್ತು. ಕರ್ನಾಟಕದ ಗೆಲುವಿನ ನಂತರ, ಕಾಂಗ್ರೆಸ್ ಈಗ ಮಧ್ಯಪ್ರದೇಶವನ್ನು ಕನುಗೋಲುಗೆ ವಹಿಸಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರವೂ ಪಕ್ಷವು 2020 ರಲ್ಲಿ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ಜ್ಯೊತಿರಾಧಿತ್ಯ ಸಿಂಧಿಯಾ ಅವರ ಬಂಡಾಯದ ನಂತರ ಅಧಿಕಾರವನ್ನು ಕಳೆದುಕೊಂಡಿತು.

ಮಧ್ಯಪ್ರದೇಶದಲ್ಲಿ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದು, ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಇಬ್ಬರೂ ದಣಿವಿಲ್ಲದೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ಮೂಲೆಗುಂಪು ಮಾಡಲು ಉದ್ದೇಶಿತ ಪ್ರಚಾರಕ್ಕಾಗಿ ಕರ್ನಾಟಕ ರೀತಿಯದ್ದೇ ಮಾದರಿಯನ್ನು ಸಿದ್ಧಪಡಿಸಲು ಕನುಗೋಲು ಅವರಿಗೆ ಕಾಂಗ್ರೆಸ್‌ ಕೇಳಿಕೊಂಡಿದೆ. ಪ್ರಸ್ತುತ ಮಧ್ಯಪ್ರದೇಶದ ರಾಜ್ಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಹಿರಿಯ ನಾಯಕ ಜೆಪಿ ಅಗರ್ವಾಲ್ ಅವರ ಅನುಭವದೊಂದಿಗೆ, ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಇಬ್ಬರೂ ಈವರೆಗೂ ತಳಮಟ್ಟದ ಕಾರ್ಯಕರ್ತರನ್ನು ಕೇಂದ್ರೀಕರಿಸಿದ್ದಾರೆ.

ಪಕ್ಷದ ನಾಯಕರ ಪ್ರಕಾರ, ದಿಗ್ವಿಜಯ್‌ ಸಿಂಗ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕೋಟೆಯನ್ನು ಹಿಡಿದಿದ್ದರೆ, ಕಮಲ್ ನಾಥ್ ಅವರು ಜಿಲ್ಲಾವಾರು ಪಕ್ಷವನ್ನು ಬಲಪಡಿಸುತ್ತಿದ್ದಾರೆ. ಹಲವು ಬಣಗಳಿಂದಾಗಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಆಂತರಿಕ ಕಲಹಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕನುಗೋಲು ಅವರಿಗೆ ಚೌಹಾಣ್‌ರನ್ನು ಎದುರಿಸುವ ಹೊಣೆಗಾರಿಕೆ ನೀಡಲಾಗಿದೆ’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಕೈಲಾಶ್ ವಿಜಯವರ್ಗಿಯಾ, ಸಿಂಧಿಯಾ, ಚೌಹಾಣ್, ನರೋತಮ್ ಮಿಶ್ರಾ ಬಿಜೆಪಿಯಲ್ಲಿ ಹಲವಾರು ಬಣಗಳು ಎದ್ದು ಕಾಣುತ್ತಿವೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಚುನಾವಣೆಯಲ್ಲಿ ಸಹಾಯ ಮಾಡಬಹುದು ಎನ್ನಲಾಗಿದೆ. ಕಾನೂನು ಸುವ್ಯವಸ್ಥೆ, ಸರ್ಕಾರದ ಯೋಜನೆಗಳ ವೈಫಲ್ಯ, ಭ್ರಷ್ಟಾಚಾರದ ಆರೋಪಗಳ ವಿಚಾರದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಗುರುತಿಸುವ ಕಾರ್ಯವನ್ನೂ ಕನುಗೋಲುಗೆ ವಹಿಸಲಾಗಿದೆ.

Karnataka Election Result 2023: ಪೇಸಿಎಂ, ಸರ್ವೇ, ಡಿಜಿಟಲ್‌ ಐಡಿಯಾ.. ಕಾಂಗ್ರೆಸ್‌ ಮಾಸ್ಟರ್‌ ಮೈಂಡ್‌ ಸುನೀಲ್‌ ಕುನಗೋಳು!

ಕಳೆದ ಎರಡು ದಶಕಗಳಲ್ಲಿ ಬಿಜೆಪಿಯ ಭದ್ರಕೋಟೆಯಾಗಿ ಉಳಿದುಕೊಂಡಿರುವ ರಾಜ್ಯವನ್ನು ಭೇದಿಸಲು ಕನುಗೋಲುಗೆ ಟಾಸ್ಕ್‌ ನೀಡಲಾಗಿದೆ. ಅವರ ಮಾರ್ಗದರ್ಶನದಲ್ಲಿ ಪ್ರಚಾರ ಹಾಗೂ ಸಮೀಕ್ಷೆಗಳನ್ನು ಮಾಡುವ ಮೂಲಕ ಗೆಲುವಿನ ರುಚಿ ನೋಡುವ ಭರವಸೆಯಲ್ಲಿದೆ.

Tap to resize

Latest Videos

Man Behind PayCM: ಸರ್ಕಾರಕ್ಕೆ ತಿವಿಯಲು 'ಐಟಿ' ಐಡಿಯಾ, ಪೇಸಿಎಂ ಅಭಿಯಾನದ ಮಾಸ್ಟರ್‌ ಮೈಂಡ್‌ ಮಾತು!

click me!