ದೇಶ ಕಾಯುತ್ತಿದ್ದ ಅಲಿಗಢಕ್ಕೆ ಇನ್ನು ಗಡಿ ರಕ್ಷಿಸುವ ಹೊಣೆ!

By Suvarna NewsFirst Published Sep 15, 2021, 9:53 AM IST
Highlights

* ಅಲಿಗಢದಲ್ಲಿ ನಿರ್ಮಾಣಗೊಳ್ಳುತ್ತಿರುವ ರಕ್ಷಣಾ ಕಾರಿಡಾರ್‌ಗೆ ಭೇಟಿ

* ದೇಶ ಕಾಯುತ್ತಿದ್ದ ಅಲಿಗಢಕ್ಕೆ ಇನ್ನು ಗಡಿ ರಕ್ಷಿಸುವ ಹೊಣೆ

ಅಲಿಗಢ(ಸೆ.15): ಮನೆಗಳನ್ನು ಭದ್ರಪಡಿಸುವ ಬೀಗಗಳ ತಯಾರಿಕೆಗೆ ಪ್ರಸಿದ್ಧಿಪಡೆದಿರುವ ಅಲಿಗಢ 21ನೇ ಶತಮಾನದಲ್ಲಿ ದೇಶದ ಗಡಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಮಂಗಳವಾರ ಡಿಫೆನ್ಸ್‌ ಕಾರಿಡಾರ್‌ನ ಅಲಿಗಢ ವಿಭಾಗಕ್ಕೆ ಭೇಟಿ ನೀಡಿದ ಮೋದಿ ವಸ್ತುಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಮಾತನಾಡಿದ ಮೋದಿ, ಪ್ರಮುಖ ರಕ್ಷಣಾ ಆಮದುದಾರ ದೇಶವೆನಿಸಿದ್ದ ಭಾರತವೀಗ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ದೇಶವಾಗಿ ರೂಪುಗೊಂಡಿದೆ. ಉತ್ತರ ಪ್ರದೇಶ ರಕ್ಷಣಾ ಉತ್ಪಾದನೆಯ ಕೇಂದ್ರ ಎನಿಸಿಕೊಳ್ಳಲಿದೆ.

ಸಣ್ಣ ಶಸ್ತ್ರಾಸ್ತ್ರಗಳ ಕೈಗಾರಿಕಾ ಘಟಕಗಳು, ಏರೋಸ್ಪೇಸ್‌, ಡ್ರೋನ್‌ಗಳ ತಯಾರಿಕೆ, ಡ್ರೋನ್‌ ನಿರೋಧಕ ವ್ಯವಸ್ಥೆ, ರಕ್ಷಣಾ ಸಾಮಗ್ರಿಗಳ ಬಿಡಿಭಾಗಗಳ ಉತ್ಪಾದನೆ, ರಕ್ಷಣಾ ಪ್ಯಾಕೇಜಿಂಗ್‌ ಉತ್ಪನ್ನಗಳು ರಕ್ಷಣಾ ಕಾರಿಡಾರ್‌ನಲ್ಲಿ ತಲೆ ಎತ್ತಲಿವೆ. ಉತ್ತರ ಪ್ರದೇಶದ ಅಲಿಗಢದಲ್ಲಿ ನಿರ್ಮಾಣ ಆಗುತ್ತಿರುವ ರಕ್ಷಣಾ ಕಾರಿಡಾರ್‌ ರಾಜ್ಯ ಮತ್ತು ಜಿಲ್ಲೆಯ ಆರ್ಥಿಕ ಪ್ರಗತಿಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ.

click me!