ದೇಶದಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಈ ಹಿಂದೆ ಅವುಗಳಿಗೆ ನೀಡಿದ್ದ ತೆರಿಗೆ ರಿಯಾಯ್ತಿ ಹಾಗೂ ಪ್ರೋತ್ಸಾಹಕರ ಯೋಜನೆಗಳನ್ನು ಇನ್ನೂ ಒಂದು ವರ್ಷ ಮುಂದುವರೆಸಲಾಗುವುದು ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ನವದೆಹಲಿ: ದೇಶದಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಈ ಹಿಂದೆ ಅವುಗಳಿಗೆ ನೀಡಿದ್ದ ತೆರಿಗೆ ರಿಯಾಯ್ತಿ ಹಾಗೂ ಪ್ರೋತ್ಸಾಹಕರ ಯೋಜನೆಗಳನ್ನು ಇನ್ನೂ ಒಂದು ವರ್ಷ ಮುಂದುವರೆಸಲಾಗುವುದು ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ‘ಸ್ಟಾರ್ಟಪ್‌ಗಳಿಗೆ ಹಾಗೂ ಸಾವರಿನ್ ವೆಲ್ತ್ ಅಥವಾ ಪಿಂಚಣಿ ನಿಧಿಗಳು ಮಾಡುವ ಹೂಡಿಕೆಗೆ 2025ರ ಮಾರ್ಚ್ ಅಂತ್ಯದವರೆಗೆ ತೆರಿಗೆ ರಿಯಾಯ್ತಿ ಹಾಗೂ ಪ್ರೋತ್ಸಾಹಗಳನ್ನು ವಿಸ್ತರಿಸಲಾಗುವುದು. ಕೆಲ ತೆರಿಗೆ ವಿನಾಯ್ತಿಗಳು/ರಿಯಾಯ್ತಿಗಳು ಹಾಗೂ ಪ್ರೋತ್ಸಾಹಕರ ಕ್ರಮಗಳು 2024ರ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳುತ್ತಿದ್ದವು. ತೆರಿಗೆಯಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಅವುಗಳನ್ನು ಇನ್ನೊಂದು ವರ್ಷ ವಿಸ್ತರಿಸಲಾಗುವುದು’ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹೊಂದಿದೆ. ಈವರೆಗೆ 1.17 ಲಕ್ಷ ಸ್ಟಾರ್ಟಪ್‌ಗಳಿಗೆ ಸರ್ಕಾರ ಮಾನ್ಯತೆ ನೀಡಿದೆ. ಅವುಗಳಲ್ಲಿ ಅರ್ಹ ಸ್ಟಾರ್ಟಪ್‌ಗಳಿಗೆ ಆದಾಯ ತೆರಿಗೆ ಕಡಿತ, ತೆರಿಗೆ ಸಂಬಂಧಿ ಪ್ರೋತ್ಸಾಹ ಮುಂತಾದ ಸೌಕರ್ಯಗಳನ್ನು ‘ಸ್ಟಾರ್ಟಪ್ ಇಂಡಿಯಾ’ ಯೋಜನೆಯ ಮೂಲಕ ನೀಡುತ್ತಿದೆ. ಬಜೆಟ್‌ನಲ್ಲಿ ಸ್ಟಾರ್ಟಪ್‌ಗಳಿಗೆ ನೀಡಿರುವ ಪ್ರೋತ್ಸಾಹಕರ ಕ್ರಮಗಳನ್ನು ಮುಂದುವರೆಸಿರುವುದಕ್ಕೆ ದೇಶದ ನವೋದ್ಯಮಗಳ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ತೆರಿಗೆ ಪ್ರಸ್ತಾವಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಹೀಗಾಗಿ ನಿರೀಕ್ಷೆಯಂತೆ ಸ್ಟಾರ್ಪಟ್‌ಗಳಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ಒಂದು ವರ್ಷ ವಿಸ್ತರಿಸಿದೆ. ಇದರಿಂದ ಸ್ಟಾರ್ಟಪ್‌ಗಳಿಗೆ ಅನುಕೂಲವಾಗಲಿದೆ’ ಎಂದು ನವೋದ್ಯಮಿಗಳು ಹೇಳಿದ್ದಾರೆ.
undefined
ಕೇಂದ್ರ ಬಜೆಟ್‌ನಲ್ಲಿ ಗಮನ ಸೆಳೆದ 1111111, ಶೇ. 11.11 ಸಂಖ್ಯೆಗಳು
ಬಜೆಟ್‌ನಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಗ್ಯಾರಂಟಿ: ಮೋದಿ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗ್ಯಾರಂಟಿಯನ್ನು ನೀಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಬಳಿಕ ವಿಡಿಯೋ ಸಂದೇಶ ನೀಡಿದ ಅವರು, ‘ಬಜೆಟ್‌ನಲ್ಲಿ ಯುವಜನರು, ಬಡವರು, ಮಹಿಳೆಯರು ಮತ್ತು ರೈತರಿರುವ ನಾಲ್ಕು ಸ್ತಂಭಗಳನ್ನು ಸಬಲೀಕರಣ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ದೃಷ್ಟಿಕೋನವುಳ್ಳ ಬಜೆಟ್ ಭಾರತದ ಭವಿಷ್ಯವನ್ನು ರೂಪಿಸುತ್ತದೆ ಮತ್ತು ಕೋಟ್ಯಂತರ ಯುವಜನರ ಕನಸಿನ ಭಾರತವನ್ನು ನಿರ್ಮಾಣ ಮಾಡುತ್ತದೆ’ ಎಂದು ತಿಳಿಸಿದರು.
ಅಲ್ಲದೆ ಸಂಶೋಧನೆ ಮತ್ತು ಅನುಸಂಧಾನಕ್ಕೆ 1 ಲಕ್ಷ ಕೋಟಿ ರು. ಮೀಸಲಿಟ್ಟಿರುವ ಕ್ರಮವನ್ನು ಐತಿಹಾಸಿಕ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು 11.11 ಲಕ್ಷ ಕೋಟಿ ರು.ಗಳ ಬೃಹತ್ ಬಂಡವಾಳ ವೆಚ್ಚಕ್ಕೆ ನಿಯಂತ್ರಣ ಹೊಂದಿರುವ ಕ್ರಮ ಶ್ಲಾಘನೀಯ ಎಂದು ತಿಳಿಸಿದರು. ಜೊತೆಗೆ ಬಜೆಟ್‌ನಲ್ಲಿ ಸ್ಟಾರ್ಟಪ್‌ಗಳಿಗೆ ತೆರಿಗೆ ರಿಯಾಯಿತಿ ಘೋಷಿಸಲಾಗಿದ್ದು, ಇದರಿಂದಾಗಿ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಬಲೀಕರಣವಾಗುವ ಜೊತೆಗೆ ಯುಜನತೆಗೆ ಅಸಂಖ್ಯಾತ ಉದ್ಯೋಗಾವಕಾಶಗಳ ಹೆಬ್ಬಾಗಿಲು ತೆರೆಯಲಿದೆ ಎಂದು ಬಣ್ಣಿಸಿದರು.
ತಿಕ್ಕಾಟದ ನಡುವೆಯೂ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ 600 ಕೋಟಿ ರು: ಇತರ ನೆರೆ ದೇಶಗಳಿಗೆ 22154 ಕೋಟಿ ರು. ಹಂಚಿಕೆ