ಬರ್ಕ್ಲಿ ನಂತರ, ಕೇಂಬ್ರಿಡ್ಜ್ ಆನ್‌ಲೈನ್ ಕೋರ್ಸ್‌ ಪೂರ್ಣಗೊಳಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ!

By Suvarna News  |  First Published Feb 23, 2022, 10:10 AM IST

ಫೆಬ್ರವರಿ 20, 2022 ರಂದು Business Analytics: Decision Making using Data ಆನ್‌ಲೈನ್ ಕೋರ್ಸನ್ನು ಪೂರ್ಣಗೊಳಿಸಿದ್ದಾರೆ


ನವದೆಹಲಿ (ಫೆ. 23): 2021 ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಿಂದ ಪ್ರಮಾಣಪತ್ರ ಪಡೆದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ  ಸಚಿವೆ ಸ್ಮೃತಿ ಇರಾನಿ ಈಗ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಆನ್‌ಲೈನ್ ಕೋರ್ಸ್‌ ಪೂರ್ಣಗೊಳಿಸುವ ಮೂಲಕ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.  ಫೆಬ್ರವರಿ 20, 2022 ರಂದು Business Analytics: Decision Making using Data ಆನ್‌ಲೈನ್ ಕೋರ್ಸನ್ನು ಪೂರ್ಣಗೊಳಿಸಿದ್ದಾರೆ. ನವೆಂಬರ್ 2020 ರಲ್ಲಿ ಯುಸಿ ಬರ್ಕ್ಲಿಯಲ್ಲಿ ಆನ್‌ಲೈನ್ ಕಾರ್ಯಕ್ರಮವನ್ನು ಸ್ಮೃತಿ ಇರಾನಿ ಪೂರ್ಣಗೊಳಿಸಿದ್ದರು. 

ಸ್ಮೃತಿ ಇರಾನಿ ತಮ್ಮ ಈ ಸಾಧನೆಗಳನ್ನು  ಸಾಮಾಜಿಕ ಮಾಧ್ಯಮಕ್ಕೆ ಟ್ವೀಟರ್‌ನಲ್ಲಿ ಮಾಹಿತಿ ನೀಡಿದ್ದು "ಸಾಂಕ್ರಾಮಿಕ ರೋಗವು ಅದರ ಸವಾಲುಗಳೊಂದಿಗೆ ಕಲಿಯಲು, ಪೂರೈಸಿದ ಜೀವನವನ್ನು ನಡೆಸಲು ಅವಕಾಶವನ್ನು ಒದಗಿಸಿತು; ಯುಸಿ ಬರ್ಕ್ಲಿ ನಂತರ, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಕಲಿಕೆಯನ್ನು ಆನಂದಿಸಿದೆ" ಎಂದು ಹೇಳಿದ್ದಾರೆ.

Tap to resize

Latest Videos

ಇದನ್ನೂ ಓದಿ: ಅಮ್ಮನ ಕೈಯಿಂದ ಬೀಳುವ ಏಟೇ ಸಾಕು ಯಾವ ಮನೋತಜ್ಞರು ಬೇಡ... Smriti Irani ಪೋಸ್ಟ್‌ ನೋಡಿ

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ  ಆನ್‌ಲೈನ್ ಕೋರ್ಸ್‌ನ ಕೊನೆಯಲ್ಲಿ ತಮಗೆ ನೀಡಲಾದ ಪ್ರಮಾಣಪತ್ರದ ಚಿತ್ರವನ್ನು ಇರಾನಿ ಇನ್ಸ್ಟಾಗ್ರಾಮ್‌ನಲ್ಲೂ ಹಂಚಿಕೊಂಡಿದ್ದಾರೆ. "ಸದಾ ಉದ್ದೇಶಪೂರ್ವಕವಾಗಿರುವುದು ನನ್ನ ನನ್ನ ಅಸ್ತಿತ್ವದ ಮೂಲವಾಗಿದೆ. ನನ್ನ ನೈಜತೆಯನ್ನು ಸಂತೋಷದಿಂದ ಬದುಕುವುದು ಮತ್ತು ಕಲಿಯುವುದನ್ನು ಮುಂದುವರಿಸುವುದು ನನ್ನ ಪ್ರಯತ್ನವಾಗಿದೆ.. ಜೀವನ ಮತ್ತು ಕಲಿಕೆಯ ಮತ್ತೊಂದು ಅನುಭವವನ್ನು ಹಂಚಿಕೊಳ್ಳುವುದು.. ಈ ಬಾರಿ @ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ" ಎಂದು ಇರಾನಿ ಬರೆದುಕೊಂಡಿದ್ದಾರೆ. 

 

The pandemic with its challenges also presented an opportunity to learn, to live a fulfilled life; after enjoyed my learning at .. making time to upskill is a joy indeed. pic.twitter.com/mzbLnb6bKN

— Smriti Z Irani (@smritiirani)

 

ನವೆಂಬರ್ 2021 ರಲ್ಲಿ, ಇರಾನಿ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ 'Berkeley Fintech: Frameworks, Applications and Strategies' ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಬಗ್ಗೆ ತಿಳಿಸಿದ್ದರು.  

ಸ್ಮೃತಿ ಇರಾನಿ ಅವರು ಮಾಜಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದಾರೆ. ಅವರು ಪ್ರಸ್ತುತ ಮೇ 2019 ರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದಾರೆ. ಹಿರಿಯ ಬಿಜೆಪಿ ನಾಯಕರಾದ ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ಅಮೇಥಿಯ ಸಂಸದೀಯ ಕ್ಷೇತ್ರದ ಪ್ರತಿನಿಧಿಯೂ ಆಗಿದ್ದಾರೆ.

ಇದನ್ನೂ ಓದಿ: UP Elections: ನಾನು ಸೋತರು ಅಮೇಠಿ ಜನರೊಂದಿಗಿದ್ದೆ, ಅವರು ಗೆದ್ದರೂ ಓಡಿಹೋದರು: ರಾಹುಲ್‌ಗೆ ಸ್ಮೃತಿ ಟಾಂಗ್!

ಮಣಿಪುರದ ಕಲಾವಿದರೊಂದಿಗೆ ಸಖತ್ ಸ್ಟೆಪ್‌ ಹಾಕಿದ ಸಚಿವೆ ಸ್ಮೃತಿ ಇರಾನಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶುಕ್ರವಾರ (ಫೆ.18)ಮಣಿಪುರದಲ್ಲಿ (Manipur)ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶಿಸುವ ಕಲಾವಿದರೊಂದಿಗೆ  ಸಖತ್‌ ಆಗಿ ಡಾನ್ಸ್‌ ಮಾಡಿದರು.ಇಂಫಾಲ್‌ನ (Imphal)ಪೂರ್ವ ಭಾಗದಲ್ಲಿರುವ ವಾಂಗ್‌ಖೈ ( Wangkhei) ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವೆ ಇರಾನಿ  ಕಲಾವಿದರೊಂದಿಗೆ ಮಣಿಪುರದ ಸಾಂಪ್ರದಾಯಿಕ ನೃತ್ಯ ಮಾಡುವ ಎಲ್ಲರ ಗಮನ ಸೆಳೆದರು.

ಸಚಿವೆ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಣಿಪುರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಸ್ಮೃತಿ ಇರಾನಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಪರ ಮಣಿಪುರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಮಣಿಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ಗುರುವಾರವಷ್ಟೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು, ಪ್ರಣಾಳಿಕೆಯಲ್ಲಿ ಪ್ರತಿಭಾವಂತ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನದ ಭರವಸೆಯನ್ನು ಬಿಜೆಪಿ ನೀಡಿದೆ. ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಯನ್ನು 1,000 ರೂ.ಗೆ ಹೆಚ್ಚಿಸುವುದು ಮತ್ತು ರೂ 100 ಕೋಟಿ ಆರಂಭಿಕ ನಿಧಿಯನ್ನು ಸ್ಥಾಪಿಸುವುದು. 

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ರಾಣಿ ಗೈದಿಂಲಿಯು ನೂಪಿ ಮಹೈರೋಯ್ ಸಿಂಗಿ ಯೋಜನೆ' ಅಡಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಹೆಣ್ಣುಮಕ್ಕಳಿಗೆ ರೂ 25,000 ನೀಡುವುದು ಸೇರಿದಂತೆ ಹಲವು ಯೋಜನೆಗಳ  ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

click me!