* ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿದ್ದ ವಿಮಾನಯಾನ
* 2 ವರ್ಷಗಳ ಬಳಿಕ ಸಾಮಾನ್ಯ ಅಂ.ವಿಮಾನ ಸಂಚಾರ ಶುರು
ನವದೆಹಲಿ(ಮಾ.27): ಕೋವಿಡ್ ಸಾಂಕ್ರಾಮಿಕದಿಂದಾಗಿ 2 ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ಭಾನುವಾರದಿಂದ ಪುನಾರಂಭಗೊಳ್ಳಲಿದೆ. ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕೋವಿಡ್ ಪೂರ್ವದಲ್ಲಿದ್ದಂತೆ ಎಲ್ಲಾ ವಿಮಾನ ಸೇವೆಯನ್ನು ಪುನಾರಂಭಿಸಲಾಗುವುದು ಎಂದು ವಿಮಾನಯಾನ ಸಚಿವಾಲಯ ಹೇಳಿದೆ.
ಕೋವಿಡ್ ಮೊದಲ ಅಲೆಯ ವೇಳೆ 2020ರ ಮಾ.23ರಂದು ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ನಂತರ 2020ರ ಜುಲೈನಲ್ಲಿ 37 ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡು ಏರ್ ಬಬಲ್ ವ್ಯವಸ್ಥೆಯಡಿ ವಿಮಾನ ಸೇವೆ ಪುನಾರಂಭಿಸಲಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲೇ ವಿಮಾನಯಾನ ಪುನಾರಂಭಿಸುವುದಾಗಿ ವಿಮಾನಯಾನ ಸಚಿವಾಲಯ ಹೇಳಿದ್ದರೂ ಕೋವಿಡ್ ಮೂರನೇ ಅಲೆ ಗರಿಷ್ಠ ಮಟ್ಟತಲುಪಿದ್ದರಿಂದ ಮತ್ತೊಮ್ಮೆ ಮುಂದೂಡಲಾಗಿತ್ತು.
ಈಗ ಕೋವಿಡ್ ಕೋವಿಡ್ ಪೂರ್ವದಲ್ಲಿದ್ದಂತೆ ಎಲ್ಲಾ ದೇಶಗಳಿಗೂ ವಿಮಾನಯಾನ ಸೇವೆ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಆದರೆ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ದೇಶದ ಗಡಿಯೊಳಗೆ ಹಾರಾಟ ನಡೆಸುವ ವಿಮಾನಗಳಿಗೆ 2021ರ ಅ.18ರಂದು ಅನುಮತಿ ನೀಡಲಾಗಿತ್ತು.
ಲಾಭ ಏನು?
ಭಾರತ ಒಪ್ಪಂದ ಮಾಡಿಕೊಂಡಿರುವ ಬಹುತೇಕ ಎಲ್ಲಾ ದೇಶಗಳಿಗೆ ಮರಳಿ ವಿಮಾನ ಸಂಚಾರ
ಹೆಚ್ಚಿನ ವಿಮಾನ ಸಂಚಾರದ ಕಾರಣ, ಗಗನಕ್ಕೇರಿರುವ ಟಿಕೆಟ್ ಬೆಲೆ ಇಳಿಯುವ ಆಶಾಭಾವನೆ
ನೇರ ಸಂಪರ್ಕ ಲಭ್ಯವಾಗುವ ಕಾರಣ, ಸುತ್ತಿಬಳಸಿ ವಿವಿಧ ದೇಶಗಳಿಗೆ ಪ್ರಯಾಣ ಬೇಕಾಗಿಲ್ಲ