ಗುಜರಾತ್‌ನ ದೇಶದ ಮೊದಲ ‘ಸ್ಟೀಲ್‌ ರೋಡ್‌’: ಮಳೆಯಿಂದ ಹಾನಿ ಇಲ್ಲ, ಹೆಚ್ಚು ಕಾಲ ಬಾಳಿಕೆ

Published : Mar 27, 2022, 07:53 AM IST
ಗುಜರಾತ್‌ನ ದೇಶದ ಮೊದಲ ‘ಸ್ಟೀಲ್‌ ರೋಡ್‌’: ಮಳೆಯಿಂದ ಹಾನಿ ಇಲ್ಲ, ಹೆಚ್ಚು ಕಾಲ ಬಾಳಿಕೆ

ಸಾರಾಂಶ

* ಕಾರ್ಖಾನೆಗಳಿಂದ ಸಂಗ್ರಹಿಸಿದ ಸ್ಟೀಲ್‌ನಿಂದ ರಸ್ತೆ ನಿರ್ಮಾಣ * ಗುಜರಾತ್‌ನಲ್ಲಿ ಮೊದಲ ‘ಸ್ಟೀಲ್‌ ರೋಡ್‌’ * ಮಳೆಯಿಂದ ಹಾನಿಯಾಗುವುದಿಲ್ಲ, ಹೆಚ್ಚು ಕಾಲ ಬಾಳಿಕೆ

ನವದೆಹಲಿ(ಮಾ.27): ಸ್ಟೀಲ್‌ ತ್ಯಾಜ್ಯ ಬಳಸಿ ಗುಜರಾತ್‌ನ ಸೂರತ್‌ನಲ್ಲಿ 1 ಕಿ.ಮೀ ಉದ್ದದ ಸ್ಟೀಲ್‌ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆ ಇತರ ರಸ್ತೆಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವುದಲ್ಲದೇ, ಮಳೆಯಿಂದಲೂ ಹಾನಿಗೊಳಗಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇಂಥ ತ್ಯಾಜ್ಯ ಬಳಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಚಿಂತಿಸಲಾಗಿದೆ.

ದೇಶದಲ್ಲಿ ಪ್ರತಿ ವರ್ಷ 1.9 ಕೋಟಿ ಟನ್‌ ಸ್ಟೀಲ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇಂಥ ತ್ಯಾಜ್ಯ ಬಳಸಿಕೊಂಡೇ ಗುಜರಾತ್‌ನ ಹಾಜಿರಾ ಕೈಗಾರಿಕಾ ವಲಯದಲ್ಲಿ ಸುಮಾರು 1 ಕಿ.ಮೀ. ಉದ್ದದ 6 ಪಥಗಳ ರಸ್ತೆ ನಿರ್ಮಾಣ ಮಾಡಲಾಗಿದೆ. ಸಿಎಸ್‌ಐಆರ್‌ ಮತ್ತು ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆಗಳು ರಾಷ್ಟ್ರೀಯ ಉಕ್ಕು ಸಚಿವಾಲಯದ ಮತ್ತು ನೀತಿ ಆಯೋಗದ ಸಹಕಾರದೊಂದಿಗೆ ಈ ರಸ್ತೆ ನಿರ್ಮಾಣ ಮಾಡಿವೆ. ಪ್ರಾಯೋಗಿಕ ಯೋಜನೆ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಸ್ಟೀಲ್‌ ರಸ್ತೆಗಳನ್ನು ನಿರ್ಮಾಣದ ಯೋಜನೆ ರೂಪಿಸಲಾಗಿದೆ.

ದೇಶದಲ್ಲಿ ಪ್ರತಿವರ್ಷ 1.9 ಕೋಟಿ ಟನ್‌ನಷ್ಟುಸ್ಟೀಲ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. 2030ರವರೆಗೆ ಸುಮಾರು 5 ಕೋಟಿ ಟನ್‌ ತ್ಯಾಜ್ಯ ಉತ್ಪಾದನೆಯಾಗುವ ಸಾಧ್ಯತೆ ಇದೆ. ಹಾಗಾಗಿ ಉಂಟಾಗುತ್ತಿರುವ ತ್ಯಾಜ್ಯ ಬೆಟ್ಟವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!