ಭಾರತ ಪಾಕ್ ಗಲಾಟೆಯಿಂದ ಆಫ್ಘಾನಿಸ್ತಾನಕ್ಕೆ ನಷ್ಟ, ಯಾಕೆ ಗೊತ್ತಾ?

Published : May 01, 2025, 02:19 PM ISTUpdated : May 02, 2025, 11:45 AM IST
ಭಾರತ ಪಾಕ್ ಗಲಾಟೆಯಿಂದ ಆಫ್ಘಾನಿಸ್ತಾನಕ್ಕೆ ನಷ್ಟ, ಯಾಕೆ ಗೊತ್ತಾ?

ಸಾರಾಂಶ

ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತ-ಪಾಕ್ ವಾಯುಪ್ರದೇಶ ನಿಷೇಧ ಜಾರಿಯಲ್ಲಿದೆ. ಭಾರತೀಯ ವಿಮಾನಗಳ ಪಾಕ್ ಮಾರ್ಗ ಬಂದ್ ಆಗಿದ್ದರಿಂದ ಇಂಧನ ವೆಚ್ಚ, ಟಿಕೆಟ್ ದರ ಏರಿಕೆಯಾಗಿದೆ. ಅಫ್ಘಾನಿಸ್ತಾನಕ್ಕೆ ಆದಾಯ ನಷ್ಟವಾಗಿದ್ದು, ಭಾರತೀಯ ವಿಮಾನಗಳಿಂದ ಪ್ರತಿ ವಾರ ಸುಮಾರು 9.5 ಕೋಟಿ ರೂ. ಕಳೆದುಕೊಳ್ಳುತ್ತಿದೆ. ಪರ್ಯಾಯವಾಗಿ ಚೀನಾ ಮಾರ್ಗ ಅನ್ವೇಷಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಪಹಲ್ಗಾಮ್ (Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿ (terrorist attack) ನಂತ್ರ ಭಾರತ (India) ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉತ್ತುಂಗದಲ್ಲಿದೆ. ಭಾರತೀಯ ವಿಮಾನಗಳಿಗೆ ಪಾಕ್, ತನ್ನ ವಾಯುಪ್ರದೇಶ (Airspace)ವನ್ನು ಮುಚ್ಚಿದೆ. ಭಾರತ ಕೂಡ ಪಾಕ್ ಗೆ ತನ್ನ ವಾಯುಪ್ರದೇಶ ನಿಷೇಧಿಸಿದೆ.  ಆದ್ರೆ, ಭಾರತದ ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ಹೆಚ್ಚಿನ ವ್ಯತ್ಯಾಸವೇನಿಲ್ಲ. ಯಾಕೆಂದ್ರೆ  ಕೆಲವೇ ವಿಮಾನಗಳು ಭಾರತೀಯ ವಾಯುಪ್ರದೇಶದ ಮೂಲಕ ಹಾದು ಹೋಗುತ್ವೆ.  ಅದೇ ನೂರಾರು ಭಾರತೀಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಹಾದು ಹೋಗ್ತಿದ್ವು.  ಪಾಶ್ಚಿಮಾತ್ಯ ದೇಶ ಮತ್ತು ಮಧ್ಯ ಏಷ್ಯಾಕ್ಕೆ ಹೋಗ್ತಿದ್ದ ವಿಮಾನಗಳು ಈಗ ತಮ್ಮ ಮಾರ್ಗ ಬದಲಿಸಿವೆ. ಏರ್ ಇಂಡಿಯಾ ಮತ್ತು ಇಂಡಿಗೊದಂತಹ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗ ಬದಲಾಯಿಸೋದ್ರಿಂದ ಇಂಧನದ ವೆಚ್ಚ ಹೆಚ್ಚಾಗಲಿದೆ.  ಟಿಕೆಟ್ ದರ ಕೂಡ ಏರಿಕೆ ಆಗಲಿದೆ. ಇದು ಒಂದ್ಕಡೆಯಾದ್ರೆ ಭಾರತ ಹಾಗೂ ಪಾಕ್ ನಿರ್ಧಾರದಿಂದ ಅಫ್ಘಾನಿಸ್ತಾನಕ್ಕೆ ಹೆಚ್ಚು ನಷ್ಟವಾಗಿದೆ.  

ಮಾಧ್ಯಮ ವರದಿ ಪ್ರಕಾರ, ಪ್ರತಿ ವಾರ ಭಾರತೀಯ ವಿಮಾನಯಾನ ಸಂಸ್ಥೆಗಳ 800 ಕ್ಕೂ ಹೆಚ್ಚು ವಿಮಾನಗಳು ಅಫ್ಘಾನಿಸ್ತಾನದ ವಾಯುಪ್ರದೇಶದ ಮೂಲಕ ಹಾದು ಹೋಗುತ್ವೆ.  ಆದ್ರೆ ಪಾಕಿಸ್ತಾನದ ವಾಯುಪ್ರದೇಶ ಮುಚ್ಚಿರೋದ್ರಿಂದ, ಭಾರತೀಯ ವಿಮಾನಗಳು ಇನ್ನು ಮುಂದೆ ಅಫ್ಘಾನಿಸ್ತಾನದ ಮೇಲೆ ಹಾರೋದಿಲ್ಲ. ಇದು ಅಫ್ಘಾನಿಸ್ತಾನಕ್ಕೆ ನಷ್ಟ.  ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಪ್ರತಿ ವಿಮಾನಕ್ಕೆ 700 ಡಾಲರ್ ಶುಲ್ಕ ವಿಧಿಸುತ್ತೆ.  ತಾಲಿಬಾನ್ ಭಾರತೀಯ ವಿಮಾನಯಾನ ಕಂಪನಿಗಳಿಂದ ಪ್ರತಿ ವಾರ  11,20,000 ಡಾಲರ್ ಅಂದರೆ ಸುಮಾರು 9.5 ಕೋಟಿ ರೂಪಾಯಿ ವಸೂಲಿ ಮಾಡ್ತಿತ್ತು. 

2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬರೋ ಮೊದಲು,  ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ, ಅಫ್ಘಾನಿಸ್ತಾನ ವಾಯುಯಾನ ಪ್ರಾಧಿಕಾರದ ಪರವಾಗಿ ಶುಲ್ಕ ಸಂಗ್ರಹಿಸುತ್ತಿತ್ತು.  ಸೆಪ್ಟೆಂಬರ್ 2021 ರಿಂದ ಈ ಸೇವೆಯನ್ನು ನಿಲ್ಲಿಸಿದೆ. ಅಫ್ಘಾನಿಸ್ತಾನ ಸರ್ಕಾರದ ಲಕ್ಷಾಂತರ ಡಾಲರ್ ಖಾತೆಯಲ್ಲಿ ಫ್ರಿಜ್ ಆಗಿದೆ.  ವಿಮಾನಯಾನ ಸಂಸ್ಥೆಗಳು ಮತ್ತು ಖಾಸಗಿ ಜೆಟ್ ನಿರ್ವಾಹಕರು ಮೂರನೇ ವ್ಯಕ್ತಿಗಳ ಮೂಲಕ ತಾಲಿಬಾನ್ ಸರ್ಕಾರಕ್ಕೆ ಈಗ ಹಣ ಪಾವತಿಸ್ತಾರೆ.  ಅಫ್ಘಾನಿಸ್ತಾನ ಸರ್ಕಾರ ಪ್ರತಿ ತಿಂಗಳು ಸುಮಾರು 6 ಮಿಲಿಯನ್ ಡಾಲರ್ ಗಳಿಸುತ್ತದೆ.

ಪಾಕಿಸ್ತಾನದ ವಾಯುಪ್ರದೇಶ ಮುಚ್ಚಿರುವುದರಿಂದ, ಉತ್ತರ ಭಾರತದಿಂದ ಯುರೋಪ್ ಮತ್ತು ಉತ್ತರ ಅಮೆರಿಕಾಕ್ಕೆ ಹೋಗುವ ವಿಮಾನಗಳು ಅಹಮದಾಬಾದ್ ಮೂಲಕ ಸಂಚರಿಸುತ್ತಿವೆ. ನಂತ್ರ  ಅರೇಬಿಯನ್ ಸಮುದ್ರದ ಮೇಲೆ ಮಸ್ಕತ್ ಕಡೆಗೆ ತಿರುಗಿ ಅಲ್ಲಿಂದ ತಮ್ಮ ಗಮ್ಯಸ್ಥಾನವನ್ನು ತಲುಪುತ್ವೆ.  ಸದ್ಯ ಮಧ್ಯ ಏಷ್ಯಾಕ್ಕೆ ವಿಮಾನಗಳ ಹಾರಾಟ  ಸ್ಥಗಿತಗೊಂಡಿದೆ, ಸುಮಾರು 50 ಮಾರ್ಗಗಳ ಮೇಲೆ ಇದ್ರಿಂದ ಪರಿಣಾಮ ಬೀರಿದೆ ಎಂದು  ಇಂಡಿಗೋ ತಿಳಿಸಿದೆ.

ಪರ್ಯಾಯ ಮಾರ್ಗ :  ಪಾಕಿಸ್ತಾನದ ವಾಯುಪ್ರದೇಶ ಮುಚ್ಚಿದ ನಂತ್ರ, ತಜ್ಞರು ಭಾರತೀಯ ವಿಮಾನಯಾನ ಸಂಸ್ಥೆಗಳು ಕೆಲವು ಆಯ್ಕೆಗಳನ್ನು ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. 2021 ರಲ್ಲಿ, ಏರ್ ಇಂಡಿಯಾ ವೈಮಾನಿಕ ಪಟ್ಟಿಯಲ್ಲಿ 'ಪಾಪಾ 500' ಎಂದು ಗುರುತಿಸಲಾದ ಮಾರ್ಗದಲ್ಲಿ ಹಾರಾಟ ನಡೆಸಲಾಗ್ತಿದೆ.  ಆದ್ರೆ ಈ ಮಾರ್ಗದಲ್ಲಿ ವಿಮಾನವು ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ಮೇಲೆ ಹಾದು ಹೋಗಬೇಕಾಗುತ್ತದೆ. ಈಗ ಇದನ್ನು ತಪ್ಪಿಸಬೇಕು. ಇದರರ್ಥ ವಿಮಾನವು ಮತ್ತಷ್ಟು ಉತ್ತರಕ್ಕೆ ಹಾರಬೇಕು ಮತ್ತು ಚೀನಾದ ವಾಯುಪ್ರದೇಶವನ್ನು ಪ್ರವೇಶಿಸಬೇಕಾಗುತ್ತದೆ. ಈ ಮಾರ್ಗದ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ವಿಮಾನಯಾನ ಸಂಸ್ಥೆಗಳನ್ನು ಕೇಳಲಾಗಿದೆ .  ನಂತ್ರ ಚೀನಾ ಅನುಮತಿ ಪಡೆಯಲಾಗುವುದು. ಒಂದ್ವೇಳೆ ಇದು ಸಾಧ್ಯವಾದ್ರೆ ಯುರೋಪ್ ಮತ್ತು ಅಮೆರಿಕಕ್ಕೆ ನೇರ ವಿಮಾನಗಳನ್ನು ತಡೆರಹಿತವಾಗಿ  ಹಾರಿಸ್ಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..