‘ಭಾರತವನ್ನು ತಾಯಿ ಎನ್ನಲೋ, ತಂದೆ ಎನ್ನಲೋ?’: ಆಫ್ಘನ್‌ ಸಿಖ್‌ ಭಾವುಕ ಧನ್ಯವಾದ

By Suvarna NewsFirst Published Jul 29, 2020, 2:27 PM IST
Highlights

ಹಿಂದುಸ್ತಾನದ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ| ಆಶ್ರಯ ನೀಡಿದ ಭಾರತಕ್ಕೆ ಆಫ್ಘನ್‌ ಸಿಖ್‌ ಭಾವುಕ ಧನ್ಯವಾದ| ‘ಭಾರತವನ್ನು ತಾಯಿ ಎನ್ನಲೋ, ತಂದೆ ಎನ್ನಲೋ?’

ನವದೆಹಲಿ(ಜು.29): ಒಂದು ತಿಂಗಳ ಹಿಂದೆ ಅಷ್ಘಾನಿಸ್ತಾನದ ಗುರುದ್ವಾರದಿಂದ ಅಪಹೃತವಾಗಿ, ಇತ್ತೀಚೆಗಷ್ಟೆಬಿಡುಗಡೆಗೊಂಡಿದ್ದ ನಿದಾನ್‌ ಸಿಂಗ್‌ ಸಚ್‌ದೇವ ಅವರು ಭಾರತ ಸರ್ಕಾರದ ಸಹಾಯದಿಂದ ಭಾನುವಾರ ದೆಹಲಿಗೆ ಬಂದಿಳಿದಿದ್ದು, ‘ತಾಯ್ನಾಡಿಗೆ’ ಮರಳಲು ನೆರವು ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಪಾಕ್‌ನ 6000ಕ್ಕೂ ಹೆಚ್ಚು ಉಗ್ರರು!

ತಾಲಿಬಾನಿ ಉಗ್ರರಿಂದ ಜೀವ ಬೆದರಿಕೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ನಿದಾನ್‌ ಸಿಂಗ್‌ ಅವರನ್ನೂ ಒಳಗೊಂಡಂತೆ 11 ಮಂದಿ ಅಷ್ಘಾನಿಸ್ತಾನದ ಸಿಖ್ಖರಿಗೆ ಕಾಬೂಲ್‌ ಭಾರತೀಯ ರಾಯಭಾರ ಕಚೇರಿಯು ಅಲ್ಪಾವಧಿ ವೀಸಾವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಈ 11 ಜನರು ಭಾನುವಾರ ಮಧ್ಯಾಹ್ನ ದೆಹಲಿಗೆ ಬಂದಿಳಿದರು.

ಆಫ್ಘಾನ್ ಹಿಂದೂ, ಸಿಖ್ಖರಿಗೆ ಆಶ್ರಯ ನೀಡಿದ ಭಾರತ ನಿರ್ಧಾರ ಹೊಗಳಿದ ಅಮೆರಿಕ ಕಾಂಗ್ರೆಸ್ಸಿಗ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚ್‌ದೇವ, ‘ಹಿಂದುಸ್ತಾನದ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ತಂದೆ ಎನ್ನಬೇಕೋ, ತಾಯಿ ಎನ್ನಬೇಕೋ ಕಾಣೆ. ಹಿಂದುಸ್ತಾನ ಹಿಂದುಸ್ತಾನವೇ’ ಎಂದು ಭಾವನಾತ್ಮಕ ನುಡುಗಳನ್ನಾಡಿದ್ದಾರೆ. ಇದೇ ವೇಳೆ ಅಪಹರಣಕಾರರು ಮರಕ್ಕೆ ಕಟ್ಟಿ, ರಕ್ತ ಸುರಿಯುವಂತೆ ಹೊಡೆದು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕಿರುಕುಳ ನೀಡಿದ್ದರು ದೂರಿದ್ದಾರೆ.

click me!