ಏರ್‌ ಶೋದಿಂದಾಗಿ ಮತ್ತಷ್ಟು ಹದಗೆಟ್ಟ ಬೆಂಗಳೂರು ಟ್ರಾಫಿಕ್: ರಸ್ತೆಯಲ್ಲೇ ಗಂಟೆಗಟ್ಟಲೇ ಕಾದ ಗಣ್ಯರು

Published : Feb 11, 2025, 02:46 PM IST
ಏರ್‌ ಶೋದಿಂದಾಗಿ ಮತ್ತಷ್ಟು ಹದಗೆಟ್ಟ ಬೆಂಗಳೂರು ಟ್ರಾಫಿಕ್: ರಸ್ತೆಯಲ್ಲೇ ಗಂಟೆಗಟ್ಟಲೇ ಕಾದ ಗಣ್ಯರು

ಸಾರಾಂಶ

ನಗರದಲ್ಲಿ ಆರಂಭವಾಗಿರುವ ಏರ್‌ ಶೋ ವೀಕ್ಷಿಸಲು ನಗರದ ಮೂಲೆ ಮೂಲೆಯಿಂದ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳಿಂದಲೂ ಗಣ್ಯರು, ಜನರು ಬರುತ್ತಿರುವುದರಿಂದ ವಾಹನ ದಟ್ಟಣೆ ತೀವ್ರವಾಗಿದ್ದು, ರಸ್ತೆ ಮಧ್ಯೆಯೇ ಜನ ಗಂಟೆಗಟ್ಟಲೇ ಕಾಯುವಂತಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ 2025ರ ಏರ್‌ ಶೋದಿಂದಾಗಿ ಬೆಂಗಳೂರಿನ ಉತ್ತರ ಭಾಗದ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ. ಮೊದಲೇ ಸಾಮಾನ್ಯ ದಿನಗಳಲ್ಲೇ ಬೆಂಗಳೂರಿನ ಟ್ರಾಫಿಕ್‌ನಲ್ಲಿಯೇ ಜನರ ದಿನದ ಬಹು ಸಮಯ ಕಳೆದು ಹೋಗುತ್ತಿದೆ. ಆದರೆ ಹೀಗಿರುವಾಗ ನಿನ್ನೆಯಿಂದ ನಗರದಲ್ಲಿ ಆರಂಭವಾಗಿರುವ ಏರ್‌ ಶೋ ವೀಕ್ಷಿಸಲು ನಗರದ ಮೂಲೆ ಮೂಲೆಯಿಂದ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳಿಂದಲೂ ಗಣ್ಯರು, ಜನರು ಬರುತ್ತಿರುವುದರಿಂದ ವಾಹನ ದಟ್ಟಣೆ ತೀವ್ರವಾಗಿದ್ದು, ರಸ್ತೆ ಮಧ್ಯೆಯೇ ಜನ ಗಂಟೆಗಟ್ಟಲೇ ಕಾಯುವಂತಾಗಿದೆ. ಇಂದು 2ನೇ ದಿನ ಏರ್‌ ಶೋ ನಡೆಯುತ್ತಿದ್ದು, ಟ್ರಾಫಿಕ್ ದಟ್ಟಣೆಯಿಂದ ಆಕ್ರೋಶಗೊಂಡಿರುವ ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. 

ಪ್ರತಿಷ್ಠಿತ ವೈಮಾನಿಕ ಕಾರ್ಯಕ್ರಮದ ಎರಡನೇ ದಿನದಲ್ಲಿ ಭಾಗವಹಿಸಲು ಗಣ್ಯರು ಆಗಮಿಸಿರುವುದರಿಂದ ಸಾಮಾನ್ಯ ಜನರು ಕಷ್ಟಪಡುವಂತಾಗಿದೆ. ಉತ್ತರ ಬೆಂಗಳೂರಿನಲ್ಲಿ ತೀವ್ರ ಸಂಚಾರ ದಟ್ಟಣೆ ಇದ್ದು ಸಾವಿರಾರು ವಾಹನಗಳು ಅತ್ತ ಹೋಗಲು ಆಗದೇ ಇತ್ತ ಬರಲು ಆಗದೇ ರಸ್ತೆ ಮಧ್ಯೆ ಸಿಲುಕಿಕೊಂಡವು, ನಗರದ ಸಂಚಾರ ನಿರ್ವಹಣೆಯ ಅಧಿಕಾರಿಗಳು ಟ್ರಾಫಿಕ್ ಪೊಲೀಸರು ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಹೆಣಗಾಡಿದರು. 

ಗಂಟೆಗಟ್ಟಲೆ ರಸ್ತೆಯಲ್ಲೇ ಕಾದ ಗಣ್ಯರು
ಈ ಟ್ರಾಫಿಕ್ ನಿರ್ವಹಣೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಬೇಸರ ವ್ಯಕ್ತಪಡಿಸಿದ್ದಾರೆ. ಬ್ಯುಸಿನೆಸ್ ಡೆಲಿಗೇಟ್ ಆಗಿ ಈ ಏರ್‌ ಓಗೆ ಆಗಮಿಸಿದ ವಿಕ್ರಮ್ ಲಿಮ್ಸೆ ಎಂಬುವವರು ಟ್ವಿಟ್ಟರ್‌ನಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.  '#AeroIndia2025 ಶೋಗೆ ಕಳೆದ 3 ಗಂಟೆಗಳಿಂದ ಬ್ಯುಸಿನೆಸ್ ಡೆಲಿಗೇಟ್ ಆಗಿ ಬರಲು ಪ್ರಯತ್ನಿಸುತ್ತಿದ್ದೇನೆ ಇದೊಂದು ಕೆಟ್ಟ ಟ್ರಾಪಿಕ್ ಜಾಮ್ ಹಾಗೂ ಅತ್ಯಂತ ಕೆಟ್ಟ ಟ್ರಾಫಿಕ್ ನಿರ್ವಹಣೆ ' ಎಂದು ಅವರು ಬರೆದುಕೊಂಡಿದ್ದಾರೆ.

ಈ ಟ್ರಾಫಿಕ್‌ನಿಂದಾಗಿ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ಬರುವ ಕುಖ್ಯಾತಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು, ಇಂತಹ ಪುನರಾವರ್ತಿತ ಸಂಚಾರ ಅವ್ಯವಸ್ಥೆಯು ಸಮಾವೇಶ ಕೇಂದ್ರದ ನಿರೀಕ್ಷೆಗಳಿಗೆ ಅಡ್ಡಿಯಾಗಬಹುದು ಎಂದ ಅವರು ನಗರವನ್ನು ದುಬೈ ಮತ್ತು ಸಿಂಗಾಪುರಕ್ಕೆ ಹೋಲಿಸಿ, ನಗರದಲ್ಲಿರುವ ಯೋಜನೆ ಮತ್ತು ದೂರದೃಷ್ಟಿಯ ಕೊರತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಬೆಂಗಳೂರಿನ ಸಾಮರ್ಥ್ಯವನ್ನು ಪ್ರಶ್ನೆ ಮಾಡಿದ್ದಾರೆ. 

ಕೆಲವರು ಕೋಟ್ಯಂತರ ಸಂಖ್ಯೆಯಲ್ಲಿ ಸೇರುವ ಕುಂಭಮೇಳದಲ್ಲಿ ಜನರ ನಿರ್ವಹಣೆಯ ಬಗ್ಗೆ ಮಾತನಾಡುತ್ತಾರೆ. ಪ್ರಯಾಗ್‌ರಾಜ್‌ನಲ್ಲಿ ಟ್ರಾಪಿಕ್ ಜಾಮ್ ಬಗ್ಗೆ ದೂರುವವರು ತಮ್ಮ ಬೆಂಗಳೂರಿನಲ್ಲಿರುವ ಸ್ನೇಹಿತರಿಗೆ ಕರೆ ಮಾಡಿ 100ನೇ 1 ಭಾಗದಷ್ಟು ಜನಸಂದಣಿಯೊಂದಿಗೆ  ಏರ್ ಶೋನಿಂದ ಉಂಟಾದ ಬೃಹತ್ ಅಡಚಣೆಯ ಬಗ್ಗೆ ಕೇಳಬೇಕು ಎಂದು ಹೇಳಿದ್ದಾರೆ. 

ಒಟ್ಟಿನಲ್ಲಿ ಇಂದಿನ ಏರ್‌ ಶೋದಲ್ಲಿ ಗಣ್ಯರ ಭೇಟಿಯಿಂದಾಗಿ ಉತ್ತರ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ತೀವ್ರವಾಗಿದ್ದು, ಜನ ಮನೆಯಿಂದ ಹೊರಗಿಳಿಯುವ ಮೊದಲು ಯೋಚನೆ ಮಾಡೋದೊಳಿತು. ಇಲ್ಲದಿದ್ದರೆ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಬೇಕಾದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು
ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌