
ಸಾಮಾನ್ಯವಾಗಿ ಭಾರತೀಯ ನಾಟಿ ಹಸುಗಳಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆಯಿದೆ. ಅದರಲ್ಲಿಯೂ ಹಿಂದೂ ಸಂಪ್ರದಾಯದಲ್ಲಿ ಗೋವುಗಳನ್ನು ದೇವರಂತೆ ಪೂಜೆ ಮಾಡುವ ಹಿನ್ನೆಲೆಯಲ್ಲಿ ಆಯಾ ಭೌಗೋಳಿಕ ವಿನ್ಯಾಸಕ್ಕೆ ತಕ್ಕಂತೆ ಹಸುಗಳ ತಳಿಯೂ ವಿಭಿನ್ನವಾಗಿವೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹರಾಷ್ಟ್ರ, ಒಡಿಶಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ತಳಿಗಳ ಹಸುಗಳಿರುತ್ತವೆ. ಆದರೆ, ಇದೀಗ ಭಾರತದ ಆಂಧ್ರಪ್ರದೇಶದ ನೆಲ್ಲೂರು ತಳಿಯ ಹಸುವೊಂದು ಬರೋಬ್ಬರಿ 40 ಕೋಟಿ ರೂ.ಗೆ ಮಾರಾಟವಾಗಿದೆ. ಇದು ಆನೆಯ ಗಾತ್ರವನ್ನು ಹೊಂದಿದ್ದು, ಗಿನ್ನೆಸ್ ದಾಖಲೆಯನ್ನು ಬರೆದಿದೆ.
ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ 40 ಕೋಟಿ ರೂ.ಗೆ ಮಾರಾಟವಾದ ಭಾರತೀಯ ತಳಿಯ ನೆಲ್ಲೂರು ಹಸು, ಗಿನ್ನೆಸ್ ವಿಶ್ವ ದಾಖಲೆ ಪಡೆದಿದೆ. ವಿಶ್ವದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಹಸುವಿನ ದಾಖಲೆ ಇದಾಗಿದೆ. ವಯಟೀನಾ-19 ಎಂಬ ಈ ನೆಲ್ಲೂರು ಹಸುವಿನ ತೂಕ 1101 ಕೆ.ಜಿ. ಆಗಿದೆ. ಸಾಮಾನ್ಯ ನೆಲ್ಲೂರು ಹಸುವಿನ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ತೂಕವನ್ನು ವಯಟೀನಾ-19 ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. 53 ತಿಂಗಳ ವಯಸ್ಸಿನ (4.5 ವರ್ಷದ) ವಯಟೀನಾ-19ರ ಹಸು ಸುಂದರವಾದ ಬಿಳಿ ಕೂದಲು, ಸಡಿಲವಾದ ಚರ್ಮ ಮತ್ತು ಬೆನ್ನಿನ ಮೇಲಿನ ಗೂನು ಇದರ ಪ್ರಮುಖ ಆಕರ್ಷಣೆಗಳಾಗಿವೆ. ಆದ್ದರಿಂದಲೇ ಈ ಗೂಳಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು, ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿ ನಡೆದ 'ಚಾಂಪಿಯನ್ ಆಫ್ ದಿ ವರ್ಲ್ಡ್' ಸ್ಪರ್ಧೆಯಲ್ಲಿ ವಯಟೀನಾ-19 ಮಿಸ್ ಸೌತ್ ಅಮೇರಿಕಾ ಪ್ರಶಸ್ತಿಯನ್ನು ಗೆದ್ದಿತ್ತು. ವಿವಿಧ ದೇಶಗಳಿಂದ ಬಂದ ಹೋರಿ ಮತ್ತು ಹಸುಗಳು ಸ್ಪರ್ಧಿಸುವ ಮಿಸ್ ಯೂನಿವರ್ಸ್ ಮಾದರಿಯ ಜಾನುವಾರು ಸ್ಪರ್ಧೆ ಇದಾಗಿದೆ.
ಇದನ್ನೂ ಓದಿ: ತುಂಬಿ ತುಳುಕಿದ ಕುಂಭ ಮೇಳದ ರೈಲು: ಲೋಕೋ ಪೈಲಟ್ ಇರುವ ಜಾಗಕ್ಕೂ ನುಗ್ಗಿದ ಜನ
ಉಷ್ಣವಲಯದ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಹೆಸರುವಾಸಿಯಾದ ತಳಿ ನೆಲ್ಲೂರು ಹಸು. ಆದ್ದರಿಂದಲೇ ವಯಟೀನಾ-19ರ ಭ್ರೂಣಗಳಿಗೆ ಸಂತಾನೋತ್ಪತ್ತಿಗಾಗಿ ಜಾಗತಿಕವಾಗಿ ಹೆಚ್ಚಿನ ಬೇಡಿಕೆಯಿದೆ. ವಿಶ್ವದಲ್ಲಿ ನೆಲ್ಲೂರು ಹಸುಗಳನ್ನು ಹೆಚ್ಚು ಉತ್ಪಾದಿಸುವ ದೇಶ ಬ್ರೆಜಿಲ್. ಅಮೆರಿಕ, ಮೆಕ್ಸಿಕೊ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಬ್ರೆಜಿಲ್‌ನಲ್ಲಿರುವ ಕನಿಷ್ಠ 80 ಪ್ರತಿಶತ ಹಸುಗಳು ಜೆಬು ಹಸುಗಳಾಗಿವೆ. ಇದು ಭಾರತದಲ್ಲಿ ಹುಟ್ಟಿಕೊಂಡ ಒಂದು ಉಪಜಾತಿಯಾಗಿದ್ದು, ಅದರ ಗೂನು ಮತ್ತು ಡ್ಯೂಲ್ಯಾಪ್‌ನಿಂದ ಗುರುತಿಸಲ್ಪಟ್ಟಿದೆ. ವಿಯಾಟಿನಾ-19 ನೆಲ್ಲೂರು ತಳಿಗೆ ಸೇರಿದ್ದು, ಇದನ್ನು ಒಂಗೋಲ್ ತಳಿ ಎಂದೂ ಕರೆಯುತ್ತಾರೆ. ಇದನ್ನು ಮೊದಲು 1800 ರ ದಶಕದಲ್ಲಿ ಬ್ರೆಜಿಲ್‌ಗೆ ತರಲಾಯಿತು. ಈ ತಳಿಯು ಭಾರತದ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ಹುಟ್ಟಿಕೊಂಡಿತು. ಕ್ರಿಶ್ಚಿಯನ್ ಯುಗಕ್ಕಿಂತ ಸುಮಾರು 2,000 ವರ್ಷಗಳ ಮೊದಲು ಆರ್ಯರು ಮೊದಲು ಪರಿಚಯಿಸಿದರು ಎಂದು ವರದಿಗಳು ಸೂಚಿಸುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ