ನ್ಯಾಯಾಲಯದ ಆವರಣದಲ್ಲೇ ವಕೀಲರ ಡಿಶ್ಯೂಂ ಡಿಶ್ಯುಂ... ವಿಡಿಯೋ ವೈರಲ್‌

By Anusha Kb  |  First Published Mar 15, 2023, 3:36 PM IST

ನ್ಯಾಯಾಲಯದ ಆವರಣದಲ್ಲೇ ವಕೀಲರು ಪರಸ್ಪರ ಹೊಡೆದಾಡಿಕೊಂಡ ಘಟನೆ ಗುಜರಾತ್‌ನ ದ್ವಾರಕಾದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಅಹ್ಮದಾಬಾದ್‌ : ನ್ಯಾಯಾಲಯದ ಆವರಣದಲ್ಲೇ ವಕೀಲರು ಪರಸ್ಪರ ಹೊಡೆದಾಡಿಕೊಂಡ ಘಟನೆ ಗುಜರಾತ್‌ನ ದ್ವಾರಕಾದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನ್ಯಾಯಾಲಯದ ಭದ್ರತಾ ಸಿಬ್ಬಂದಿ ಉಪಸ್ಥಿತಿಯಲ್ಲೇ ಇಬ್ಬರು ವಕೀಲರು ಹೊಡೆದಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯಿಂದಲೂ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ (Social Media) ಟ್ವಿಟ್ಟರ್‌ನಲ್ಲಿ Deadly Law ಎಂಬ ಹೆಸರಿನ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಏನಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಇಬ್ಬರು ಕಿತ್ತಾಡುತ್ತಿದ್ದರೆ ಅವರಲ್ಲಿ ಒಬ್ಬರಿಗೆ ವಕೀಲನೋರ್ವ ಕೆನ್ನೆಗೆ ಬಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಹಲವರು ಈ ಹೊಡೆದಾಟವನ್ನು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದು, ಒಬ್ಬರೂ ಕೂಡ ಜಗಳ ಬಿಡಿಸಲು ಮುಂದಾಗಿಲ್ಲ. 

Tap to resize

Latest Videos

ದೆಹಲಿ ಪಾಲಿಕೆಯಲ್ಲಿ ರಾತ್ರಿಯಿಡೀ ಹೊಡೆದಾಟ: -ಚಪ್ಪಲಿ, ಬಾಟಲಿ, ಅರೆಬರೆ ತಿಂದ ಸೇಬು ಎಸೆದು ಕಿತ್ತಾಟ

ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಒಬ್ಬರು ಬಳಕೆದಾರರು ಈ ಘಟನೆಗೆ ನಾನು ಪ್ರತ್ಯಕ್ಷದರ್ಶಿಯಾಗಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೇಳೆ ಇತರ ಬಳಕೆದಾರರು ಅಲ್ಲಿ ನಡೆದಿದ್ದೇನು ಎಂದು ಅವರನ್ನು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಅಸಮಾಧಾನಗೊಂಡಿದ್ದ ಕಕ್ಷಿದಾರನೋರ್ವ  ಜಗಳ ಶುರು ಮಾಡಿದ್ದು, ಅದನ್ನು ವಕೀಲ ತಮ್ಮದೇ ಸ್ಟೈಲ್‌ನಲ್ಲಿ ಕೊನೆಗೊಳಿಸಿದ್ದಾರೆ ಎಂದರು. 

ಪೊಲೀಸರ ಪ್ರಕಾರ, ಈ ವಿಚಾರವನ್ನು ಕೋರ್ಟ್ ಸಿಬ್ಬಂದಿ ಪೊಲೀಸರ ಗಮನಕ್ಕೂ ತಂದಿದ್ದು, ಈ ಗಲಾಟೆಯಲ್ಲಿ ಮಹಿಳಾ ಆಡ್ವೋಕೇಟ್ ಕೂಡ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಗಲಾಟೆಯಿಂದ ಗಾಯಗೊಂಡವರನ್ನು ವೈದ್ಯಕೀಯ ತಪಾಸಣೆಗೆ (medical examination) ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಸೀಟಿಗಾಗಿ ಬಸ್‌ನಲ್ಲಿ ಮಹಿಳೆಯರ ರಸ್ಲಿಂಗ್‌: ಜುಟ್ಟು ಜುಟ್ಟು ಹಿಡಿದು ಹೊಡೆದಾಟ

ಬಸ್‌ ರೈಲುಗಳಲ್ಲಿ ಸೀಟಿಗಾಗಿ ಪರಸ್ಪರ ಕಿತ್ತಾಡುವ ವೀಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಸೀಟಿಗಾಗಿ ಬಸ್‌ನಲ್ಲಿ ಮಹಿಳೆ ಹಾಗೂ ಯುವತಿ ಮಧ್ಯೆ ದೊಡ್ಡ ಕಾಳಗ ನಡೆದಿದೆ. ಇದರ ವಿಡಿಯೋ ಕೆಲದಿನಗಳ ಹಿಂದೆ ವೈರಲ್ ಆಗಿತ್ತು.  ಇಬ್ಬರು ಜುಟ್ಟು ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ. 61 ಸಾವಿರಕ್ಕೂ  ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮಹಿಳೆ ಹಾಗೂ ಹುಡುಗಿ ಇಬ್ಬರೂ ಕೂದಲನ್ನು ಪರಸ್ಪರ ಎಳೆದಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 

ಇಬ್ಬರು ಮಹಿಳೆಯರು (Women) ಪರಸ್ಪರ ವಾದ ಪ್ರತಿವಾದ ಮಾಡುತ್ತಾ ಒಬ್ಬರನ್ನೊಬ್ಬರು ಎಳೆದಾಡಿಕೊಂಡು ಹೊಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಅವರ ಜಗಳ ಬಿಡಿಸಲು ಪ್ರಯತ್ನಿಸುತ್ತಾರಾದರೂ ಆದರೆ ಅವರ ಹೊಡೆದಾಟವನ್ನು ಯಾರಿಗೂ ನಿಲ್ಲಿಸಲಾಗಿಲ್ಲ. ಬಸ್‌ನಲ್ಲಿದ್ದ ಎಲ್ಲರೂ ಈ ಇಬ್ಬರನ್ನು ರಸ್ಲಿಂಗ್ ಫೈಟ್ ನೋಡುವಂತೆ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.  ಯಾರೂ ಏನೇ ಮಾಡಿದರೂ ಇವರ ಜಗಳವನ್ನು ಯಾರಿಗೂ ನಿಲ್ಲಿಸಲಾಗಿಲ್ಲ. ಕೊನೆಗೆ ಇಬ್ಬರು ಮಹಿಳಾ ಪೊಲೀಸರು ಬಸ್ ಏರಿ ಈ ಇಬ್ಬರು ಜಗಳಗಂಟಿಯರನ್ನು ಕೆಳಗೆ ಇಳಿಸಿದ್ದಾರೆ. ಅಲ್ಲೂ ಕೂಡ ಇವರು ಹೊಡೆದಾಡಲು ಶುರು ಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ಹಾಗೂ ಇಬ್ಬರು ಮಹಿಳಾ ಪೊಲೀಸರು ಅವರನ್ನು ತಡೆಯುತ್ತಿರುವುದನ್ನು ಕಾಣಬಹುದು. 

ಮದುವೆ ಆರತಕ್ಷತೆಯಲ್ಲಿ ರಸಗುಲ್ಲಕ್ಕೆ ಹೊಡೆದಾಟ, ವಧುವಿನ ಸಂಬಂಧಿಯ ಕೊಲೆ!

ಹೊಡೆದಾಟದ ಜೊತೆ ಬೊಬ್ಬೆ ಕೂಡ ವಿಡಿಯೋದಲ್ಲಿ ಕೇಳಬಹುದಾಗಿದೆ. ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋವನ್ನು ಘರ್ ಕೇ ಕಲೇಶ್ ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ರೀತಿ ಜಗಳ ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌ನಲ್ಲಿ ಮಹಿಳೆಯರು ಜಗಳ ಮಾಡಿದ್ದನ್ನು ನಾವು ನೋಡಿದ್ದೇವೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ. 

What is happening at Dwarka District Court???! pic.twitter.com/89Mbhl2Q6D

— Deadly Law (@DeadlyLaw)

 

click me!