ಸುಪ್ರೀಂ ಕೋರ್ಟ್‌ನಲ್ಲೇ ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲ ರಾಕೇಶ್‌ ಕಿಶೋರ್‌ ಹಿನ್ನೆಲೆಯೇನು?

Published : Oct 07, 2025, 10:28 AM IST
Who is Rakesh Kishore

ಸಾರಾಂಶ

Advocate Rakesh Kishore Tried to Throw Shoe at CJI Gavai in Supreme Court ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ರಾಕೇಶ್‌ ಕಿಶೋರ್, ಮುಖ್ಯ ನ್ಯಾಯಮೂರ್ತಿ ಬಿಆರ್‌ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾರೆ. 

ನವದೆಹಲಿ (ಅ.7): ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆಯಬೇಕಿದ್ದ ಎಂದಿನ ವಿಚಾರಣೆ ಅತ್ಯಂತ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಿದೆ. ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ಘಟನೆ ಸುಪ್ರೀಂ ಕೋರ್ಟ್‌ನ ಸಿಜೆಐ ಪೀಠದಲ್ಲಿಯೇ ನಡೆದಿದೆ. ಹಿರಿಯ ವಕೀಲ ರಾಕೇಶ್‌ ಕಿಶೋರ್‌, ದೇಶದ ಮುಖ್ಯ ನ್ಯಾಯಮೂರ್ತಿ ಬಿಆರ್‌ ಗವಾಯಿ ಅವರನ್ನು ಗುರಿಯಾಗಿಸಿಕೊಂಡು ಶೂ ಎಸೆಯುವ ಪ್ರಯತ್ನ ಮಾಡಿದ್ದರು. ಆದರೆ, ಇದರಿಂದ ಮುಖ್ಯ ನ್ಯಾಯಮೂರ್ತಿಗೆ ಯಾವುದೇ ಗಾಯವಾಗಿಲ್ಲ. ಅವರು ಎಸೆದ ಶೂ, ಸಿಜೆಐ ಪೀಠದ ಎದುರು ಬಿದ್ದಿತ್ತು ಎಂದು ಪ್ರತ್ಯಕ್ಷದರ್ಶಿ ವಕೀಲರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಇದರಿಂದ ವಿಚಲಿತರಾಗದ ಸಿಜೆಐ ವಿಚಾರಣೆಯನ್ನು ಮುಂದುವರಿಸುವ ಮೊದಲು, 'ಇಂಥ ವಿಷಯಗಳು ನನ್ನ ಮೇಲೆ ಪರಿಣಾಮ ಬೀರೋದಿಲ್ಲ' ಎಂದು ಹೇಳಿದರು. ಸಿಜೆಐ ದಾಳಿಯನ್ನು ತಳ್ಳಿಹಾಕಲು ಪ್ರಯತ್ನಿಸಿದರೂ ಸಹ, ಈ ಘಟನೆಯು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆ ಆದಂತಾಗಿದೆ.

ಸಿಜೆಐ ಮೇಲೆ ಶೂ ಎಸೆಯುಲು ಪ್ರಯತ್ನಿಸಿದ ಹಿರಿಯ ವಕೀಲ ರಾಕೇಶ್‌ ಕಿಶೋರ್‌ನನ್ನು ಕಲಾಪದ ಆವರಣದಿಂದ ಹೊರಗೆಳೆಯಲು ಪ್ರಯತ್ನಿಸುವಾಗ,'ಸನಾತನ ಧರ್ಮಕ್ಕೆ ಅವಮಾನ ಆಗೋದನ್ನ ಭಾರತ ಸಹಿಸೋದಿಲ್ಲ' ಎಂದು ಕೂಗಿದ್ದಾರೆ.

ಸಿಜೆಐ ಹೇಳಿದ್ದ ವಿವಾದಾತ್ಮಕ ಮಾತು

ಮಧ್ಯಪ್ರದೇಶದ ಖಜುರಾಹೊ ಸಂಕೀರ್ಣದಲ್ಲಿ ಹಾನಿಗೊಳಗಾದ ವಿಷ್ಣು ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಗವಾಯಿ ಅವರ ವಿವಾದಾತ್ಮಕ ಮಾತು ತೀವ್ರ ಟೀಕೆಗೆ ಗುರಿಯಾಗಿತ್ತು.ವಿಗ್ರಹ ಪುನಃ ಸ್ಥಾಪನೆಗೆ ಬಗ್ಗೆ 'ದೇವರನ್ನೇ ನೀವು ಯಾಕೆ ಕೇಳಬಾರದು' ಎಂದು ಅವರು ಆಡಿದ್ದ ಮಾತು ಭಾರೀ ವಿವಾದ ಸೃಷ್ಟಿಸಿತ್ತು. ಅದರ ಬೆನ್ನಲ್ಲಿಯೇ ಈ ಘಟನೆ ನಡೆದಿದೆ.

ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, ಕಿಶೋರ್ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ನೋಂದಾಯಿತ ಸದಸ್ಯರಾಗಿದ್ದಾರೆ ಮತ್ತು ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು 2009 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿದ್ದರು.ಹಿರಿಯ ವಕೀಲರಾಗಿರುವ ರಾಕೇಶ್‌ ಕಿಶೋರ್‌, ಅನೇಕ ಬಾರ್ ಅಸೋಸಿಯೇಷನ್‌ಗಳಲ್ಲಿ ದೀರ್ಘಕಾಲದ ಸದಸ್ಯತ್ವಕ್ಕಾಗಿ ಕಾನೂನು ವಲಯದಲ್ಲಿ ಹೆಸರುವಾಸಿಯಾಗಿದ್ದಾರೆ.

ಕಿಶೋರ್, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ಶಹದಾರಾ ಬಾರ್ ಅಸೋಸಿಯೇಷನ್ ​​ಮತ್ತು ದೆಹಲಿ ಬಾರ್ ಕೌನ್ಸಿಲ್‌ನ ಸದಸ್ಯತ್ವ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ನ್ಯಾಯಾಲಯ ಸಂಖ್ಯೆ 1 ರಲ್ಲಿ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಬೇಗನೆ ಹೊರತಂದ ನಂತರ ಅವರನ್ನು ಗುರುತಿಸಲಾಯಿತು. ಅವರನ್ನು ಸ್ವಲ್ಪ ಸಮಯದವರೆಗೆ ಬಂಧಿಸಿ ನ್ಯಾಯಾಲಯದ ಸಂಕೀರ್ಣದೊಳಗೆ ಬಿಡುಗಡೆ ಮಾಡಲಾಯಿತು.ಕೆಲವೇ ಗಂಟೆಗಳಲ್ಲಿ ಭಾರತೀಯ ವಕೀಲರ ಮಂಡಳಿಯು ಕಾರ್ಯನಿರ್ವಹಿಸಿ, ಸುಪ್ರೀಂ ಕೋರ್ಟ್‌ನಲ್ಲಿ ರಾಕೇಶ್ ಕಿಶೋರ್ ಅವರ ವರ್ತನೆಗಾಗಿ ಮಧ್ಯಂತರ ಅಮಾನತು ಆದೇಶವನ್ನು ಹೊರಡಿಸಿತು.

"ಈ ವರ್ತನೆ ಮೇಲ್ನೋಟಕ್ಕೆ ನ್ಯಾಯಾಲಯದ ಘನತೆಗೆ ವಿರುದ್ಧವಾಗಿದೆ" ಎಂದು ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದ್ದು, ವಕೀಲರ ಕಾಯ್ದೆ, 1961 ಮತ್ತು ಭಾರತೀಯ ಬಾರ್ ಕೌನ್ಸಿಲ್ ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿದರು.

ಬಾರ್‌ ಕೌನ್ಸಿಲ್‌ನಿಂದ ಕ್ರಮ

"ಪ್ರಾಥಮಿಕವಾಗಿ ಕಂಡುಬಂದಿರುವ ಮಾಹಿತಿಯ ಆಧಾರದ ಮೇಲೆ, ಅಕ್ಟೋಬರ್ 6, 2025 ರಂದು ಬೆಳಿಗ್ಗೆ 11.35 ರ ಸುಮಾರಿಗೆ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಲಯ ಸಂಖ್ಯೆ 1 ರಲ್ಲಿ, ನೀವು ಅಂದರೆ ವಕೀಲ ರಾಕೇಶ್ ಕಿಶೋರ್, ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ದಾಖಲಾತಿ ಸಂಖ್ಯೆ... ಯ ಮೂಲಕ ನೋಂದಾಯಿಸಿಕೊಂಡಿದ್ದೀರಿ, ನಡೆಯುತ್ತಿರುವ ವಿಚಾರಣೆಯ ಸಮಯದಲ್ಲಿ ನಿಮ್ಮ ಸ್ಪೋರ್ಟ್ಸ್‌ ಶೂ ತೆಗೆದು ಗೌರವಾನ್ವಿತ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಡೆಗೆ ಎಸೆಯಲು ಪ್ರಯತ್ನಿಸಿದ್ದೀರಿ, ನಂತರ ನಿಮ್ಮನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ" ಎಂದು ಬಾರ್ ಕೌನ್ಸಿಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಮತ್ತು ನ್ಯಾಯಾಲಯದ ಗೌರವವನ್ನು ಹಾಳು ಮಾಡುತ್ತದೆ ಎಂದು ಬಾರ್ ಕೌನ್ಸಿಲ್ ಒತ್ತಿ ಹೇಳಿದೆ. ಕೌನ್ಸಿಲ್ ತೆಗೆದುಕೊಂಡ ಕ್ರಮವು ತಾತ್ಕಾಲಿಕವಾಗಿದ್ದು, ಹೆಚ್ಚಿನ ವಿಚಾರಣೆ ಬಾಕಿ ಇದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!
ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ