
ನವದೆಹಲಿ (ಮಾ.18): ದೇಶದ 4092 ಶಾಸಕರ ಪೈಕಿ ಶೇ. 45ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದು, ಶೇ.29ರಷ್ಟು ಶಾಸಕರ ಮೇಲೆ ಗಂಭೀರ ಪ್ರಕರಣಗಳಿವೆ ಎಂದು ಎಡಿಆರ್ ಸಂಸ್ಥೆ ತನ್ನ ವಿಶ್ಲೇಷಣೆಯಲ್ಲಿ ತಿಳಿಸಿದೆ.
ದಿ ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್( ಎಡಿಆರ್) ಸಂಸ್ಥೆಯು 28 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4123 ಶಾಸಕರ ಪೈಕಿ 4092 ಶಾಸಕರು ಸಲ್ಲಿಸಿರುವ ಅಫಿಡವಿಟ್ ಪರಿಶೀಲನೆ ನಡೆಸಿದೆ. ಈ ಪೈಕಿ 1861 ಶಾಸಕರು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ. ಆ ಪೈಕಿ ಶೇ.29ರಷ್ಟು ಅಂದರೆ 1205 ಶಾಸಕರ ಮೇಲೆ ಕೊಲೆ, ಕೊಲೆ ಯತ್ನ ಸೇರಿದಂತೆಹಲವು ಗಂಭೀರ ಅಪರಾಧ ಪ್ರಕರಣಳಿವೆ ಎಂದಿದೆ. ಈ ಪೈಕಿ 54 ಶಾಸಕರು ಕೊಲೆ , 226 ಶಾಸಕರು ಕೊಲೆ ಯತ್ನ, 127 ಶಾಸಕರು ಮಹಿಳಾ ದೌರ್ಜನ್ಯ, 13 ಶಾಸಕರು ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದಾರೆ ಎಂದಿದ್ದಾರೆ..
ಆಂಧ್ರ ನಂ.1:
ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಶೇ.79ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಉಳಿದಂತೆ ಕೇರಳ, ತೆಲಂಗಾಣದಲ್ಲಿ ತಲಾ ಶೇ.69, ಬಿಹಾರ ಶೇ.66, ಮಹಾರಾಷ್ಟ್ರಶೇ.65, ತಮಿಳುನಾಡಿನ ಶೇ.59 ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣವಿದೆ.
ಇದನ್ನೂ ಓದಿ: Aurangzeb tomb row: ಧರ್ಮಗ್ರಂಥ ಸುಟ್ಟ ವದಂತಿ, ಮಹಾರಾಷ್ಟ್ರ ಮತ್ತೆ ಉದ್ವಿಗ್ನ, ಆಗಿದ್ದೇನು?
ಇನ್ನು ಬಿಜೆಪಿಯ 1653 ಶಾಸಕರ ಪೈಕಿ 638 ಶಾಸಕರ ಮೇಲೆ ಕ್ರಿಮಿನಲ್ ಕೇಸ್ ಇದ್ದು, 436 ಮಂದಿ ಮೇಲೆ ಗಂಭೀರ ಪ್ರಕರಣವಿದೆ. ಕಾಂಗ್ರೆಸ್‌ನ 646 ಶಾಸಕರ ಪೈಕಿ 339 ಜನರ ಮೇಲೆ ಪ್ರಕರಣವಿದ್ದು, 194 ಶಾಸಕರು ಗಂಭೀರ ಸ್ವರೂಪದ ಪ್ರಕರಣ ಎದುರಿಸುತ್ತಿದ್ದಾರೆ. ಉಳಿದಂತೆ ಟಿಡಿಪಿಯ 115, ಡಿಎಂಕೆಯ 998, ಟಿಎಂಸಿಯ 95, ಆಪ್‌ನ 69, ಎಸ್‌ಪಿಯ 68 ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ