
ನವದೆಹಲಿ (ಮಾ.18): ಉಕ್ರೇನ್ ಮೇಲೆ ದಾಳಿ ತೀವ್ರಗೊಂಡ ಹೊತ್ತಿನಲ್ಲೇ, ‘ಆ ದೇಶದ ಮೇಲೆ ರಷ್ಯಾ ಪರಮಾಣು ದಾಳಿ ನಡೆಸದಂತೆ ತಡೆದಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ’ ಎಂದು ಉಕ್ರೇನ್ ಪಕ್ಕದ ದೇಶವಾದ ಪೋಲೆಂಡ್‌ನ ವಿದೇಶಾಂಗ ಖಾತೆ ಉಪ ಸಚಿವ ವ್ಲಾಡಿಸ್‌ಲಾ ಥಿಯೋಫಿಲ್ ಬಾರ್ಟೋಸ್‌ಜೆವೆಸ್ಕಿ ಅಚ್ಚರಿಯ ವಿಷಯ ಬಹಿರಂಗಪಡಿಸಿದ್ಧಾರೆ.
ತಮ್ಮ ಭಾರತ ಪ್ರವಾಸದ ವೇಳೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಚಿವ ವ್ಲಾಡಿಸ್‌ಲಾ, ‘ರಷ್ಯಾ- ಉಕ್ರೇನ್ ಯುದ್ಧದ ತೀವ್ರತೆ ಕಡಿಮೆ ಮಾಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದ್ದಕ್ಕೆ ನಮ್ಮ ದೇಶ ಕೃತಜ್ಞವಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದ ವೇಳೆ ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮೋದಿ ಮನವೊಲಿಸಿದ್ದರು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: PM Modi ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?
ಭಾನುವಾರಷ್ಟೇ ಫ್ರಿಡ್‌ಮನ್ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೋದಿಮಿರ್ ಜೆಲೆನ್‌ಸ್ಕಿ ಇಬ್ಬರಿಗೂ ಯುದ್ಧ ನಿಲ್ಲಿಸಿ ಎಂದು ಪಾಠ ಹೇಳುವ ಸ್ನೇಹ ನನಗಿದೆ. ಪುಟಿನ್ ಪಕ್ಕದಲ್ಲಿಯೇ ಕುಳಿತು ಇದು ಯುದ್ಧದ ಸಮಯವಲ್ಲ ಎಂದು ಹೇಳುತ್ತೇನೆ. ಅದೇ ರೀತಿ ಜೆಲೆನ್‌ಸ್ಕಿಗೂ ‘ಎಷ್ಟೇ ಜನರು ನಿಮ್ಮ ಬೆಂಬಲಕ್ಕೆ ನಿಂತರೂ ಯುದ್ಧ ಭೂಮಿಯಲ್ಲಿ ನಿರ್ಣಯ ಆಗುವುದಿಲ್ಲ ಎಂದು ಸ್ನೇಹಪೂರ್ವಕವಾಗಿ ಹೇಳುತ್ತೇನೆ. ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ದೇಶವಲ್ಲ. ಅಂದು ಇಂದು ಮುಂದು ಶಾಂತಿ ಪರ ವಹಿಸುತ್ತದೆ. ನಮ್ಮದು ಗೌತಮ ಬುದ್ಧ ಮತ್ತು ಮಹಾತ್ಮ ಗಾಂಧಿ ಅವರ ದೇಶ. ಶಾಂತಿ ನೆಲೆಸಲು ಶ್ರಮಿಸಲು ನಾವು ಸಿದ್ಧ. ಈಗ ಸಮಯ ತಿಳಿಯಾಗುತ್ತಿದೆ. ಶಾಂತಿ ಸ್ಥಾಪಿಸಲು ಇದು ಸೂಕ್ತ ಸಮಯ’ ಎಂದು ಹೇಳಿದ್ದರು.
ಇದನ್ನೂ ಓದಿ: PM Modi: ಪಾಕಿಸ್ತಾನಕ್ಕೆ ಮೋದಿ ಸ್ಟ್ರಾಂಗ್ ವಾರ್ನಿಂಗ್! ವಿಶ್ವಸಂಸ್ಥೆಯ ವರ್ತನೆ ಪ್ರಶ್ನಿಸಿದ ಪಿಎಂ!
ಮುಖ್ಯಾಂಶಗಳು ಇಲ್ಲಿವೆ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ