
ನವದೆಹಲಿ(ಅ.18): ನಿಷೇಧಿತ ಪಿಎಫ್ಐ ಹಾಗೂ ಅದರ ಅಂಗ ಸಂಘಟನೆಗಳ ಮೇಲಿನ ತನಿಖೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಒಂದೊಂದೇ ಮಾಹಿತಿಗಳು ಹೊರಬರುತ್ತಿದೆ. ಇದೀಗ ಪಿಎಫ್ಐ ಭಾರತದಲ್ಲಿ ಹಲವು ವ್ಯಾಟ್ಸ್ಆ್ಯಪ್ ಗ್ರೂಪ್ ಹೊಂದಿದೆ. ಆದರೆ 175 ಸದಸ್ಯರನ್ನೊಳಗೊಂಡ ಪ್ರಮುಖ ಸದಸ್ಯರ ಗುಂಪಿಗೆ ಪಾಕಿಸ್ತಾನಿ ಮೂಲದ ವ್ಯಕ್ತಿ ಆಡ್ಮಿನ್ ಆಗಿದ್ದಾನೆ. ಇನ್ನು ಗ್ರೂಪ್‌ನಲ್ಲಿ ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಯುಎಇ ದೇಶದ ಹಲವು ಸದಸ್ಯರು ಇದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. ಭಾರತದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು, ಸರ್ಕಾರ ಹಾಗೂ ಇಲ್ಲಿನ ವ್ಯವಸ್ಥೆ ವಿರುದ್ಧ ದಂಗೆ ಏಳುವಂತೆ ಮಾಡಲು ಸಂದೇಶಗಳನ್ನು, ಸೂಚನೆಗಳನ್ನು ನೀಡುತ್ತಿದ್ದ ಈ ಪಾಕಿಸ್ತಾನಿ ಆಡ್ಮಿನ್‌ನನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 175 ಸದಸ್ಯರ ವ್ಯಾಟ್ಸ್ಆ್ಯಪ್ ಗ್ರೂಪ್‌ನ ಬಹುತೇಕರು ವಿದೇಶದಲ್ಲಿದ್ದಾರೆ. ಈ ಸದಸ್ಯರು ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ ಭಾರತದ ವಿರುದ್ಧದ ಕೃತ್ಯಗಳಿಗೆ ಬಳಸುತ್ತಿದ್ದಾರೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ. ವಿದೇಶದಿಂದ ದೇಣಿಗೆ ಸಂಗ್ರಹಿಸಿ ಹಣ ವರ್ಗಾವಣೆ ಮಾಡಿದ್ದಾರೆ. ಈ ಕುರಿತು ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎಂದು ಎಟಿಎಸ್ ಹೇಳಿದೆ.
PFIನಿಂದ ಪ್ರತೀಕಾರದ ಪತ್ರ, ಮೋದಿಗೆ ಸರ್ ತನ್ ಸೆ ಜುದಾ, ಆಯೋಧ್ಯೆ ಮೇಲೆ ಬಾಂಬ್ ದಾಳಿ ಎಚ್ಚರಿಕೆ!
ಪಿಎಫ್ಐ ಸಂಘಟನೆಯ ಪ್ರಮುಖ ಐವರು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂದಾಯ ಮಾಡಿದ್ದಾರೆ. ಮಾಲೆಗಾಂವ್, ಕೋಲ್ಹಾಪುರ, ಬೀಡ್ ಹಾಗೂ ಪುಣೆಯಿಂದ ಐವರನ್ನು ಬಂಧಿಸಲಾಗಿದೆ. ಇವರ ಮೊಬೈಲ್ ಫೋನ್ ಸೇರಿದಂತೆ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಐವರು ನಿಷೇಧಿತ ಸಿಮಿ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದ ರೀತಿಯಲ್ಲೇ ಕೆಲಸ ಮಾಡುತ್ತಿದ್ದರು ಎಂದು ಎಟಿಎಸ್ ಹೇಳಿದೆ.
ಈ ಐವರ ಪೈಕಿ ಓರ್ವ ಐಟಿ ಎಂಜಿನೀಯರ್ ಹಾಗೂ ಮತ್ತೊರ್ವ ಮೌಲ್ವಿಯಾಗಿದ್ದಾನೆ. ಇಬ್ಬರು ವಿದೇಶಕ್ಕೆ ತೆರಳಿ ದೇಣಿಗೆ ಸಂಗ್ರಹಿಸಿ ವರ್ಗಾವಣೆ ಮಾಡಿದ್ದಾರೆ. ಈ ಹಣಗಳನ್ನು ಭಾರತದಲ್ಲಿ ಭಯೋತ್ಪಾದನ ಕೃತ್ಯಕ್ಕೆ ಬಳಸಿದ್ದಾರೆ ಎಂದು ಎಟಿಎಸ್ ಹೇಳಿದೆ. ಬಂಧಿತ ಆರೋಪಿಗಳನ್ನು ಮೌಲಾನಾ ಸೈಪುರ್ ರೆಹಮಾನ್ ಸಯೀದ್ ಅಹಮ್ಮದ್ ಅನ್ಸಾರಿ(26) ಅಬ್ದುಲ್ ಖಯಮೂಮ್ ಬದುಲ್ಲಾ ಶೇಕ್(48) ರಾಜೀ ಅಹಮ್ಮದ್ ಖಾನ್(31) ವಾಸೀಂ ಅಜೀಮ್ ಅಲಿಯಾಸ್ ಮುನ್ನಾ ಶೇಕ್(29), ಮೌಲಾ ನಸೀಸಾಬ್ ಎಂದು ಗುರುತಿಸಲಾಗಿದೆ.
ಪಿಎಫ್ಐ ಉಗ್ರ ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲು, ಸರ್ಕಾರದ ಶಸ್ತ್ರಾಸ್ತ್ರ ಪೂರೈಕೆ!
ಪಿಎಫ್‌ಐ ನಿಷೇಧ ಪರಿಶೀಲಿಸಲು ನ್ಯಾಯಾಧಿಕರಣ ರಚನೆ
ಉಗ್ರ ಕೃತ್ಯಗಳಿಗೆ ನೆರವು ನೀಡುತ್ತಿವೆ ಎಂಬ ಕಾರಣಕ್ಕೆ ಇತ್ತೀಚೆಗಷ್ಟೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಇತರ ಸಂಘಟನೆಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ, ಇದೀಗ ಈ ಸಂಬಂಧ ನ್ಯಾಯಾಧೀಕರಣ ರಚನೆ ಮಾಡಿದೆ. ನ್ಯಾಯಾಧಿಕರಣಕ್ಕೆ ದೆಹಲಿ ಹೈಕೋರ್ಚ್‌ನ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ಯಾವುದೇ ಸಂಘಟನೆಗಳನ್ನು ನಿಷೇಧಿಸಿದರೆ, ಅದಕ್ಕೆ ಪೂರಕವಾದ ಸಾಕ್ಷಿಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ಸರ್ಕಾರವೇ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಧಿಕರಣವನ್ನು ರಚನೆ ಮಾಡುತ್ತದೆ. ಇದರ ಅನ್ವಯ ಪಿಎಫ್‌ಐ ಬ್ಯಾನ್ ಆದ ಬಳಿಕ ನ್ಯಾಯಾಧಿಕರಣಕ್ಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಕಾರ‍್ಯನಿರತ ನ್ಯಾಯಾಧೀಶರನ್ನು ಸೂಚಿಸಲು ಕೇಂದ್ರ ಗೃಹ ಸಚಿವಾಲಯ ಕಾನೂನು ಸಚಿವಾಲಯಕ್ಕೆ ಮನವಿ ಮಾಡಿತ್ತು. ಭಯೋತ್ಪಾದನೆ ತಡೆ ಕಾಯ್ದೆಯಡಿ ಸೆ.28ರಂದು ಪಿಎಫ್‌ಐ ಹಾಗೂ ಅದರೊಂದಿಗೆ ಸಂಪರ್ಕ ಹೊಂದಿರುವ 8 ಸಂಘಟನೆಗಳನ್ನು ಸರ್ಕಾರ ನಿಷೇಧಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ