Mumbai Road Rage: ಬೆಳ್ಳಂಬೆಳಗ್ಗೆ ನಟಿಯ ಕಾರು ಅಡ್ಡಗಟ್ಟಿದ ಪುಂಡರು; ಮುಂಬೈನಲ್ಲಿ ನಡೀತು ಭಯಾನಕ ಘಟನೆ!

Published : Mar 20, 2026, 05:55 AM IST
Actress Nimisha Nair Harassed by Bikers During Early Morning Uber Ride in Mumbai

ಸಾರಾಂಶ

ಮುಂಬೈ ಊಬರ್ ಪ್ರಯಾಣದ ವೇಳೆ ನಟಿ ನಿಮಿಷಾ ನಾಯರ್ ಅವರಿಗೆ ಕೆಟ್ಟ ಅನುಭವವಾಗಿದೆ. ಕುಡಿದಂತೆ ಕಾಣುತ್ತಿದ್ದ ಇಬ್ಬರು ಬೈಕ್ ಸವಾರರಿಂದ ಕಾರನ್ನು ಅಡ್ಡಗಟ್ಟಿ, ಡ್ರೈವರ್‌ಗೆ ಬೆದರಿಕೆ ಹಾಕಿ, ಡೋರ್ ತೆಗೆಯಲು ಯತ್ನ. ನಟಿ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂಬೈ: ನಟಿ ನಿಮಿಷಾ ನಾಯರ್ ಅವರು ತಮಗಾದ ಒಂದು ಭಯಾನಕ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈನ ಬಾಂದ್ರಾ ನಗರದಲ್ಲಿ ಊಬರ್ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಇಬ್ಬರು ಬೈಕ್ ಸವಾರರು ದಾರಿ ಅಡ್ಡಗಟ್ಟಿ, ಕಾರಿನ ಡೋರ್ ತೆಗೆಯಲು ಯತ್ನಿಸಿ, ಡ್ರೈವರ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

ಬಾಂದ್ರಾ ಪೂರ್ವದಲ್ಲಿ ಈ ಘಟನೆ ನಡೆದಿದೆ. ನಿಮಿಷಾ ಅವರು ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ, ಅವರ ಡ್ರೈವರ್ ಒಂದು ಸ್ಕೂಟರ್ ಅನ್ನು ಓವರ್‌ಟೇಕ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸ್ಕೂಟರ್‌ನಲ್ಲಿದ್ದ ಇಬ್ಬರು, ನಿಮಿಷಾ ಅವರಿದ್ದ ಟ್ಯಾಕ್ಸಿಯನ್ನು ಹಿಂಬಾಲಿಸಲು ಶುರುಮಾಡಿದ್ದಾರೆ. ಆಗ ಸಮಯ ಮುಂಜಾನೆ ಸುಮಾರು 4:30 ಆಗಿತ್ತು ಎಂದು ನಿಮಿಷಾ ಹೇಳಿದ್ದಾರೆ.

ಖೇರ್ವಾಡಿ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. 'ಕುಡಿದಂತೆ ಕಾಣುತ್ತಿದ್ದ ಇಬ್ಬರು ಪುಂಡರು, ನಮ್ಮ ಊಬರ್ ಡ್ರೈವರ್ ತಮ್ಮ ಗಾಡಿಯನ್ನು ಓವರ್‌ಟೇಕ್ ಮಾಡಿದ್ದಕ್ಕೆ ರೊಚ್ಚಿಗೆದ್ದಿದ್ದರು' ಎಂದು ನಟಿ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. 'ಹೈವೇ ಮಧ್ಯದಲ್ಲೇ ನಮ್ಮ ಕಾರಿನ ಮುಂದೆ ಸ್ಕೂಟರ್ ನಿಲ್ಲಿಸಿ, ನನ್ನ ಡ್ರೈವರ್‌ಗೆ ಬೆದರಿಕೆ ಹಾಕಿದರು. ತುಂಬಾನೇ ಕೆಟ್ಟ ಭಾಷೆಯಲ್ಲಿ ಬೈದರು. ಬಲವಂತವಾಗಿ ಕಾರಿನ ಡೋರ್ ತೆಗೆಯಲು ಯತ್ನಿಸಿದರು ಮತ್ತು ನನ್ನನ್ನು ವಿಂಡೋ ಗ್ಲಾಸ್ ಕೆಳಗೆ ಇಳಿಸುವಂತೆ ಕೇಳಿದರು' ಎಂದು ನಿಮಿಷಾ ದೂರಿದ್ದಾರೆ.

'ನಾನು ವಿಡಿಯೋ ಮಾಡುತ್ತಿರುವುದನ್ನು ನೋಡಿದ ಮೇಲೆ ಅವರು ಅಲ್ಲಿಂದ ಹೋದರು. ಹೋಗುವ ಮುನ್ನ ನಮ್ಮ ಕಾರಿನ ಫೋಟೋ ತೆಗೆದುಕೊಂಡರು' ಎಂಬುದಾಗಿಯೂ ನಿಮಿಷಾ ಸ್ಪಷ್ಟಪಡಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೈಬರ್ ಲೋಕದಲ್ಲೂ ಒತ್ತಾಯ ಹೆಚ್ಚಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Gig Workers: ಬಜೆಟ್‌ಗೂ ಮುನ್ನ ಸಿಎಂ ಮುಂದೆ ತಮ್ಮ ಕಷ್ಟ ಹೇಳಿಕೊಂಡ ಗಿಗ್‌ ಕಾರ್ಮಿಕರು; ಉದ್ಯೋಗಿ ಸ್ಟೇಟಸ್‌ಗೆ ಆಗ್ರಹ
ಅಮೆರಿಕಾದ F-35 ಯುದ್ಧ ವಿಮಾನಕ್ಕೂ ಹೊಡೆಯಿತಾ ಇರಾನ್: ಅಮೆರಿಕಾ ಹೇಳಿದ್ದೇನು?