ಸಿಎಂ ಯೋಗಿ ಭೇಟಿಯಾದ ನಟಿ ಕಂಗನಾ, ಈ ಮೀಟಿಂಗ್ ಹಿಂದಿನ ರಹಸ್ಯವೇನು?

Published : May 02, 2022, 12:31 PM IST
ಸಿಎಂ ಯೋಗಿ ಭೇಟಿಯಾದ ನಟಿ ಕಂಗನಾ, ಈ ಮೀಟಿಂಗ್ ಹಿಂದಿನ ರಹಸ್ಯವೇನು?

ಸಾರಾಂಶ

* ಯುಪಿ ಸಿಎಂ ಯೋಗಿ ಭೇಟಿಯಾದ ನಟಿ ಕಂಗನಾ * ಮಹತ್ವಾಕಾಂಕ್ಷೆಯ ಯೋಜನೆಯಾದ ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ ಗಿಫ್ಟ್‌ ಹ್ಯಾಂಪರ್ ಕೊಟ್ಟ ಸಿಎಂ * ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ

ಮುಂಬೈ(ಮೇ.02): ಬಾಲಿವುಡ್ ನಟಿ ಕಂಗನಾ ರಣಾವತ್ ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಸಿಎಂ ಯೋಗಿ ಅವರು ಮಹತ್ವಾಕಾಂಕ್ಷೆಯ ಯೋಜನೆಯಾದ ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ (ಒಡಿಒಪಿ) ಯೋಜನೆಗೆ ಸಂಬಂಧಿಸಿದ ಗಿಫ್ಟ್ ಹ್ಯಾಂಪರ್ ಅನ್ನು ಉಡುಗೊರೆಯಾಗಿ ನೀಡಿದರು.

ಈ ಸಭೆಯಲ್ಲಿ ನಟಿ ಕಂಗನಾ ರಣಾವತ್ ಸಿಎಂ ಯೋಗಿಗೆ ಪುಷ್ಪಗುಚ್ಛ ನೀಡಿದ್ದಾರೆ. ಸಭೆಯ ನಂತರ ಕಂಗನಾ ರಣಾವತ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿಎಂ ಯೋಗಿಯನ್ನು ಭೇಟಿಯಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಾದ ಬಳಿಕ ಈ ಫೋಟೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 

ಸಿಎಂ ಯೋಗಿಯನ್ನು ಭೇಟಿಯಾದ ನಂತರ, ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಳ್ಳುತ್ತಾ- 'ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಗೆಲುವಿನ ಬಳಿಕ, ಇಂದು ನನಗೆ ಮಹಾರಾಜ್ ಯೋಗಿ ಆದಿತ್ಯನಾಥ್ ಜಿ ಅವರನ್ನು ಭೇಟಿ ಮಾಡುವ ಭಾಗ್ಯ ಸಿಕ್ಕಿದೆ. ಅದೊಂದು ಅದ್ಭುತವಾದ ಸಂಜೆ ಮಹಾರಾಜ್ ಜಿಯವರ ಸಹಾನುಭೂತಿ, ಕಾಳಜಿ ಮತ್ತು ಆಳವಾದ ಸಂಪರ್ಕದ ಪ್ರಜ್ಞೆಯು ನನ್ನನ್ನು ಯಾವಾಗಲೂ ವಿಸ್ಮಯಗೊಳಿಸುತ್ತದೆ. ನಾನು ಗೌರವ ಮತ್ತು ಸ್ಫೂರ್ತಿಯನ್ನು ಅನುಭವಿಸುತ್ತೇನೆ ಎಂದಿದ್ದಾರೆ.

ಖ್ಯಾತ ನಟಿ ಕಂಗನಾ ರಣಾವತ್ ಅವರು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಕಾರ್ಯಗಳನ್ನು ಯಾವಾಗಲೂ ಹೊಗಳುತ್ತಾರೆ. ಇತ್ತೀಚೆಗೆ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾದ ಫಿಲ್ಮ್ ಸಿಟಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಇದರೊಂದಿಗೆ ಒಡಿಒಪಿ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿಯೂ ನೇಮಕಗೊಂಡಿದ್ದಾರೆ.

ಯುಪಿಯ ಉತ್ಪನ್ನಗಳಿಗೆ ಮಾನ್ಯತೆ ನೀಡಲು ಯೋಗಿ ಸರ್ಕಾರವು ಜಿಲ್ಲೆ-ಒಂದು ಉತ್ಪನ್ನ ಯೋಜನೆಯನ್ನು ಪ್ರಾರಂಭಿಸಿದೆ ಎಂಬುವುದು ಉಲ್ಲೇಖನೀಯ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಯಾರಾಗುವ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಸ್ವಾವಲಂಬಿಗಳನ್ನಾಗಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿ ತಯಾರಾಗುತ್ತಿರುವ ಉತ್ಪನ್ನಗಳನ್ನು ಗುರುತಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಕಂಗನಾ ರಣಾವತ್ ಅಭಿನಯದ ಢಾಕಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕಂಗನಾ ತಮ್ಮ ವೃತ್ತಿ ಜೀವನದಲ್ಲಿ ಒಂದಕ್ಕಿಂತ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಪ್ರತಿ ಬಾರಿಯೂ ಕಂಗನಾ ತನ್ನ ಚಿತ್ರದಲ್ಲಿ ವಿಭಿನ್ನ ಮತ್ತು ಹೊಸದನ್ನು ಮಾಡುತ್ತಾರೆ. ಈ ಬಾರಿಯೂ ಕಂಗನಾ ಚಿತ್ರದ ಟ್ರೇಲರ್ ನೋಡಿ ಎಲ್ಲರ ಕಣ್ಣು ತೆರೆಸಿದೆ. ಢಾಕಾಡ್‌ನ ಟ್ರೇಲರ್‌ನಲ್ಲಿ, ಕಂಗನಾ ಒರಟು ಮತ್ತು ಕಠಿಣ ಮಹಿಳೆಯಾಗಿ ಹುರುಪಿನ ಹೋರಾಟದ ದೃಶ್ಯಗಳನ್ನು ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್