
ನವದೆಹಲಿ(ಜ.30): ಭಾರತ ಹಾಗೂ ಪಾಕಿಸ್ತಾನದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಏನೂ ಇಲ್ಲ ಎಂದಿರುವ ಸಾಮಾಜಿಕ ಹೋರಾಟಗಾರ ಹಾಗೂ ಚಲನಚಿತ್ರ ನಿರ್ಮಾಪಕ ತಪನ್ ಬೋಸ್, ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಸೇನೆ ಹೇಗೆ ತನ್ನದೇ ಜನರನ್ನು ಕೊಲ್ಲುತ್ತದೆಯೋ ಹಾಗೆಯೇ ಭಾರತೀಯ ಸೇನೆ ಕೂಡ ತನ್ನದೇ ಜನರನ್ನು ಕೊಲ್ಲುತ್ತದೆ ಎಂದು ಹೇಳುವ ಮೂಲಕ ತಪಸ್ ಬೋಸ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಟುಕ್ಡೆ ಗ್ಯಾಂಗ್ ಎಕ್ಸ್‌ಪೋಸ್: ಭಾರತದಿಂದ ಅಸ್ಸಾಂ ಬೇರ್ಪಡಿಸುವಂತೆ ಕರೆ!
ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ತಪನ್ ಬೋಸ್, ಪಾಕಿಸ್ತಾನ ಸೇನೆಯಷ್ಟೇ ಭಾರತೀಯ ಸೇನೆ ಕೂಡ ಕ್ರೂರವಾಗಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ಸೇನೆ ನಡೆಸಿದ ಬರ್ಬರತೆ ಎಲ್ಲರ ಕಣ್ಣ ಮುಂದಿದೆ ಎಂದು ತಪನ್ ಬೋಸ್ ಹೇಳಿದರು.
ನಾವು ದೇಶ ಧ್ವಂಸ ಮಾಡಬಲ್ಲ ಸಮುದಾಯದವರು: ಹಸನ್ ವಿವಾದಾತ್ಮಕ ಹೇಳಿಕೆ
ದೆಹಲಿಯ ಶಾಹೀನ್ ಬಾಗ್ ಹೋರಾಟಗಾರರನ್ನು ಕಂಡು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹೆದರಿವೆ. ಇದೇ ಕಾರಣಕ್ಕೆ ಹೋರಾಟಗಾರರನ್ನು ದೇಶದ್ರೋಹಿಗಳೆಂದು ಬಿಂಬಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಪನ್ ಬೋಸ್ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ