ಏಷ್ಯಾದಲ್ಲಿ ಮೋದಿ 2ನೇ ಪ್ರಭಾವಿ ವ್ಯಕ್ತಿ, ಭಾರತಕ್ಕೆ 3ನೇ ಸ್ಥಾನ; 1, 2ನೇ ಸ್ಥಾನ ಯಾರಿಗೆ?

Published : Nov 24, 2026, 11:47 AM IST
Narendra Modi

ಸಾರಾಂಶ

ಏಷ್ಯಾ ಪವರ್ ಇಂಡೆಕ್ಸ್ 2026 ವರದಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಏಷ್ಯಾದ 2ನೇ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಭಾರತ ಏಷ್ಯಾದಲ್ಲಿ 3ನೇ ಅತ್ಯಂತ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ. ರಕ್ಷಣಾ ಸಹಭಾಗಿತ್ವ ಮತ್ತು ಆರ್ಥಿಕ ಸಂಬಂಧಗಳು ಭಾರತದ ಸಾಮರ್ಥ್ಯವನ್ನು ಹೆಚ್ಚಿಸಿವೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಏಷ್ಯಾದಲ್ಲಿ 2ನೇ ಅತ್ಯಂತ ಪ್ರಭಾವಿ ವ್ಯಕ್ತಿ. ಭಾರತ, ಏಷ್ಯಾದಲ್ಲಿ 3ನೇ ಅತ್ಯಂತ ಶಕ್ತಿಶಾಲಿ ದೇಶ ಎಂದು ಲೋವಿ ಇನ್‌ಸ್ಟಿಟ್ಯೂಟ್‌ನ ‘ಏಷ್ಯಾ ಪವರ್ ಇಂಡೆಕ್ಸ್ 2026’ ವರದಿ ತಿಳಿಸಿದೆ.

ವರದಿ ಅನ್ವಯ, 100ಕ್ಕೆ 78.9 ಅಂಕ ಪಡೆದ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 73.6 ಅಂಕ ಚೀನಾ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಅಂಕವು 0.5 ಅಂಕ ಏರಿಕೆಯಾಗಿ 40.5ಕ್ಕೆ ತಲುಪಿ 3ನೇ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ ಚೀನಾ ಮತ್ತು ಭಾರತದ ನಡುವಿನ ಶಕ್ತಿ ಸಾಮರ್ಥ್ಯದ ಅಂಕಗಳ ಅಂತರವು 2018ರ ನಂತರದ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಮೆರಿಕ ಏಷ್ಯಾ ಖಂಡದ ದೇಶ ಅಲ್ಲದೇ ಇದ್ದರೂ ಅದು ಈ ವಲಯದಲ್ಲಿ ಹೊಂದಿರುವ ಪ್ರಭಾವವು ಅದಕ್ಕೆ ಮೊದಲ ಸ್ಥಾನ ನೀಡಿದೆ.

ಭಾರತದ ಸಾಮರ್ಥ್ಯ ಹೆಚ್ಚಳ

ಹೆಚ್ಚಿನ ಪ್ರಾದೇಶಿಕ ರಕ್ಷಣಾ ಸಹಭಾಗಿತ್ವ, ಆಗ್ನೇಯ ಏಷ್ಯಾ ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿ ಮಾರಾಟ, ನೆರೆ ಹೊರೆ ದೇಶಗಳೊಂದಿಗೆ ಸ್ಥಿರವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಏಷ್ಯಾ ವಲಯದಲ್ಲಿ ಭಾರತದ ಸಾಮರ್ಥ್ಯ ವೃದ್ಧಿಗೆ ನೆರವಾಗಿದೆ ಎಂದು ವರದಿ ಹೇಳಿದೆ.

ಮೋದಿ ನಂ.2:

ಪ್ರಭಾವಿ ನಾಯಕರ ಪಟ್ಟಿಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮೊದಲ ಸ್ಥಾನದಲ್ಲಿದ್ದರೆ, ಪ್ರಧಾನಿ ನರೇಂದ್ರ ಮೋದಿ 2ನೇ ಸ್ಥಾನದಲ್ಲಿದ್ದಾರೆ. ಆದರೆ ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಭಾರತ ತಳೆದ ಮೌನ ಅಥವಾ ಕಡಿಮೆ ಸಕ್ರಿಯ ನಿಲುವು ಮೋದಿ ಅವರ ಜಾಗತಿಕ ನಾಯಕತ್ವದ ದೃಷ್ಟಿಕೋನದ ಮೇಲೆ ಕೊಂಚ ಪರಿಣಾಮ ಬೀರಿದೆ’ ಎಂದು ವರದಿ ಹೇಳಿದೆ.

131 ಮಾನದಂಡಗಳ ಆಧಾರದ ಮೇಲೆ 27 ದೇಶಗಳು ಮತ್ತು ಪ್ರಾಂತ್ಯಗಳಿಗೆ ಶ್ರೇಯಾಂಕ ನೀಡಿ ಈ ಸೂಚ್ಯಂಕ ತಯಾರಿಸಲಾಗಿದೆ.

ರಾಹುಲ್‌ ಬಗ್ಗೆ ಬಿಜೆಪಿ ಕಿಡಿ:

ಈ ನಡುವೆ ಭಾರತದ ಸುಧಾರಿತ ಶ್ರೇಯಾಂಕವು ಕಾಂಗ್ರೆಸ್ ಪಕ್ಷಕ್ಕೆ ವಾಸ್ತವದ ಅರಿವು ಮೂಡಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್‌ನ ಭವಿಷ್ಯವು ‘ವಿಪತ್ತು’ ಆಗಿರಬಹುದು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಭವಿಷ್ಯವು ‘ಸುರಕ್ಷಿತ, ಭದ್ರ ಮತ್ತು ಸಮೃದ್ಧವಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ. ಮತ್ತೊಂದೆಡೆ ಭಾರತದ ‘ಏಳಿಗೆಯ ದಶಕವನ್ನು ಜಗತ್ತು ಗುರುತಿಸಿದೆ’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ವಿನೋದ್ ತಾವ್ಡೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರತಿ ದಿನ ಅನ್ನ ನೀಡುತ್ತಿದ್ದ ವೃದ್ಧನ ಅಂತ್ಯಕ್ರಿಯೆವರೆಗೆ ಹಿಂಬಾಲಿಸಿ ಮೌನವಾಗಿ ಕುಳಿತ ಬೀದಿ ನಾಯಿ
ರಾಮನ ಹುಟ್ಟೂರಿಂದ ಸೀತೆಯ ಹುಟ್ಟೂರಿಗೆ ಟ್ರೈನ್: ಈ ವಿಶೇಷ ರೈಲಿನ ಟಿಕೆಟ್ ದರ ಎಷ್ಟು?