ಲೋಕಸಭಾ ಚುನಾವಣೆ ABP Cವೋಟರ್ ಸಮೀಕ್ಷೆ, ಮತ್ತೆ ಮೋದಿ ಸರ್ಕಾರ, ಕರ್ನಾಟಕದಲ್ಲಿ 24 ಸ್ಥಾನ!

By Suvarna News  |  First Published Dec 23, 2023, 10:12 PM IST

ಲೋಕಸಭಾ ಚುನಾವಣೆ ಕಾವು ಏರತೊಡಗಿದೆ. ಇದರ ಬೆನ್ನಲ್ಲೇ ABP Cವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಬಹುತೇಕ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದಿದ್ದರೆ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ 22ರಿಂದ 24 ಸ್ಥಾನ ಎಂದಿದೆ. 
 


ನವದೆಹಲಿ(ಡಿ.23) ಲೋಕಸಭಾ ಚುನಾವಣಾ ಆಖಾಡ ಸಜ್ಜಾಗುತ್ತಿದೆ. ಈಗಾಗಲೇ ರಣತಂತ್ರಗಳು ಆರಂಭಗೊಂಡಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್, ಇಂಡಿ ಒಕ್ಕೂಟದ ಮೂಲಕ ಅಧಿಕಾರ ಪಡೆಯುವ ಯತ್ನದಲ್ಲಿದೆ. ಹೀಗಾಗಿ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಕಾವು ಏರುತ್ತಿದ್ದಂತೆ ಇದೀಗ ಚುನಾವಣೆ ಪೂರ್ವ ಸಮೀಕ್ಷೆಗಳು ಬಹಿರಂಗವಾಗುತ್ತಿದೆ.  ABP Cವೋಟರ್ ನಡೆಸಿದ ಲೋಕಸಭಾ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಬಹುತೇಕ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದಿದೆ. ಇನ್ನು ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿರುವ ಬಿಜೆಪಿ ಕಳೆದ ಚುನಾವಣೆಗಿಂತ ಸೀಟು ಕಡಿಮೆಯಾಗಲಿದೆ ಎಂದಿದೆ. ಈ ಬಾರಿ 22 ರಿಂದ 24 ಸ್ಥಾನ ಬಿಜೆಪಿ-ಜೆಡಿಎಸ್ ಮೈತ್ರಿ ಪಡೆದುಕೊಳ್ಳಲಿದೆ ಎಂದಿದೆ.

ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 26 ಸ್ಥಾನ ಪಡೆದಿತ್ತು.  ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿ ಲೋಕಸಭೆ ಚುನಾವಣೆ ಎದುರಿಸಿತ್ತು. ಈ ವೇಳೆ ಜೆಡಿಎಸ್ ಒಂದು ಸ್ಥಾನ ಹಾಗೂ ಕಾಂಗ್ರೆಸ್ ಒಂದು ಸ್ಥಾನ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ 22 ರಿಂದ 24 ಸ್ಥಾನ ಎಂದಿದೆ. ಇತ್ತ ಒಂದು ಸ್ಥಾನದಲ್ಲಿದ್ದ ಕಾಂಗ್ರೆಸ್ 4 ರಿಂದ 6 ಸ್ಥಾನ ಗೆಲ್ಲಲಿದೆ ಎಂದಿದೆ.

Tap to resize

Latest Videos

2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಸತತ 3ನೇ ಬಾರಿಗೆ ಗೆದ್ದು ಪ್ರಧಾನಿಯಾಗ್ತಾರಾ ಮೋದಿ..?

ಇತ್ತೀಚೆಗೆ ವಿಧಾನಸಭೆ ಚುನಾವಣೆ ಗೆದ್ದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಘಡದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ ಎಂದಿದೆ. ಇನ್ನು ವಿಧಾನಸಭೆಯಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲೂ ಮೋಡಿ ಮಾಡಲಿದೆ ಎಂದಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 11 ಸ್ಥಾನ ಗೆಲ್ಲಲಿದೆ ಎಂದಿದೆ.

 ABP Cವೋಟರ್ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ
ಕರ್ನಾಟಕ (ಒಟ್ಟು 28 ಸ್ಥಾನ)
ಬಿಜೆಪಿ + ಜೆಡಿಎಸ್ ಮೈತ್ರಿ : 22 ರಿಂದ 24 ಸ್ಥಾನ
ಕಾಂಗ್ರೆಸ್  : 4 ರಿಂದ 6 ಸ್ಥಾನ

ಮಧ್ಯಪ್ರದೇಶ ( ಒಟ್ಟು 29 ಸ್ಥಾನ)
ಬಿಜೆಪಿ  : 27 ರಿಂದ 
ಕಾಂಗ್ರೆಸ್ : 0 -2 ಸ್ಥಾನ

ರಾಜಸ್ಥಾನ( ಒಟ್ಟು 25 ಸ್ಥಾನ)
ಬಿಜೆಪಿ  : 23 ರಿಂದ 25 ಸ್ಥಾನ
ಕಾಂಗ್ರೆಸ್  :0 - 2 ಸ್ಥಾನ

10ರಲ್ಲಿ 8 ಮಂದಿಗೆ ಮತ್ತೆ ಮೋದಿಯೇ ಪ್ರಧಾನಿಯಾಗ್ಬೇಕಂತೆ..! ಮೋದಿ ಆಡಳಿತದ ಬಗ್ಗೆ ಹೇಳೋದೇನು ವಿದೇಶಿಗರು?

ತೆಲಂಗಾಣ ( ಒಟ್ಟು 17 ಸ್ಥಾನ)
ಬಿಜೆಪಿ : 1 ರಿಂದ 3 ಸ್ಥಾನ
ಕಾಂಗ್ರೆಸ್  : 9 ರಿಂದ 11 ಸ್ಥಾನ 
ಬಿಆರ್‌ಎಸ್  : 3 ರಿಂದ 5 ಸ್ಥಾನ
 
ಚತ್ತೀಸಘಡ( ಒಟ್ಟು 11 ಸ್ಥಾನ)
ಬಿಜೆಪಿ  : 9 ರಿಂದ 11 ಸ್ಥಾನ
ಕಾಂಗ್ರೆಸ್  : 0 -2 ಸ್ಥಾನ

click me!