ಆತ್ಮನಿರ್ಭರ ಭಾರತದ ಮಂತ್ರ ಹಳ್ಳಿ ಹಳ್ಳಿಗೂ ತಲುಪುತ್ತಿದೆ: ಮೋದಿ ಮನ್‌ ಕೀ ಬಾತ್!

By Suvarna News  |  First Published Feb 28, 2021, 12:29 PM IST

ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು| ಆತ್ಮನಿರ್ಭರ ಭಾರತದ ಬಗ್ಗೆ ಮೋದಿ ಉಲ್ಲೇಖ| ಜಲ ಸಂರಕ್ಷಣೆಗೆ ಒತ್ತು ನೀಡುವಂತೆ ಮನವಿ


ನವದೆಹಲಿ(ಫೆ.28): ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮಾಸಿಕ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಜಲ ಸಂರಕ್ಷಣೆ ಸಂದೇಶ ನೀಡಿದ್ದಾರೆ. ನೀರಿನ ಮಹತ್ವದ ಬಗ್ಗೆ ಮಾತನಾಡುತ್ತಾ ಮನ್‌ ಕೀ ಬಾತ್‌ ಆರಂಭಿಸಿದ ಪಿಎಂ ಮೋದಿ, ಬೇಸಿಗೆ ಕಾಲ ಆರಂಭವಾಗುತ್ತಿದೆ, ಹೀಗಾಗಿ ಜಲ ಸಂರಕ್ಷಣೆ ಅಗತ್ಯ ಹಾಗೂ ಇದು ಸೂಕ್ತ ಸಮಯ ಎಂದಿದ್ದಾರೆ. ನೀರು ನಮಗೆ ಜೀವನ, ನಂಬಿಕೆ ಮತ್ತು ಅಭಿವೃದ್ಧಿ ತಂದುಕೊಡುತ್ತದೆ. ಹೀಗಾಗಿ ಇದನ್ನು ಸಂರಕ್ಷಿಸಲು ನಾವು ಈಗಲೇ ಸಿದ್ಧತೆ ಆರಂಭಿಸಬೇಕು. ಅಲ್ಲದೇ ಮಾರ್ಚ್ 22ರಂದು ವಿಶ್ವ ಜಲ ದಿನವನ್ನೂ ಆಚರಿಸುತ್ತೇವೆ ಎಂದಿದ್ದಾರೆ

ವೋಕಲ್ ಫಾರ್ ಲೋಕಲ್: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ EV!

Tap to resize

Latest Videos

ಮಾಘ ಮಾಸದಲ್ಲಿ ಯಾವುದಾದರೂ ಪವಿತ್ರ ಜಲಾಶಯದಲ್ಲಿ ಸ್ನಾನ ಮಾಡುವುದು ಬಹಳ ಪವಿತ್ರ ಕಾರ್ಯವೆನ್ನಲಾಗುತ್ತದೆ. ವಿಶ್ವದ ಅನೇಕ ಸಮುದಾಯಗಳಲ್ಲಿ ನದಿಗೆ ಸಂಬಂಧಿಸಿದ ಯಾವುದಾದರೂ ಪರಂಪರೆ ಇರುತ್ತದೆ. ಅನೇಕ ನಾಗರಿಕತೆಗಳು ನದಿ ದಡದಲ್ಲೇ ರೂಪುಗೊಂಡು ಅಭಿವೃದ್ಧಿ ಕಂಡಿವೆ. ನಮ್ಮ ಸಂಸ್ಕೃತಿ ಸಾವಿರಾರು ವರ್ಷ ಪುರಾತನವಾಗಿರುವ ಕಾರಣ, ನಾವು ಅದನ್ನು ಇಲ್ಲಿ ಹೆಚ್ಚು ವ್ಯಾಪಕವಾಗಿ ಕಾಣುತ್ತೇವೆ ಎಂದೂ ಮೋದಿ ತಮ್ಮ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ. 

Tune in. https://t.co/qQAT95UhTk

— Narendra Modi (@narendramodi)

ಇನ್ನು ಸಂತ ರವಿದಾಸರನ್ನು ನೆನಪಿಸಿಕೊಂಡ ಪಿಎಂ ಮೋದಿ ಯಾವುದೇ ಕೆಲಸ ಮಾಡಲು ಯುವಕರು ಹಳೆಯ ವಿಧಾನಗಳಿಗೆ ಅಂಟಿಕೊಳ್ಳಬಾರದು ಎಂದಿದ್ದಾರೆ. ಇಂದಿಗೂ ಅವರ ಈ ಜ್ಞಾನ, ನಮಗೆ ಹಾದಿ ತೋರುತ್ತದೆ. ಅಲ್ಲದೇ "ನಾವೆಲ್ಲರೂ ಒಂದೇ ಮಣ್ಣಿನ ಪಾತ್ರೆಗಳು, ನಾವೆಲ್ಲರೂ ಒಬ್ಬರಿಂದ ಮಾಡಲ್ಪಟ್ಟಿದ್ದೇವೆ" ಎಂದೂ ರವಿದಾಸರು ಹೇಳಿದ್ದಾರೆ. ಹೀಗಿರುವಾಗ ಇಂತಹ ಮಹಾನ್ ವ್ಯಕ್ತಿ ಜನಿಸಿದ ಸ್ಥಳ ವಾರಾಣಾಸಿಯೊಂದಿಗೆ ನನಗೆ ಸಂಬಂಧವಿದೆ ಎಂಬುವುದು ನನ್ನ ಅದೃಷ್ಟ. ಸಂತ ರವಿದಾಸ್ ಅವರ ಜೀವನದ ಆಧ್ಯಾತ್ಮಿಕ ಉತ್ತುಂಗವನ್ನು ಅವರ ಶಕ್ತಿ ನನಗೆ ಆ ತೀರ್ಥ ಸ್ಥಳದಲ್ಲಿ ಅನುಭವಕ್ಕೆ ಬಂದಿದೆ ಎಂದು ಮೋದಿ ಹೇಳಿದ್ದಾರೆ.

ಇನ್ನು ತಮ್ಮ ಈ ಮಾಸಿಕ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಎರಡು ಸಂಸ್ಕೃತ ಆಡಿಯೋ ಟೇಪ್‌ಗಳನ್ನೂ ಪ್ಲೇ ಮಾಡಿದ್ದಾರೆ. ಇದರಲ್ಲಿ ಓರ್ವ ಟೂರಿಸ್ಟ್ ಸಂಸ್ಕೃತದಲ್ಲಿ ಏಕತಾ ಪ್ರತಿಮೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಮತ್ತೊಂದರಲ್ಲಿ ವ್ಯಕ್ತಿಯೊಬ್ಬ ಸಂಸ್ಕೃತದಲ್ಲಿ ಕ್ರಿಕೆಟ್ ಕಮೆಂಟ್ರಿ ನೀಡುತ್ತಿದ್ದಾರೆ. ಈ ವ್ಯಕ್ತಿ ವಾರಾಣಸಿಯ ಸಂಸ್ಕೃತ ಕೇಂದ್ರದವರಾಗಿದ್ದಾರೆ. ಹೀಗಿರುವಾಗ ಪಿಎಂ ಮೋದಿ ಕ್ರಿಕೆಟ್‌ ಜೊತೆ ಇತರ ಕ್ರೀಡೆಗಳ ಕಮೆಂಟ್ರಿಯೂ ಹೀಗೇ ಮೂಡಿ ಬರಬೇಕು ಎಂದು ಆಶಿಸಿದ್ದಾರೆ. ಇದಕ್ಕಾಗಿ ಕ್ರೀಡಾ ಸಚಿವಾಲಯ ಮತ್ತು ಖಾಸಗಿ ವಲಯದ ಸಹಭಾಗಿತ್ವಕ್ಕಾಗಿ ಮನವಿಯನ್ನೂ ಮಾಡಿದ್ದಾರೆ.

ಬಜೆಟ್‌ ಶ್ರೀಮಂತರ ಪರ ಎಂದ ವಿಪಕ್ಷಕ್ಕೆ ನಿರ್ಮಲಾ ತಿರುಗೇಟು!

ಇವೆಲ್ಲದರೊಂದಿಗೆ ಪಿಎಂ ಮೋದಿ ಮುಂದೆ ಬರಲಿರುವ ಪರೀಕ್ಷೆಗಳ ಬಗ್ಗೆಯೂ ಮಾತನಾಡಿದ್ದು, ವಿದ್ಯಾರ್ಥಿಗಳ ಮನೋಬಲ ಹಿಗ್ಗಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮೈ ಗಾಂವ್ ಪೋರ್ಟಲ್ ಬಳಸುವಂತೆ ಸೂಚಿಸಿದ್ದಾರೆ. ಇಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲ ಟಿಪ್ಸ್ ನೀಡಲಾಗಿದ್ದು, ಇದರ ಲಾಭ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಅಲ್ಲದೇ ಮತ್ತೆ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜನರು ಮತ್ತಷ್ಟು ಎಚ್ಚರದಿಂದಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರೊಂದಿಗೆ ಮಾಸ್ಕ್ ಧರಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಬಾಯಿಗೆ ಬಂದು ಬಿದ್ದ ಲಡ್ಡು!, Koo ಆಪ್ ಸೇರಲು ಜನರು Queue

ಕೊನೆಯದಾಗಿ ಆತ್ಮ ನಿರ್ಭರ ಭಾರತ್‌ ಕುರಿತಾಗಿ ಉಲ್ಲೇಖಿಸಿದ ಪಿಎಂ ಈ ಕನಸಿನ ಮಂತ್ರ ಹಳ್ಳಿ ಹಳ್ಳಿಗೂ ತಲುಪುತ್ತಿದ್ದು, ಪ್ರತಿಯೊಬ್ಬರೂ ಭಾರತವನ್ನು ಸಧೃಡಗೊಳಿಸುವಲ್ಲಿ ಹೆಜ್ಜೆ ಇರಿಸುತ್ತಿದ್ದಾರೆ. ಸ್ವದೇಶೀ ವಸ್ತುಗಳಿಗೆ ಮಹತ್ವ ನೀಡುತ್ತಿದ್ದಾರೆ. ಇದು ಸರ್ಕಾರಿ ಯೋಜನೆಯಲ್ಲ, ಇದು ದೇಶದ ಭಾವನೆ ಎಂದೂ ತಿಳಿಸಿದ್ದಾರೆ. 

click me!