ರಾಘವ್ ಚಡ್ಡಾ ಅವರಿಗೆ ವರ್ಷದ ಹಿಂದೆ ಹಂಚಿಕೆಯಾಗಿದ್ದ ಕೇಂದ್ರ ದೆಹಲಿಯ ಪ್ಯಾಂಡರಾ ರಸ್ತೆಯಲ್ಲಿರುವ ಬಂಗಲೆಯನ್ನು ತೆರವು ಮಾಡುವಂತೆ ರಾಜ್ಯಸಭಾ ಸೆಕ್ರೆಟರಿಯೇಟ್ ಇತ್ತೀಚೆಗೆ ಆದೇಶಿಸಿತ್ತು.
ನವದೆಹಲಿ (ಜೂನ್ 8, 2023): ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರ ಅಧಿಕೃತ ಬಂಗಲೆ ಹಂಚಿಕೆಯನ್ನು ರದ್ದುಗೊಳಿಸಿದ ದೆಹಲಿ ನ್ಯಾಯಾಲಯದ ಆದೇಶವನ್ನು ತಡೆಹಿಡಿದ ನಂತರ ಅವರ ಅಧಿಕೃತ ಬಂಗಲೆಯ ವಿವಾದವು ಉನ್ನತ ನ್ಯಾಯಾಲಯದ ಮೆಟ್ಟಿಲೇರಲಿದೆ.
34 ವರ್ಷದ ರಾಘವ್ ಚಡ್ಡಾ ಅವರಿಗೆ ಒಂದು ವರ್ಷದ ಹಿಂದೆ ಹಂಚಿಕೆಯಾಗಿದ್ದ ಕೇಂದ್ರ ದೆಹಲಿಯ ಪ್ಯಾಂಡರಾ ರಸ್ತೆಯಲ್ಲಿರುವ ಬಂಗಲೆಯನ್ನು ತೆರವು ಮಾಡುವಂತೆ ರಾಜ್ಯಸಭಾ ಸೆಕ್ರೆಟರಿಯೇಟ್ ಇತ್ತೀಚೆಗೆ ಆದೇಶಿಸಿತ್ತು. ಮೊದಲ ಬಾರಿ ಸಂಸದರಿಗೆ ನೀಡುವ ಬಂಗಲೆಗಿಂತ ಉನ್ನತ ದರ್ಜೆಯ ಬಂಗಲೆ ನೀಡಲಾಗಿದೆ. ಈ ಹಿನ್ನೆಲೆ ಅದನ್ನು ತೆರವು ಮಾಡುವಂತೆ ಸೂಚನೆ ನೀಡಲಾಗಿತ್ತು.
ಇದನ್ನು ಓದಿ: ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ನಿಶ್ಚಿತಾರ್ಥ: ಭಾವಿ ಪತಿ ಜೊತೆ ನಟಿಯ ರೊಮ್ಯಾಟಿಂಕ್ ಫೋಟೋ
ಆದರೆ, ಪಟಿಯಾಲ ಹೌಸ್ ನ್ಯಾಯಾಲಯವು ಆ ಆದೇಶಕ್ಕೆ ತಡೆ ನೀಡಿದ್ದು, ತನ್ನ ಹೆತ್ತವರೊಂದಿಗೆ ಬಂಗಲೆಯಲ್ಲಿ ತಂಗಿದ್ದ ರಾಜ್ಯಸಭಾ ಸಂಸದ ರಾಘವ ಚಡ್ಡಾ ಅವರನ್ನು ಕಾನೂನು ಪ್ರಕ್ರಿಯೆಯಿಲ್ಲದೆ ಹೊರಹಾಕಲಾಗುವುದಿಲ್ಲ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುಧಾಂಶು ಕೌಶಿಕ್ ಹೇಳಿದ್ದಾರೆ. ಈ ಸಂಬಂಧ ಜುಲೈ 10 ರಂದು ಮುಂದಿನ ವಿಚಾರಣೆ ನಡೆಯಲಿದೆ.
ಆದರೆ, ಈ ತೀರ್ಪನ್ನು ಪ್ರಶ್ನಿಸಲಾಗುವುದು ಎಂದು ರಾಜ್ಯಸಭಾ ವಸತಿ ಸಮಿತಿ ಮುಖ್ಯಸ್ಥ ಸಿಎಂ ರಮೇಶ್ ಹೇಳಿದ್ದು, ಮೊದಲ ಬಾರಿಗೆ ಸಂಸದರಾಗಿರುವ ರಾಘವ ಚಡ್ಡಾ ಅವರು ಸಾಮಾನ್ಯವಾಗಿ ಮಾಜಿ ಕೇಂದ್ರ ಮಂತ್ರಿಗಳು, ಮಾಜಿ ರಾಜ್ಯಪಾಲರು ಅಥವಾ ಮಾಜಿ ಮುಖ್ಯಮಂತ್ರಿಗಳಿಗೆ ನಿಗದಿಪಡಿಸಲಾದ ಟೈಪ್ 7 ಬಂಗಲೆಗೆ ಅರ್ಹರಲ್ಲ ಎಂದು ಹೇಳಿದರು. ಅಲ್ಲದೆ, ಬಿಜೆಪಿ ಸಂಸದ ರಾಧಾ ಮೋಹನ್ ದಾಸ್ ಅವರನ್ನೂ ಟೈಪ್ 7 ರಿಂದ ಟೈಪ್ 5 ಬಂಗಲೆಗೆ ಸ್ಥಳಾಂತರಿಸಲಾಗಿದೆ ಎಂದೂ ರಮೇಶ್ ಹೇಳಿದ್ದಾರೆ. ಮತ್ತು ಹಿಂದಿನ ಹಂಚಿಕೆಗಳನ್ನು ರಾಜ್ಯಸಭಾ ಅಧ್ಯಕ್ಷರು ಮತ್ತು ವಸತಿ ಸಮಿತಿಯಿಂದ ತಿದ್ದುಪಡಿ ಮಾಡಲಾಗಿದೆ ಎಂದೂ ಹೇಳಿದರು.
ಇದನ್ನೂ ಓದಿ: ಪರಿಣೀತಿ ಚೋಪ್ರಾ ಮತ್ತು ರಾಘವ್ ನಿಶ್ಚಿತಾರ್ಥದ ಸುಂದರ ಫೋಟೋಗಳು
ರದ್ದತಿ ನೋಟಿಸ್ ಬಂದ ನಂತರ ಎಎಪಿ ಸಂಸದರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ನೋಟಿಸ್ ಅನ್ನು ಕಾನೂನುಬಾಹಿರ ಎಂದು ಘೋಷಿಸಲು ಕೇಳಿದ್ದಲ್ಲದೆ, ‘ಮಾನಸಿಕ ಸಂಕಟ ಮತ್ತು ಕಿರುಕುಳ’ಕ್ಕಾಗಿ 5.50 ಲಕ್ಷ ರೂ. ಪರಿಹಾರವನ್ನು ಕೋರಿದ್ದರು. ಹಾಗೆ, ಜುಲೈ 6, 2022 ರಂದು ತನಗೆ ಟೈಪ್ 6 ಬಂಗಲೆಯನ್ನು ಮಂಜೂರು ಮಾಡಲಾಗಿತ್ತು. ಆದರೆ, ತಾನು ಆಗಸ್ಟ್ 29 ರಂದು ರಾಜ್ಯಸಭಾ ಸೆಕ್ರೆಟರಿಯೇಟ್‌ಗೆ ಪತ್ರ ಬರೆದು ಟೈಪ್ 7 ವಸತಿಗಾಗಿ ವಿನಂತಿಸಿದ್ದೆ
ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಹಾಗೂ ರಾಘವ್ ಚಡ್ಡಾ ಪ್ರಕಾರ, ಅವರಿಗೆ ಸೆಪ್ಟೆಂಬರ್ 3 ರಂದು ರಾಜ್ಯಸಭೆಯ ಪೂಲ್‌ನಿಂದ ಪ್ರಸ್ತುತ ಬಂಗಲೆಯನ್ನು ನಿಯೋಜಿಸಲಾಯಿತು ಎಂದೂ ಹೇಳಿದರು. ಬಳಿಕ ರಾಘವ್ ಚಡ್ಡಾ ಅವರು ಹಂಚಿಕೆಯನ್ನು ಒಪ್ಪಿಕೊಂಡರು ಮತ್ತು ನವೀಕರಣಗಳನ್ನು ನಡೆಸಿದ ನಂತರ ನವೆಂಬರ್‌ನಲ್ಲಿ ತಮ್ಮ ಪೋಷಕರೊಂದಿಗೆ ತೆರಳಿದರು. ಹಂಚಿಕೆಯನ್ನು ಅಧಿಕೃತ ಗೆಜೆಟ್‌ನಲ್ಲಿಯೂ ತಿಳಿಸಲಾಗಿದೆ.
ಇದನ್ನೂ ಓದಿ: ಭಾವುಕಳಾದ ಭಾವಿ ಪತ್ನಿ ಪರಿಣೀತಿ ಕಣ್ಣೀರೊರೆಸಿದ ರಾಘವ್ ಚಡ್ಡ
ಆದರೆ, ‘ನಿರಂಕುಶವಾಗಿ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ’ ಎಂದು ತಿಳಿದುಕೊಂಡಿದ್ದು, ಈ ವರ್ಷದ ಮಾರ್ಚ್ 3 ರಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಆಪ್ ಸಂಸದ ಹೇಳಿದರು. ಯಾವುದೇ ಕ್ರಮ ಕೈಗೊಳ್ಳದಂತೆ ಅಥವಾ ಬಂಗಲೆಯನ್ನು ಬೇರೆಯವರಿಗೆ ಹಂಚಿಕೆ ಮಾಡದಂತೆ ರಾಜ್ಯಸಭಾ ಸೆಕ್ರೆಟರಿಯೇಟ್ ಅನ್ನು ನಿರ್ಬಂಧಿಸುವಂತೆಯೂ ರಾಘವ್ ಚಡ್ಡಾ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆಪ್ ನಾಯಕನ ಜೊತೆ ಮದುವೆ; ಕೊನೆಗೂ ಮೌನ ಮುರಿದ ನಟಿ ಪರಿಣೀತಿ ಚೋಪ್ರಾ