ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ, ವಿವಾದ ಸೃಷ್ಟಿಸಿದ ಸಚಿವ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ!

By Suvarna News  |  First Published Oct 9, 2022, 5:54 PM IST

ದೆಹಲಿಯಲ್ಲಿ ನಡೆದ ಮತಾಂತರ ಕಾರ್ಯಕ್ರಮದಲ್ಲಿ ಹಿಂದೂ ವಿರೋಧಿ ಪ್ರಮಾಣ ಮಾಡಿಸಿದ ಆಮ್ ಆದ್ಮಿ ಸಚಿವ ರಾಜೇಂದ್ರ ಪಾಲ್ ಗೌತಮ್ ಭಾರಿ ವಿವಾದ ಸೃಷ್ಟಿಸಿದ್ದರು.  ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದರು. ಸ್ವತಃ ಆಪ್ ನಾಯಕರು ಸಚಿವರ ವಿರುದ್ದ ಅಸಮಾಧಾನ ಹೊರಹಾಕಿದ್ದರು. ತೀವ್ರ ಒತ್ತಡಕ್ಕೆ ಸಿಲುಕಿದ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ ನೀಡಿದ್ದಾರೆ.
 


ನವದೆಹಲಿ(ಅ.09): ಆರವಿಂದ್ ಕೇಜ್ರಿವಾಲ್ ಗುಜರಾತ್ ಹಾಗೂ ಹಿಮಾಚಲ ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಸಚಿವ ರಾಜೇಂದ್ರ ಪಾಲ್ ಗೌತಮ್ ಭಾರಿ ವಿವಾದ ಸೃಷ್ಟಿಸಿದ್ದರು. ಮತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಮತಾಂತರವಾಗುತ್ತಿದ್ದವರಲ್ಲಿ ಹಿಂದೂ ವಿರೋಧಿ ಪ್ರಮಾಣ ಮಾಡಿಸಿದ್ದಾರೆ. ಇದರ ಬೆನ್ನಲ್ಲೇ ಭಾರಿ ಆಕ್ರೋಶ ಭುಗಿಲೆದ್ದಿತು.  ಬಿಜೆಪಿ ಸಚಿವರ ವಜಾಕ್ಕೆ ಆಗ್ರಹಿಸಿತ್ತು. ಇದು ಆಮ್ ಆದ್ಮಿ ಪಾರ್ಟಿ‌ಗೆ ತೀವ್ರ ಹಿನ್ನಡೆ ತಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಆಮ್ ಆದ್ಮಿ ಪಾರ್ಚಿ ಡ್ಯಾಮೇಜ್ ಕಂಟ್ರೋಲ್ ಮಾಡಲು ರಾಜೀನಾಮೆಗೆ ಸೂಚಿಸಿತ್ತು. ಇದರಂತೆ ರಾಜೇಂದ್ರ ಪಾಲ್ ಗೌತಮ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

 ಗೌತಮ್‌ ಅವರೇ ಸ್ಥಾಪಿಸಿರುವ ‘ಜೈ ಭೀಮ್‌ ಮಿಷನ್‌’ ಎಂಬ ಸಂಸ್ಥೆ ಪ್ರತಿವರ್ಷ ಹಿಂದೂ ಧರ್ಮದಿಂದ ಇತರ ಧರ್ಮಕ್ಕೆ ಮತಾಂತರವಾಗುವ ಕಾರ್ಯಕ್ರಮ ಏರ್ಪಿಡಿಸುತ್ತಲೇ ಬಂದಿದೆ. ಈ ಬಾರಿ 10,000ಕ್ಕೂ ಹೆಚ್ಚು ಮಂದಿ ಹಿಂದೂ ಧರ್ಮದಿಂದ ಬೌದ್ಧ ದರ್ಮಕ್ಕೆ ಮತಾಂತವಾಗಿದ್ದಾರೆ.  ಈ ಕಾರ್ಯಕ್ರಮದಲ್ಲಿ  ಪಾಲ್ ಗೌತಮ್,  ಹಿಂದೂ ದೇವರಲ್ಲಿ ನಂಬಿಕೆ ಇಲ್ಲ. ಹಿಂದೂ ದೇವರನ್ನೂ ಪೂಜಿಸಬೇಡಿ. ಅಸಮಾನತೆಯ ಹಿಂದೂ ಧರ್ಮ ತ್ಯಜಿಸುತ್ತಿದ್ದೇನೆ ಎಂದು ಪ್ರಮಾಣ ಮಾಡಿಸಿದ್ದಾರೆ.

Tap to resize

Latest Videos

ದೆಹಲಿಯ ಆಪ್‌ ಸಚಿವನಿಂದ Hindu ವಿರೋಧಿ ಪ್ರಮಾಣ: ಗೌತಮ್ ವಜಾ ಮಾಡಲು BJP ಆಗ್ರಹ  

ವೇದಿಕೆಯ ಮೇಲೆ ಕೇಸರಿ ವಸ್ತ್ರ ಧರಿಸಿದ್ದ ಬೌದ್ಧ ಬಿಕ್ಕುವೊಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿಂದೂಗಳಿಗೆ ‘ನೀವು ನಿಮ್ಮ ಮೂಲಧರ್ಮದಿಂದ ಬೇರೆಯಾಗಿ ಮತ್ತು ದೇವರನ್ನು ಪೂಜಿಸುವುದನ್ನು ಬಿಟ್ಟುಬಿಡಿ. ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಯಾವುದೇ ನಂಬಿಕೆ ಇಲ್ಲ ಮತ್ತು ಅವರನ್ನು ನಾನು ಪೂಜಿಸುವುದೂ ಇಲ್ಲ. ದೇವರ ಪುನರವತಾರ ಎಂದು ಹೇಳಲಾಗುವ ರಾಮ ಮತ್ತು ಕೃಷ್ಣನಲ್ಲೂ ನನಗೆ ನಂಬಿಕೆ ಇಲ್ಲ ಹಾಗೂ ಅವರನ್ನು ನಾನು ಪೂಜಿಸುವುದಿಲ್ಲ. ಬುದ್ಧ ವಿಷ್ಣುವಿನ ಪುನರವತಾರ ಎಂಬುದನ್ನು ನಾನು ಒಪ್ಪುವುದಿಲ್ಲ. ಇಂಥ ವಾದ ಶುದ್ಧ ಹುಚ್ಚುತನ ಮತ್ತು ಸುಳ್ಳಿನ ಅಪಪ್ರಚಾರ ಎಂದು ನಾನು ನಂಬಿದ್ದೇನೆ. ನಾನು ಶ್ರಾದ್ಧ ಮತ್ತು ಪಿಂಡದಾನವನ್ನು ಮಾಡುವುದಿಲ್ಲ. ಬ್ರಾಹ್ಮಣರು ಯಾವುದೇ ಆಚರಣೆ ಮಾಡಲು ನಾನು ಬಿಡುವುದಿಲ್ಲ. ನಾನು ಈ ಮೂಲಕ ಮಾನವ ಕುಲಕ್ಕೆ ಹಾನಿಕಾರಕವಾದ, ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಅಡ್ಡಿಯಾಗಿರುವ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ, ಏಕೆಂದರೆ ಹಿಂದೂ ಧರ್ಮ ಅಸಮಾನತೆಯನ್ನು ಆಧರಿಸಿದೆ ಮತ್ತು ನಾನು ಬುದ್ಧಿಸಂ ಅನ್ನು ನನ್ನ ಧರ್ಮವಾಗಿ ಸ್ವೀಕರಿಸುತ್ತಿದ್ದೇನೆ’ ಎಂದು ಬೋಧಿಸುವ ಅಂಶಗಳು ವಿಡಿಯೋದಲ್ಲಿದೆ.

ಗುಜರಾತ್ ಚುನಾವಣೆಗೆ 12 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆಮ್ ಆದ್ಮಿ!

ಈ ಬಗ್ಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ‘ಕೇಜ್ರಿವಾಲ್‌ರ ಆಪ್‌ನಿಂದ ಹಿಂದೂಗಳಿಗೆ ಅವಮಾನ ಆಗಿದೆ. ಒಂದೆಡೆ ದೇವಸ್ಥಾನಕ್ಕೆ ತೆರಳಿ ಕೇಜ್ರಿವಾಲ್‌ ನಾಟಕ ಮಾಡುತ್ತಾರೆ. ಇನ್ನೊಂದು ಕಡೆ ಅವರದ್ದೇ ಸಚಿವ ಹಿಂದೂ ದೇವರ ವಿರುದ್ಧ ಪ್ರತಿಜ್ಞೆ ಸ್ವೀಕರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಸಾರ್ವಜನಿಕವಾಗಿಯೂ ಆಮ್ ಆದ್ಮಿ ಪಾರ್ಟಿ ವಿರುದ್ಧ ಆಕ್ರೋಶ ಕೇಳಿಬಂದಿತ್ತು. ಇದು ಆಪ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
 

click me!