ಪಂಜಾಬ್ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಆಪ್!

By Suvarna NewsFirst Published Mar 14, 2024, 5:18 PM IST
Highlights

ಪಂಜಾಬ್ ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ 8 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಪಂಜಾಬ್‌ನಲ್ಲಿ ಇಂಡಿಯಾ ಮೈತ್ರಿ ಬದಲು ಏಕಾಂಗಿ ಹೋರಾಟ ಘೋಷಣೆ ಮಾಡಿರುವ ಆಪ್ ಇದೀಗ ಮೊದಲ ಪಟ್ಟಿ ಪ್ರಕಟಿಸಿದೆ. ಈ ಪೈಕಿ ಕಾಂಗ್ರೆಸ್ ಮಾಜಿ ಶಾಸಕರಿಗೂ ಆಪ್ ಟಿಕೆಟ್ ನೀಡಿದೆ.
 

ಅಮೃತಸರ(ಮಾ.14) ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಕೌಂಟ್‌ಡೌನ್ ಶುರುವಾಗಿದೆ. ಇತ್ತ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿದೆ. ಇದೀಗ ಆಪ್ ಸರದಿ. ಪಂಜಾಬ್‌ನಲ್ಲಿ ಯಾವುದೇ ಮೈತ್ರಿ ಎಲ್ಲ ಎಂದು ಘೋಷಿಸಿರುವ ಆಪ್, ಇದೀಗ ಮೊದಲ ಪಟ್ಟಿ ಪ್ರತಟಿಸಿದೆ. 13 ಲೋಕಸಭಾ ಕ್ಷೇತ್ರಗಳ ಬೈಕಿ 8 ಕ್ಷೇತ್ರಗಳಿಗೆ ಆಪ್ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ ತೊರೆದು ಆಪ್ ಸೇರಿದ ನಾಯಕನಿಗೂ ಟಿಕೆಟ್ ನೀಡಲಾಗಿದೆ. ಪಂಜಾಬ್ ಸಂಪುಟದ 5 ಸಚಿವರಿಗೂ ಟಿಕೆಟ್ ಘೋಷಿಸಿದೆ. ಜೊತೆಗೆ ಒಬ್ಬ ಹಾಲಿ ಸಂಸದನಿಗೂ ಆಪ್ ಟಿಕೆಟ್ ನೀಡಿದೆ.

ಭಗವಂತ್ ಮಾನ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಡಾ.ಬಲ್ಬೀರ್ ಸಿಂಗ್, ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದಿಯಾನ್, ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀಟ್ ಹೆಯರ್, NRI ಸಚಿವಾಲಯದ ಸಚಿವ ಕುಲ್ದೀಪ್ ಸಿಂಗ್ ಧಲೀಲವಾಲ್, ಸಾರಿಗೆ ಸಚಿವ ಲಲ್ಜಿತ್ ಸಿಂಗ್ ಭುಲ್ಲಾರ್‌ಗೆ ಟಿಕೆಟ್ ನೀಡಿಲಾಗಿದೆ. ಜಲಂಧರ್‌ನಿಂದ ಆಪ್ ಹಾಲಿ ಸಂಸದ ಸುಶೀಲ್ ಕುಮಾರ್ ರಿಂಗ್ ಹಾಗೂ ಕಾಂಗ್ರೆಸ್‌ನಿಂದ ಆಪ್ ಸೇರಿಕೊಂಡ ಮಾಜಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ , ಪಂಜಾಬ್ ನಟ ಕರಮಜೀತ್ ಅನ್ಮೋಲ್‌ಗೆ ಟಿಕೆಟ್ ನೀಡಲಾಗಿದೆ. 

Latest Videos

ಲೋಕಸಭಾ ಚುನಾವಣೆಗೆ 4 ರಾಜ್ಯಗಳಲ್ಲಿ ಹೊಂದಾಣಿಕೆ ಸೀಟು ಅಂತಿಮಗೊಳಿಸಿದ ಕಾಂಗ್ರೆಸ್

ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ಹಾಗೂ ಕ್ಷೇತ್ರ

ಅಮೃತಸರ: ಕುಲ್ದೀಪ್ ಸಿಂಗ್ ದಲೀವಾಲ್
ಖದೂರ್ ಸಾಹೀಬ್: ಲಲ್ಜಿತ್ ಸಿಂಗ್ ಭುಲ್ಲಾರ್
ಜಲಂಧರ್: ಸುಶೀಲ್ ಕುಮಾರ್ ರಿಂಕು
ಫತೇಘಡ ಸಾಹೀಬ್:ಗುರ್ಪ್ರೀತ್ ಸಿಂಗ್ ಜಿಪಿ
ಫರೀದ್‌ಕೋಟ್ : ಕರಮಜೀತ್ ಅನ್ಮೋಲ್
ಬತಿಂದಾ: ಗುರ್ಮೀತ್ ಸಿಂಗ್ ಖುದಿಯಾನ್
ಸಂಗ್ರೂರ್: ಗುರ್ಮಿತ್ ಸಿಂಗ್ ಮೀಟ್ ಹೇಯರ್
ಪಟಿಯಾಲಾ: ಡಾ.ಬಲ್ಬೀರ್ ಸಿಂಗ್

 

📢 Announcement! 📢

The Aam Aadmi Party proudly presents its candidates for the upcoming Lok Sabha Elections 2024 in Punjab: pic.twitter.com/q1xwSab32v

— AAP (@AamAadmiParty)

 

ಇಂಡಿಯಾ ಮೈತ್ರಿ ಒಕ್ಕೂಟ ಆಮ್ ಆದ್ಮಿ ಪಾರ್ಟಿ ಜೊತೆ ದೆಹಲಿ, ಗುಜರಾತ್ ಹಾಗೂ ಹರ್ಯಾಣದಲ್ಲಿ ಸೀಟು ಹಂಚಿಕೆ ಮಾಡಿದೆ.ಆದರೆ ಆಪ್ ಮೊದಲೇ ಘೋಷಿಸದಂತೆ ಪಂಜಾಬ್‌ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ. ಇನ್ನುಳಿದ 5 ಕ್ಷೇತ್ರಗಳಿಗೆ ಶೀಘ್ರದಲ್ಲೇ ಆಪ್ ಅಭ್ಯರ್ಥಿಗಳ ಘೋಷಣೆ ಮಾಡಲಿದೆ.

Eshwarappa on BSY: ನನ್ನ ಮಗನಿಗೆ ಬಿಎಸ್‌ವೈ ಯಾಕೆ ಟಿಕೆಟ್ ಕೊಡಿಸಲಿಲ್ಲ, ನನಗೆ ಮೋಸ ಮಾಡಿದ್ದಾರೆ: ಕೆ.ಎಸ್ ಈಶ್ವರಪ್ಪ

ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟ ಮೈತ್ರಿ ವರ್ಕೌಟ್ ಆಗಿಲ್ಲ. ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಏಕಾಂಗಿ ಹೋರಾಟ ಮಾಡುತ್ತಿದೆ. ಈಗಾಗಲೇ ಅಭ್ಯರ್ಥಿಗಳನ್ನೂ ಘೋಷಿಸಿದೆ. ಮಮತಾ ಬ್ಯಾನರ್ಜಿ ನಡೆ ಕಾಂಗ್ರೆಸ್‌ಗೆ ತೀವ್ರ ಅಸಮಾಧಾನ ತಂದಿತ್ತು.

click me!