ಕುವೈತ್ ಬೆಂಕಿ ದುರಂತದಲ್ಲಿ ಮಡಿದ 45 ಭಾರತೀಯರ ಶವದೊಂದಿಗೆ ಕೊಚ್ಚಿಗೆ ಆಗಮಿಸಿದ ಐಎಎಫ್ ವಿಶೇಷ ವಿಮಾನ

By Anusha Kb  |  First Published Jun 14, 2024, 11:29 AM IST

ಏರ್‌ಪೋರ್ಸ್‌ನ ವಿಶೇಷ ವಿಮಾನ ಕುವೈತ್‌ನಲ್ಲಿ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ್ದ 45 ಭಾರತೀಯರ ಶವದೊಂದಿಗೆ ಕೊಚ್ಚಿಗೆ ಆಗಮಿಸಿದೆ. ಐಎಎಫ್‌ನ ಸಿ-130ಜೆ ಟ್ರಾನ್ಸ್‌ಪೋರ್ಟ್ ವಿಮಾನದಲ್ಲಿ ದುರಂತದಲ್ಲಿ ಮಡಿದ ಕಾರ್ಮಿಕರ ಶವವನ್ನು ತಾಯ್ನಾಡಿಗೆ ಕರೆ ತರಲಾಗಿದೆ.


ಭಾರತೀಯ ಏರ್‌ಪೋರ್ಸ್‌ನ ವಿಶೇಷ ವಿಮಾನ ಕುವೈತ್‌ನಲ್ಲಿ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ್ದ 45 ಭಾರತೀಯರ ಶವದೊಂದಿಗೆ ಕೊಚ್ಚಿಗೆ ಆಗಮಿಸಿದೆ. ಐಎಎಫ್‌ನ ಸಿ-130ಜೆ ಟ್ರಾನ್ಸ್‌ಪೋರ್ಟ್ ವಿಮಾನದಲ್ಲಿ ದುರಂತದಲ್ಲಿ ಮಡಿದ ಕಾರ್ಮಿಕರ ಶವವನ್ನು ತಾಯ್ನಾಡಿಗೆ ಕರೆ ತರಲಾಗಿದೆ. ಭಾರತದ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್ ಕೂಡ ಈ ವಿಮಾನದಲ್ಲಿ ಕೊಚ್ಚಿಗೆ ಆಗಮಿಸಿದ್ದರು. \

ಎರಡು ದಿನಗಳ ಹಿಂದೆ ಕುವೈತ್‌ನ 6 ಅಂತಸ್ಥಿನ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 45 ಜನ ಭಾರತೀಯರು ಸಜೀವ ದಹನಗೊಂಡಿದ್ದರು. ಘಟನೆಯ ನಂತರ ಕುವೈತ್‌ಗೆ  ತೆರಳಿದ್ದ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್‌ನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಶವಗಳನ್ನು ಶೀಘ್ರವಾಗಿ ತಾಯ್ನಾಡಿಗೆ ಸಾಗಿಸುವುದಕ್ಕೆ ನೆರವಾದರು. ಜೊತೆಗೆ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯರ ಕ್ಷೇಮ ವಿಚಾರಿಸಿದ್ದರು. 

Tap to resize

Latest Videos

undefined

ಕುವೈತ್‌ ಅಗ್ನಿ ದುರಂತ: ಕನ್ನಡಿಗೆ ಸೇರಿ 45 ಭಾರತೀಯರು ಬಲಿ

: The IAF aircraft carrying the bodies of 45 Kuwait fire incident victim landed at the Kochi airport. pic.twitter.com/7aZ8nlVKzd

— upuknews (@upuknews1)


ಕುವೈತ್ ಅಗ್ನಿ ದುರಂತದಲ್ಲಿ ಮೃತರಾದ 45 ಭಾರತೀಯರಲ್ಲಿ 23 ಜನ ಕೇರಳದವರೇ ಆಗಿದ್ದಾರೆ. ಈ ದುರಂತವೂ ಕುವೈತ್ ಹಾಗೂ ಭಾರತದಲ್ಲಿ ಇರುವ ಅವರ ಸಂಬಂಧಿಗಳು ಆಘಾತಕ್ಕೀಡಾಗುವಂತೆ ಮಾಡಿದೆ. ಕೇರಳದವರ ಜೊತೆಗೆ ತಮಿಳುನಾಡಿನ 7 ಜನ ಆಂಧ್ರ ಪ್ರದೇಶದ ಮೂವರು ಹಾಗೂ ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರ್ಯಾಣ ಪಂಜಾಬ್‌ನ ಹಾಗೂ ಪಶ್ಚಿಮ ಬಂಗಾಳದ ತಲಾ ಒಬ್ಬರು ಈ ದುರಂತದಲ್ಲಿ ಮಡಿದಿದ್ದಾರೆ.

ಘಟನೆಗೆ ಏನು ಕಾರಣ ಎಂಬ ಬಗ್ಗೆ ಕುವೈತ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಜೊತೆಗೆ ಈ ದುರಂತದ ಸಂತ್ರಸ್ತರ ಕುಟುಂಬಗಳಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಘಟನೆಯಿಂದ ತೊಂದರೆಗೊಳಗಾದ ಕುಟುಂಬಕ್ಕೆ ಸಾಧ್ಯವಾಗುವ ಎಲ್ಲಾ ಸಹಾಯ ಮಾಡುವುದಾಗಿ ಹೇಳಿದ್ದರು. 

ಸೌದಿಯಲ್ಲಿ 195 ಭಾರತೀಯ ಕಾರ್ಮಿಕರಿದ್ದ ಕಟ್ಟಡಕ್ಕೆ ಬೆಂಕಿ, 40 ಸಾವು: ಹೆಲ್ಪ್‌ಲೈನ್ ತೆರೆದ ರಾಯಭಾರಿ ಕಚೇರಿ

ದುರಂತ ನಡೆದ ಕಟ್ಟಡದಲ್ಲಿ ತಮಿಳುನಾಡು ಹಾಗೂ ಕೇರಳದ 195 ಕಾರ್ಮಿಕರು ವಾಸವಾಗಿದ್ದರು. ಕುವೈತ್‌ನ ದಕ್ಷಿಣದ ಮಂಗಾಫ್‌ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ.  ಅಡುಗೆಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಕಟ್ಟಡದ ತುಂಬೆಲ್ಲಾ ಆವರಿಸಿಕೊಂಡು ಈ ಭಾರಿ ದುರಂತ ಸಂಭವಿಸಿತ್ತು.   ಕೇರಳ ಮೂಲದ ಉದ್ಯಮಿ ಕೆ.ಜಿ. ಅಬ್ರಾಹಾಂ ಒಡೆತನದ ಕಟ್ಟಡ ಇದಾಗಿತ್ತು.

click me!