
ನವದೆಹಲಿ (ಮಾ. 24): ವ್ಯಕ್ತಿಯೊಬ್ಬನ ಗುರುತಿನ ಚೀಟಿ ಜಮ್ಮು ಮತ್ತು ಕಾಶ್ಮೀರದ್ದಾಗಿದೆ ( Jammu and Kashmir ID ) ಎನ್ನುವ ಕಾರಣಕ್ಕೆ ಹೋಟೆಲ್ ರಿಸರ್ವೇಷನ್ ( HOTEL RESERVATION ) ಕ್ಯಾನ್ಸಲ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಜಮ್ಮು & ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ ( J&K Students Association Nasir Khuehami) ಪೋಸ್ಟ್ ಮಾಡಿದ ವೀಡಿಯೋದಲ್ಲಿ ಹೋಟೆಲ್ ನ ಫ್ರಂಟ್ ಡೆಸ್ಕ್ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಜಮ್ಮು ಮತ್ತು ಕಾಶ್ಮೀರದ ಐಡಿಗಳನ್ನು ಸ್ವೀಕರಿಸದಂತೆ ಪೊಲೀಸರು ಹೇಳಿರುವ ಕಾರಣದಿಂದ ಗ್ರಾಹಕರಿಗೆ ರಿಸರ್ವೇಷನ್ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಖುಹಮಿ ಒಂದು ನಿಮಿಷದ 51 ಸೆಕೆಂಡ್‌ಗಳ ದೀರ್ಘ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. " ದಿ ಕಾಶ್ಮೀರ್ ಫೈಲ್ಸ್ (The Kashmir Files ) ಚಿತ್ರದ ಪರಿಣಾಮ ಈಗ ಗೊತ್ತಾಗುತ್ತಿದೆ. ದೇಶ ನೀಡಿದ ಗುರುತಿನ ಚೀಟಿ ಸೇರಿದಂತೆ ಇತರ ದಾಖಲೆಗಳನ್ನು ನೀಡಿದ ಹೊರತಾಗಿಯೂ ದೆಹಲಿಯಲ್ಲಿ ಹೋಟೆಲ್ ವೊಂದು ಕಾಶ್ಮೀರಿ ವ್ಯಕ್ತಿಗೆ ರೂಮ್ ರಿಸರ್ವೇಷನ್ ಅನ್ನು ನಿರಾಕರಿಸಿದೆ. ಕಾಶ್ಮೀರಿಯಾಗಿರುವುದು ಈಗ ಅಪರಾಧವೇ? ಎಂದು ಅವರು ಪ್ರಶ್ನೆ ಮಾಡಿ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿರುವ ಮಹಿಳೆ ತನ್ನ ಹಿರಿಯ ಅಧಿಕಾರಿಗೆ ಕರೆ ಮಾಡಿದ ಬಳಿಕ ಗ್ರಾಹಕರಿಗೆ ಹೇಳುವ ಸಮಯದಲ್ಲಿ “ಜಮ್ಮು ಮತ್ತು ಕಾಶ್ಮೀರದಿಂದ ಐಡಿಗಳನ್ನು ಸ್ವೀಕರಿಸದಂತೆ ಪೊಲೀಸರು ನಮಗೆ ಸೂಚಿಸಿದ್ದಾರೆ' ಎಂದು ತಿಳಿಸುತ್ತಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ ದೆಹಲಿ ಪೊಲೀಸರು ತಾವು ಅಂತಹ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿ ಪೊಲೀಸ್ (Delhi Police) ಈ ಕುರಿತಾಗಿ ಟ್ವೀಟ್ ಮಾಡಿದ್ದು, “ಒಂದು ಉದ್ದೇಶಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಜಮ್ಮು & ಕಾಶ್ಮೀರ ಗುರುತು ಚೀಟಿ ಹೊಂದಿದ್ದ ಕಾರಣಕ್ಕೆ ಹೋಟೆಲ್ ಬುಕ್ಕಿಂಗ್ ನಿರಾಕರಿಸಲಾಗಿದೆ. ಪೊಲೀಸರ ನಿರ್ದೇಶನದಂತೆ ರದ್ದುಪಡಿಸಿದ್ದೇವೆ ಎಂದು ಕಾರಣ ನೀಡಲಾಗಿದೆ. ದೆಹಲಿ ಪೊಲೀಸರು ಅಂತಹ ಯಾವುದೇ ನಿರ್ದೇಶನವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ನೆಟಿಜನ್‌ಗಳು ಇಂತಹ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಪೊಲೀಸ್ ಪಡೆಗಳನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದು ಶಿಕ್ಷೆ ವಿಧಿಸಲೂ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
Kishore Pathikonda: 'ಜೇಮ್ಸ್'ಗೆ 'ದಿ ಕಾಶ್ಮೀರ್ ಫೈಲ್' ಅಲ್ಲ 'ಆರ್‌ಆರ್‌ಆರ್' ಅಡ್ಡಿ
ಈ ಕುರಿತಾಗಿ ಹೋಟೆಲ್ ಮಾಲೀಕ ಕೂಡ ಸ್ಪಷ್ಟೀಕರಣ ನೀಡಿದ್ದಾರೆ. "ವಿಡಿಯೋದಲ್ಲಿ ಹೇಳಿರುವಂತೆ ಯಾವುದೂ ಕೂಡ ನಡೆದಿಲ್ಲ. ವಿಷಯಗಳನ್ನು ಭಿನ್ನವಾಗ ಹೈಲೈಟ್ ಮಾಡಲಾಗುತ್ತಿದೆಯಷ್ಟೇ. ಬಂದ ವ್ಯಕ್ತಿ ಖಾಸಗಿ ಆಪ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡಿದ್ದರು. ಆದರೆ, ನಮ್ಮಲ್ಲಿ ಎಲ್ಲಾ ಕೋಣೆಗಳು ತುಂಬಿದ್ದವು. ಇದ್ದ ಒಂದು ರೂಮ್ ನಲ್ಲಿ ಎಸಿ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ' ಎಂದು ಮಾಲೀಕ ರಾಕೇಶ್ ಕುಮಾರ್ ( Rakesh Kumar ) ಹೇಳಿದ್ದಾರೆ.
Nirmala Sitharaman: 370ನೇ ವಿಧಿ ರದ್ದು ಬಳಿಕ ಕಾಶ್ಮೀರದಲ್ಲಿ ಹಿಂಸೆ ಇಳಿಕೆ, ಹೂಡಿಕೆ ಪರಿಸರ ನಿರ್ಮಾಣ
ಅವರಿಗೆ ಅ ರೂಮ್ ಅನ್ನು ನೀಡಲು ಹೋದೆವು. ಈ ವೇಳೆ ಅವರು ರೂಮ್ ಅಲ್ಲಿ ಇರಲು ನಿರಾಕರಿಸಿದ್ದು ಮಾತ್ರವಲ್ಲದೆ ಫ್ರಂಟ್ ಡೆಸ್ಕ್ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾದೆ. ಜಮ್ಮು ಕಾಶ್ಮೀರದ ಐಡಿ ಹೊಂದಿರುವ ವ್ಯಕ್ತಿಗಳಿಗೆ ರೂಮ್ ನೀಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅವರೊಂದಿಗೆ ನಾವು ವ್ಯವಹಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ