ಡ್ರೋನ್‌ಗಳ ಮೂಲಕ ಉಗ್ರರನ್ನು ಹೊತ್ತು ತಂದು ಪಂಜಾಬ್ ಹಾಗೂ ಜಮ್ಮು ಕಾಶ್ಮೀರ ಗಡಿ ಪ್ರದೇಶದಲ್ಲಿ ಇಳಿಸುವುದು ಸಂಘಟನೆಯ ಗುರಿಯಾಗಿದೆ. ಅಲ್ಲದೇ ಪಂಜಾಬ್‌ನಲ್ಲಿ ಕಳೆದ ತಿಂಗಳು ಇದೇ ರೀತಿ ಉಗ್ರನೊಬ್ಬನನ್ನು ಇಳಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ನವದೆಹಲಿ (ಸೆಪ್ಟೆಂಬರ್ 16, 2023): ಡ್ರೋನ್‌ಗಳ ಮೂಲಕ ಭಾರತದ ಗಡಿಯೊಳಗೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಇದೀಗ ಡ್ರೋನ್ ಬಳಸಿ ಉಗ್ರರನ್ನು ಸಾಗಿಸಲು ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಡ್ರೋನ್‌ಗಳನ್ನು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಡ್ರೋನ್ ಹಿಡಿದು ಉಗ್ರನೊಬ್ಬ ಹಾರುತ್ತಿರುವ ವಿಡಿಯೋವನ್ನು ವರದಿಯಲ್ಲಿ ಲಗತ್ತಿಸಿದ್ದು, ಇದನ್ನು ಲಷ್ಕರ್ ತರಬೇತಿ ಕೇಂದ್ರದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ಡ್ರೋನ್‌ಗಳ ಮೂಲಕ ಉಗ್ರರನ್ನು ಹೊತ್ತು ತಂದು ಪಂಜಾಬ್ ಹಾಗೂ ಜಮ್ಮು ಕಾಶ್ಮೀರ ಗಡಿ ಪ್ರದೇಶದಲ್ಲಿ ಇಳಿಸುವುದು ಸಂಘಟನೆಯ ಗುರಿಯಾಗಿದೆ. ಅಲ್ಲದೇ ಪಂಜಾಬ್‌ನಲ್ಲಿ ಕಳೆದ ತಿಂಗಳು ಇದೇ ರೀತಿ ಉಗ್ರನೊಬ್ಬನನ್ನು ಇಳಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಮತ್ತೆ ಬಾಲ ಬಿಚ್ಚಿದ ಶತ್ರು ರಾಷ್ಟ್ರ, ಭಾರತೀಯ ಸೇನೆಯ ದಾರಿ ತಪ್ಪಿಸಲು ಉಗ್ರರ ಶಿಬಿರ ಸ್ಥಳಾಂತರಿಸಿದ ಪಾಕ್!
ಈ ಡ್ರೋನ್ ಶಕ್ತಿಶಾಲಿಯಾಗಿದ್ದು, ಸುಮಾರು 70 ಕೆಜಿ ಭಾರ ಹೊರಲು ಸಮರ್ಥವಾಗಿವೆ. ಹಾಗಾಗಿ ಇವು ಉಗ್ರ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲವು. ಅಲ್ಲದೇ ಇವು ಸುಮಾರು 60 ಕಿ.ಮೀ. ದೂರ ಸಾಗಬಲ್ಲ ಸಾಮರ್ಥ್ಯವನ್ನು ಹೊಂದಿವೆ ಎಂದು ವರದಿ ತಿಳಿಸಿದೆ. ಪ್ರಸ್ತುತ ಡ್ರೋನ್‌ಗಳನ್ನು ಬಳಸಿ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಪಂಜಾಬ್ ಮತ್ತು ಜಮ್ಮು ಕಾಶ್ಮೀರದ ಗಡಿ ಭಾಗಕ್ಕೆ ಸರಬರಾಜು ಮಾಡಲಾಗುತ್ತಿದೆ.
ಕಾಶ್ಮೀರದಲ್ಲಿ 4ನೇ ದಿನವೂ ಉಗ್ರ ನಿಗ್ರಹ ಕಾರ್‍ಯಾಚರಣೆ
ಶ್ರೀನಗರ: ಕಾಶ್ಮೀರದಲ್ಲಿ ಉಗ್ರರಿಗಾಗಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಸತತ ನಾಲ್ಕನೇ ದಿನವೂ ಮುಂದುವರೆದಿದೆ. ಡ್ರೋನ್, ಮಾರ್ಟರ್ ಶೆಲ್‌ಗಳನ್ನು ಬಳಸಿ ಶುಕ್ರವಾರ ಸೇನಾಪಡೆ ಕಾರ್ಯಾಚರಣೆ ನಡೆಸಿದ್ದು,ಇಂದೂ ಮುಂದುವರಿದಿದೆ. ಇದರ ನಡುವೆಯೇ ಗಾಯಗೊಂಡಿದ್ದ ಮತ್ತೊಬ್ಬ ಯೋಧ ಮೃತಪಟ್ಟಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಬೆಟ್ಟದ ಮೇಲೆ ಹೇಡಿಗಳಂತೆ ಅಡಿಗಿ ಕೂತ ಉಗ್ರರು, ಮತ್ತೊಬ್ಬ ಸೈನಿಕ ಹುತಾತ್ಮ!
ಬುಧವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 4 ಯೋಧರು ಮೃತಪಟ್ಟ ಬಳಿಕ ಉಗ್ರರನ್ನು ಮಟ್ಟ ಹಾಕಲು ಸೇನಾಪಡೆಗಳು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿವೆ. ಕಾಶ್ಮೀರ ಕಣಿವೆ ಅರಣ್ಯದಲ್ಲಿ ಉಗ್ರರು ಅಡಗಿಕೊಂಡಿರುವ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸುತ್ತಿವೆ. ಡ್ರೋನ್ ಕ್ಯಾಮರಾವನ್ನು ಆಧರಿಸಿ ಉಗ್ರರು ಅಡಗಿರಬಹುದಾದ ಪ್ರದೇಶಗಳತ್ತ ಮಾರ್ಟರ್ ಶೆಲ್‌ಗಳನ್ನು ಹಾರಿಸಲಾಗುತ್ತಿದೆ. ಅಲ್ಲದೇ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ.
ಸೇನಾಪಡೆಗಳು ಹಾಗೂ ಕಾಶ್ಮೀರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇನ್ನು ಕಾರ್ಯಾಚರಣೆಯ ವೇಳೆ ಯೋಧನೊಬ್ಬ ಕಾಣೆಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇಲ್ಲಿಯವರೆಗೆ ಸುಮಾರು 50 ಗಂಟೆಗಳಿಗೂ ಹೆಚ್ಚು ಕಾಲ ಉಗ್ರರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಉಗ್ರರು ಹತರಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.