ವಾಹನ ಮಾಲೀಕರೇ ಟೋಲ್ ಪ್ಲಾಜಾ ದಾಟುವ ಮುನ್ನ ಎಚ್ಚರ; ಮೊಬೈಲ್‌ಗೆ ಬರುತ್ತೆ ಎಸ್‌ಎಂಎಸ್

Published : Nov 25, 2026, 07:53 AM IST
Toll Plaza

ಸಾರಾಂಶ

ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಇಲ್ಲದಿದ್ದರೆ ಅಥವಾ ಅವಧಿ ಮುಗಿದಿದ್ದರೆ ಟೋಲ್ ಪ್ಲಾಜಾ ದಾಟುತ್ತಿದ್ದಂತೆ ಮಾಲೀಕರಿಗೆ ಎಸ್‌ಎಂಎಸ್‌ ಮೂಲಕ ಎಚ್ಚರಿಕೆ ನೀಡುವ ಹೊಸ ವ್ಯವಸ್ಥೆಯನ್ನು ಎನ್‌ಎಚ್‌ಎಐ ತರುತ್ತಿದೆ. ಈ ವ್ಯವಸ್ಥೆಯು ಕೇವಲ ಮುನ್ನೆಚ್ಚರಿಕೆ ನೀಡಲಿದ್ದು, ಯಾವುದೇ ದಂಡ ವಿಧಿಸುವುದಿಲ್ಲ.

ನವದೆಹಲಿ: ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿರುವ ಥರ್ಡ್‌ ಪಾರ್ಟಿ ವಿಮೆ ಮಾಡಿಸದ ಅಥವಾ ಅವಧಿ ಮುಗಿದ ವಿಮೆಯೊಂದಿಗೆ ಸಂಚರಿಸುವ ವಾಹನಗಳು ಟೋಲ್‌ ಪ್ಲಾಜಾಗಳನ್ನು ದಾಟುತ್ತಿದ್ದಂತೆ ಅದರ ಮಾಲೀಕರಿಗೆ ಆ ಬಗ್ಗೆ ಎಚ್ಚರಿಸುವ ಸಂದೇಶವನ್ನು ಕಳಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಯಾರಿ ನಡೆಸುತ್ತಿದೆ.

ಇದರ ಭಾಗವಾಗಿ, ದೆಹಲಿಯ ಮುಂಡ್ಕಾ ಟೋಲ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಫಲಿತಾಂಶ ಆಧರಿಸಿ ದೇಶದ ಇತರೆ ಟೋಲ್‌ಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು.

ಪ್ರಕ್ರಿಯೆ ಹೇಗಿರುತ್ತದೆ?

ಟೋಲ್‌ ಪ್ಲಾಜಾ ದಾಟುವ ವಾಹನಗಳ ಮೇಲೆ ಕಣ್ಣಿಡುವ ಕ್ಯಾಮೆರಾಗಳು, ಅವುಗಳ ನೋಂದಣಿ ಸಂಖ್ಯೆಯನ್ನು ಕೇಂದ್ರ ಸರ್ಕಾರದ ವಾಹನ್‌ (VAHAN) ದತ್ತಾಂಶದೊಂದಿಗೆ ತಾಳೆ ಮಾಡಿ, ವಿಮೆಯ ಸಿಂಧುತ್ವವನ್ನು ಪರಿಶೀಲಿಸುತ್ತವೆ. ವಿಮೆಯ ಅವಧಿ ಮುಗಿದಿದ್ದರೆ ಅಥವಾ ವಿಮೆ ಇಲ್ಲದಿದ್ದರೆ, ವಾಹನದ ಮಾಲೀಕರ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಲಾಗುತ್ತದೆ. ಆ ಮೆಸೇಜ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ, ಟೋಲ್‌ ದಾಟಿದ ದಿನಾಂಕ, ಸಮಯ ಹಾಗೂ ವಿಮೆಯ ಅವಧಿ ಮುಗಿದ ದಿನಾಂಕದ ವಿವರಗಳಿರುತ್ತವೆ.

ದಂಡ ಇಲ್ಲ- ಎನ್‌ಎಚ್‌ಎಐ:

ವಿಮೆ ಇಲ್ಲದ ವಾಹನಗಳನ್ನು ಗುರುತಿಸುತ್ತಿದ್ದಂತೆ ಅವುಗಳಿಗೆ ದಂಡ ವಿಧಿಸಲಾಗುವುದು ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಎನ್‌ಎಚ್‌ಎಐ, ಇದು ಕೇವಲ ವಾಹನ ಮಾಲೀಕರಿಗೆ ವಿಮೆ ನವೀಕರಣದ ಬಗ್ಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯಾಗಿದೆ. ಆದ್ದರಿಂದ ಟೋಲ್‌ನಲ್ಲಿ ದಂಡ ವಿಧಿಸುವ ಅಥವಾ ಚಲನ್‌ ನೀಡಲಾಗುವುದಿಲ್ಲ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರೇನ್‌ ವಿಳಂಬದಿಂದ ತಪ್ಪಿದ ವಿಮಾನ ಪ್ರಯಾಣ, ದಂಪತಿಗೆ ಪರಿಹಾರ ನೀಡುವಂತೆ ರೈಲ್ವೇಸ್‌ಗೆ ಸೂಚಿಸಿದ ಗ್ರಾಹಕ ಆಯೋಗ
ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಹುಟ್ಟಿನಿಂದಲೇ ಹಕ್ಕಿದೆಯೇ? ಸುಪ್ರೀಂ ಕೋರ್ಟ್‌ ಹೇಳೀದ್ದೇನು