ಅಯೋಧ್ಯೆ ರಾಮ ಮಂದಿರ ಕುರಿತು ವಿಶೇಷ ಪೋಸ್ಟ್ ಮಾಡಿದ ಪಾಕಿಸ್ತಾನದ ವ್ಯಕ್ತಿ.. ಆತನ ಆಸೆ ಈಡೇರುತ್ತಾ?

Published : Sep 15, 2026, 07:48 PM IST
ayodhya ram mandir ceo interview hindu vegetarian meat eating private questions

ಸಾರಾಂಶ

ಪಾಕಿಸ್ತಾನದ ಹಿಂದೂ ವ್ಯಕ್ತಿಯೊಬ್ಬರು ತಮ್ಮ ಬಹುದಿನಗಳ ವಿಶೇಷ ಕನಸನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಅವರಿಗೆ ಅಯೋಧ್ಯೆ ಶ್ರೀರಾಮನ ಮೇಲೆ ಎಲ್ಲಿಲ್ಲದ ಭಕ್ತಿ. ಇದೀಗ ಅವರ ಆಸೆ ಈಡೇರುತ್ತಾ ಎಂಬ ಚರ್ಚೆ ಶುರುವಾಗಿದೆ.

ಅಯೋಧ್ಯೆ ರಾಮಮಂದಿರ! ಲಕ್ಷಾಂತರ ಹಿಂದೂಗಳ ನಂಬಿಕೆಯ ಕೇಂದ್ರ. ಪ್ರತಿ ರಾಮನ ಭಕ್ತನೂ ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಗೆ ಭೇಟಿ ನೀಡಬೇಕು. ಶ್ರೀರಾಮನ ಕಣ್ತುಂಬಿಕೊಂಡು ಪಾವನ ಆಗಬೇಕು ಅಂದುಕೊಳ್ಳುತ್ತಾರೆ. ರಾಮನ ದರ್ಶನದ ಬಗ್ಗೆ ಕೋಟ್ಯಾಂತರ ಭಾರತಿಯರು ಕನಸು ಕಾಣೋದು ಹೊಸದೇನೂ ಅಲ್ಲ. ಆದರೆ ಪಾಕಿಸ್ತಾನಿ ಪ್ರಜೆಯೊಬ್ಬ ಅಯೋಧ್ಯೆ ಕನಸು ಕಂಡು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತನ್ನ ಮನದಾಳ ಹಂಚಿಕೊಳ್ಳುತ್ತಿದ್ದಂತೆಯೇ, ಅದು ಭಾರೀ ವೈರಲ್ ಆಗಿದ್ದು ಅನೇಕ ಭಾರತೀಯರು ಕಾಮೆಂಟ್ ಮೂಲಕ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಪಾಕಿಸ್ತಾನ ಪ್ರಜೆಯ ಆಸೆ ಏನು ಗೊತ್ತಾ? ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಗೆ ಬಂದು ಶ್ರೀರಾಮನ ದರ್ಶನ ಪಡೆಯೋದಾಗಿದೆ.

ಪೋಸ್ಟ್ ಭಾರೀ ವೈರಲ್

ಪಾಕಿಸ್ತಾನದಲ್ಲಿರುವ ಹಿಂದೂ ವ್ಯಕ್ತಿ ಕೈಲಾಶ್ ಮಜ್ಹಿರಾನ್ ಎಂಬಾತ ತನ್ನ ಮನದಾಳವನ್ನು ಹಂಚಿಕೊಂಡಿದ್ದಾರೆ. ಆತ ಪೋಸ್ಟ್‌ನಲ್ಲಿ ಏನು ಬರೆದುಕೊಂಡಿದ್ದಾರೆ ಅಂತಾ ನೋಡೋದಾದ್ರೆ, ಸ್ನೇಹಿತರೇ.. ನನ್ನ ತಂದೆ, ತಾಯಿ ಹಾಗೂ ಹೆಂಡತಿ ಮತ್ತು ಮಕ್ಕಳೊಂದಿಗೆ ಭಾರತದ ರಾಮ ಮಂದಿರಕ್ಕೆ ಭೇಟಿ ನೀಡುವ ಕನಸು ಇದೆ ಎಂದು ಹೇಳಿಕೊಂಡಿದ್ದಾರೆ. ಜನರ ಮುಂದೆ ವಿಷಯ ತಿಳಿಸುತ್ತಿದ್ದಂತೆಯೇ ಆ ಪೋಸ್ಟ್ ಭಾರೀ ವೈರಲ್ ಆಗಿದ್ದು, ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

ಅದಕ್ಕೆ ಕೆಲವು ಬಳಕೆದಾರರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ ಬನ್ನಿ ನಿಮಗೆ ಸ್ವಾಗತ. ರಾಮ ಎಲ್ಲರಿಗೂ ಸೇರಿದವ ಎಂದು ಬರೆದಿದ್ದಾರೆ. ಮತ್ತೊಬ್ಬ ಅಯೋಧ್ಯೆಗೆ ಭೇಟಿ ನೀಡೋದು ಪ್ರತಿಯೊಬ್ಬರ ಕನಸು. ಅದು ನನಸಾಗಿಯೇ ತೀರುತ್ತದೆ. ನಿಮ್ಮ ಕನಸು ಖಂಡಿತವಾಗಿಯೂ ನನಸಾಗಲಿದೆ ಎಂದಿದ್ದಾರೆ. ಇನ್ನೊಬ್ಬರು, ಖಂಡಿತ ಪಾಕಿಸ್ತಾನದಿಂದ ಬಂದ ಈ ಸಂದೇಶವನ್ನು ನಾವು ಗೌರವಿಸುತ್ತೇವೆ. ನಿಮ್ಮ ಆಸೆ ಈಡೇರಲಿ ಎಂದಿದ್ದಾರೆ.

ಕೈಲಾಶ್ ಮಜ್ಹಿರಾನ, ಪಾಕಿಸ್ತಾನದಲ್ಲಿರುವ ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿಗಳನ್ನ ಸರಿಪಡಿಸಲು ಮತ್ತು ಹೋರಾಡುತ್ತಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆ.14ರಂದು ಆಗಸದಲ್ಲಿ ಕಾಣಿಸಿದ ಚಂದ್ರ-ಶುಕ್ರ ಗ್ರಹದ ಅಪರೂಪದ ಮಿಲನ, ಚೌತಿ ದಿನ ಆಕಾಶ ನೋಡಲು ಹೆದರಿದ ಜನ!
Politics: ಸ್ವಚ್ಛ ಭಾರತ್, ರಾಮಮಂದಿರ ಆದ್ಮೇಲೆ ನೆಕ್ಸ್ಟ್ ಏನು? 'ಕೈ' ಪಡೆಯ ನಿದ್ದೆಗೆಡಿಸಿದ ಆ 'ಬ್ರಹ್ಮಾಸ್ತ್ರ' ಯಾವುದು?