ಕೋಳಿ ಸಾಮಾನ್ಯವಾಗಿ ದಿನಕ್ಕೆ ಎಷ್ಟು ಮೊಟ್ಟೆ ಇಡಬಹುದು. ಒಂದು ಹೆಚ್ಚೆಂದರೆ ಎರಡು ಅಂತ ನೀವು ಹೇಳಬಹುದು. ಆದರೆ ಕೇರಳದ ಕೋಳಿಯೊಂದು ಕೇವಲ ಆರು ಗಂಟೆಯಲ್ಲಿ 24 ಮೊಟ್ಟೆಗಳನ್ನು ಇಟ್ಟು ಎಲ್ಲರನ್ನು ಅಚ್ಚರಿಗೆ ದೂಡಿದೆ. ಜೊತೆಗೆ ಗ್ರಾಮದಲ್ಲಿ ಸ್ಟಾರ್ ಆಗಿದೆ. ಅಚ್ಚರಿ ಆದರೂ ಇದು ಸತ್ಯ. ಆಲಪ್ಪುಳ (Alappuzha) ಜಿಲ್ಲೆಯ ಪುನ್ನಪ್ರಾ ದಕ್ಷಿಣ ಪಂಚಾಯತ್‌ನಲ್ಲಿರುವ (Punnapra South panchayat) ಚೆರ್ಕಟ್ಟಿಲ್ (Cherkattil) ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸಿಎನ್ ಬಿಜು ಕುಮಾರ್ (CN Biju Kumar) ಅವರಿಗೆ ಸೇರಿದ ಕೋಳಿ ಆರು ಗಂಟೆಯಲ್ಲಿ 24 ಮೊಟ್ಟೆಗಳನ್ನು ಇಟ್ಟಿದೆ.
ಈ ಕೋಳಿಯ ಹೆಸರು ಚಿನ್ನು ಎಂಬುದಾಗಿದ್ದು, ಭಾನುವಾರ ಬೆಳಗ್ಗೆ ಈ ಕೋಳಿ ಕುಂಟುತ್ತಿರುವುದನ್ನು ಕಂಡು ಮಾಲೀಕ ಬಿಜು ಕುಮಾರ್ ಅವರು ಕೋಳಿಗೆ ಏನೋ ಗಾಯವಾಗಿರಬಹುದು ಎಂದು ಭಾವಿಸಿ ಕಾಲಿಗೆ ಎಣ್ಣೆ ಉಜ್ಜಿದ್ದಾರೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಕೋಳಿ ಭಾನುವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 2.30ರ ನಡುವೆ 24 ಮೊಟ್ಟೆಗಳನ್ನು ಇಟ್ಟಿದೆ. ಈ ಕೋಳಿ BV380 ಹೈಬ್ರಿಡ್ ತಳಿಗೆ ಸೇರಿದ ಕೋಳಿಯಾಗಿದೆ. ಕೋಳಿ ಈ ರೀತಿ ಮೊಟ್ಟೆ ಇಟ್ಟಿದ್ದು ಪಶುವೈದ್ಯಕೀಯ ತಜ್ಞರು ಸೇರಿದಂತೆ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.
ಬೆಕ್ಕಿನ ಮರಿಗಳಿಗೆ ತನ್ನ ರೆಕ್ಕೆಗಳಡಿ ಜಾಗ ಕೊಟ್ಟ ಕೋಳಿ: ಫೋಟೋ ವೈರಲ್
ಈ ಸುದ್ದಿ ಎಲ್ಲೆಡೆ ಹರಡಿದ್ದು, ಇದನ್ನು ನೋಡಲು ಅನೇಕರು ಇವರ ಮನೆಯತ್ತ ಕುತೂಹಲದಿಂದ ಆಗಮಿಸಿದ್ದರು. ಆದರೆ ಕೋಳಿ ಮೊಟ್ಟೆ ಇಡುವುದನ್ನು ಮುಂದುವರೆಸಿದೆ. ಏಳು ತಿಂಗಳ ಹಿಂದೆ ಬ್ಯಾಂಕ್ ಸಾಲದ ಸಹಾಯದಿಂದ ಕೋಳಿ ಸಾಕಾಣಿಕೆ ಉದ್ಯಮ ಆರಂಭಿಸಿದ ಬಿಜು ಮತ್ತು ಅವರ ಪತ್ನಿ ಮಿನಿ ಖರೀದಿಸಿದ 23 ಕೋಳಿಗಳಲ್ಲಿ ಎಂಟು ತಿಂಗಳ ಮರಿ ಕೋಳಿ ಚಿನ್ನು ಕೂಡ ಒಂದಾಗಿತ್ತು. ಕೋಳಿಯೊಂದು ಈ ರೀತಿ ಮೊಟ್ಟೆ ಇಟ್ಟಿದು ಪೌಲ್ಟ್ರಿ ತಜ್ಞರ ಪ್ರಕಾರ ಒಂದು ಅಪರೂಪದ ಸಾಧನೆಯಾಗಿದೆ.
ಕೆಲ ದಿನಗಳ ಹಿಂದೆ ನಮ್ಮ ರಾಜ್ಯದ ಕೋಳಿಯೊಂದು ಗೋಡಂಬಿಯಾಕಾರದ ಮೊಟ್ಟೆಗಳನ್ನು ಇಟ್ಟಿತ್ತು. ದಕ್ಷಿಣ ಕನ್ನಡ (dakshina Kannada) ಜಿಲ್ಲೆಯ ಬೆಳ್ತಂಗಡಿ (Beltangadi) ತಾಲೂಕಿನ ಲೈಲಾ ಗ್ರಾಮದಲ್ಲಿ (Laila vilage) ಈ ಘಟನೆ ನಡೆದಿತ್ತು. ಕೋಳಿ ಇತ್ತೀಚೆಗಷ್ಟೇ ಮೊಟ್ಟೆ ಇಡಲು ಶುರು ಮಾಡಿತ್ತು. ಅಲ್ಲದೇ ಇಟ್ಟ ಹತ್ತು ಮೊಟ್ಟೆಯೆಲ್ಲವೂ ಗೋಡಂಬಿಯಾಕಾರದಲ್ಲಿತ್ತು. ಹೀಗಾಗಿ ಈ ಕೋಳಿಯೂ ಗ್ರಾಮದಲ್ಲಿ ಟಾಕ್ ಆಫ್ ದ ಟೌನ್ ಆಗಿದೆ.
ರಾಷ್ಟ್ರೀಯ ಮೊಟ್ಟೆ ದಿನ 2022: ದಿನಕ್ಕೊಂದು ಮೊಟ್ಟೆ ತಿನ್ನಿ ಅಂತಾರಲ್ಲ, ಯಾಕೇಂತ ತಿಳ್ಕೊಳ್ಳಿ
ಕಪ್ಪು ಬಣ್ಣದ ಈ ಕೋಳಿಯೂ ಮೊದಲ ಬಾರಿ ಇಟ್ಟ ಮೊಟ್ಟೆಯನ್ನು ನೋಡಿದ ಮನೆಯವರು ಅಚ್ಚರಿಗೊಳಗಾಗಿದ್ದರು. ಅಲ್ಲದೇ ಅದು ಇನ್ನೊಂದು ಮೊಟ್ಟೆ ಇಡಲಿ ಆದು ಹೇಗಿರುತ್ತೆ ನೋಡೋಣ ಎಂದು ಕಾಯುತ್ತ ಕುಳಿತಿದ್ದರು. ಆದರೆ ಎರಡನೇ ಬಾರಿಯೂ ಕೋಳಿ ಗೋಡಂಬಿಯಾಕಾರದ ಮೊಟ್ಟೆಯನ್ನೇ ಇಟ್ಟಿದೆ. ಹೀಗಾಗಿ ಊರಿನ ಜನ ಈ ವಿಶೇಷ ಮೊಟ್ಟೆಯನ್ನು ನೋಡಲು ಕೋಳಿಯ ಮಾಲೀಕ ಪ್ರಶಾಂತ್ (prashanth) ಅವರ ನಿವಾಸಕ್ಕೆ ಭೇಟಿ ನೀಡಲು ಶುರು ಮಾಡಿದ್ದರು.
ಕೋಳಿಯೂ ಅಸಹಜವಾದ ಆಕಾರದಲ್ಲಿ ನಿರಂತರ ಮೂರು ದಿನ ಮೊಟ್ಟೆ ಇಟ್ಟಿದು ನೋಡಿ ನಾವು ಕೋಳಿಯನ್ನು ಪಶುವೈದ್ಯರ ಬಳಿಗೆ ತೆಗೆದುಕೊಂಡು ಹೋದೆವು. ಅಲ್ಲಿ ವೈದ್ಯರು ಬಹುಶಃ ಕೋಳಿಯ ಗರ್ಭದಲ್ಲಿ ಏನಾದರೂ ಸಮಸ್ಯೆ ಇರಬಹುದು ಅಥವಾ ಆಕೆಯ ಸಂತಾನೋತ್ಪತ್ತಿ ಅಂಗದಲ್ಲಿ ಹುಳು ಇರಬಹುದು ಎಂದು ಹೇಳಿದ್ದಾಗಿ ಎಂದು ಪ್ರಶಾಂತ್ ನ್ಯೂಸ್ 18 ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ