ವಾಜಿದ್‌ ಖಾನ್‌ ಸಾವು ಬೆನ್ನಲ್ಲೇ ತಾಯಿಗೂ ಕೊರೋನಾ ದೃಢ!

Published : Jun 03, 2020, 08:08 AM ISTUpdated : Jun 03, 2020, 08:32 AM IST
ವಾಜಿದ್‌ ಖಾನ್‌ ಸಾವು ಬೆನ್ನಲ್ಲೇ ತಾಯಿಗೂ ಕೊರೋನಾ ದೃಢ!

ಸಾರಾಂಶ

ವಾಜಿದ್‌ ಖಾನ್‌ ಸಾವು ಬೆನ್ನಲ್ಲೇ ತಾಯಿಗೂ ಕೊರೋನಾ ದೃಢ| ತಾಯಿ ರಜಿನಾ ಖಾನ್‌ ಅವರಿಗೂ ಕೊರೋನಾ ಸೋಂಕು\ ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ

ನವದೆಹಲಿ(ಜೂ.03): ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ವಾಜಿದ್‌ ಖಾನ್‌ ಅವರು ಕೊರೋನಾ ಸೋಂಕು ತಗುಲಿ ಮೃತಪಟ್ಟಬೆನ್ನಲ್ಲೇ, ಅವರ ತಾಯಿ ರಜಿನಾ ಖಾನ್‌ ಅವರಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

‘ರಜಿನಾ ಖಾನ್‌ ಅವರಿಗೂ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಪುತ್ರ ವಾಜಿದ್‌ ಕೊನೆಯುಸಿರೆಳೆದ ಮುಂಬೈನ ಆಸ್ಪತ್ರೆಯಲ್ಲೇ ರಜಿನಾ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿಯೇ ಇದ್ದು, ಅನಂತರ ಹೋಂ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ದಬಾಂಗ್‌ ಸೇರಿದಂತೆ ಹಲವು ಜನಪ್ರಿಯ ಹಿಂದಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ವಾಜಿದ್‌ ಖಾನ್‌ ಕೊರೋನಾ ಸೋಂಕು ತಗುಲಿ ಭಾನುವಾರವಷ್ಟೇ ಮೃತಪಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Chinnu Pappu: ಕಾಸರಗೋಡಿನಲ್ಲಿ ಶವವಾಗಿ ಪತ್ತೆಯಾದ ಯುವ ಇನ್ಫ್ಲುಯೆನ್ಸರ್ ಚಿನ್ನು ಪಾಪು ಹಿನ್ನಲೆಯೇನು?
ಚಿನ್ನ ಅಡವಿಟ್ಟವರಿಗೆ ಗುಡ್ ನ್ಯೂಸ್... ಸಾಲ ಮನ್ನಾ ಬಗ್ಗೆ ಶೀಘ್ರದಲ್ಲೇ ಮಹತ್ವದ ಘೋಷಣೆ?