ಕ್ವಾರಂಟೈನ್‌ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!

Published : Jun 03, 2020, 08:01 AM IST
ಕ್ವಾರಂಟೈನ್‌ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!

ಸಾರಾಂಶ

ಜನಸಂಖ್ಯಾ ಸ್ಫೋಟದ ಅಪಾಯ| ಕ್ವಾರಂಟೈನ್‌ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!| 

ಪಟನಾ(ಜೂ.03): ಬಿಹಾರದಲ್ಲಿ ಈಗ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಕುಟುಂಬವನ್ನು ಸೇರಿಕೊಳ್ಳುತ್ತಿರುವುದರಿಂದ ಜನಸಂಖ್ಯಾ ಸ್ಫೋಟದ ಅಪಾಯ ಎದುರಾಗಿದೆ. ಹೀಗಾಗಿ ಬಯಸದ ಗರ್ಭಧಾರಣೆ ತಡೆಯುವ ಸಲುವಾಗಿ ಕ್ವಾರಂಟೈನ್‌ ಕೇಂದ್ರಗಳಿಂದ ಬಿಡುಗಡೆ ಆಗುವ ವಲಸೆ ಕಾರ್ಮಿಕರಿಗೆ ಬಿಹಾರದ ಆರೋಗ್ಯ ಇಲಾಖೆ ಉಚಿತವಾಗಿ ಕಾಂಡೋಮ್‌ಗಳನ್ನು ವಿತರಿಸುತ್ತಿದೆ.

ವಿವಿಧ ರಾಜ್ಯಗಳಿಂದ ಬಿಹಾರಕ್ಕೆ 28ರಿಂದ 29 ಲಕ್ಷ ವಲಸೆ ಕಾರ್ಮಿಕರು ಆಗಮಿಸಿದ್ದು, ಅವರ ಪೈಕಿ ಸುಮರು 9 ಲಕ್ಷ ಕಾರ್ಮಿಕರು 14 ದಿನಗಳ ಕ್ವಾರಂಟೈನ್‌ ಅನ್ನು ಮುಗಿಸಿ ಮನೆಗೆ ತೆರಳಿದ್ದಾರೆ. ಇದಲ್ಲದೇ ಸುಮಾರು 5.50 ಲಕ್ಷ ವಲಸೆ ಕಾರ್ಮಿಕರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಕ್ವಾರಂಟೈನ್‌ ಕೇಂದ್ರಗಳಲ್ಲಿ ತಂಗಿದ್ದಾರೆ.

ಕೊರೋನಾ ವೈರಸ್‌ಗೂ ಕಾಂಡೋಮ್‌ ವಿತರಣೆಗೂ ಯಾವುದೇ ಸಂಬಂಧ ಇಲ್ಲ. ಆದರೆ, ಜನಸಂಖ್ಯೆ ಏರಿಕೆಯನ್ನು ತಡೆಯುವುದು ನಮ್ಮ ಉದ್ದೇಶ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾre. ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್‌ ಅಂತ್ಯಗೊಳ್ಳುವವರೆಗೂ ಈ ಕ್ರಮ ಮುಂದುವರಿಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?