
ರಾಜ್‌ಕೋಟ್ (ಏ.17): ಅಪಾರ ದೈವಭಕ್ತಿ ಹೊಂದಿದ್ದ ಮಧ್ಯವಯಸ್ಕ ಜೋಡಿಯೊಂದು ಸಿನಿಮೀಯ ರೀತಿಯಲ್ಲಿ ತಲೆಯನ್ನು ಕತ್ತರಿಸಿಕೊಂಡು ಅದನ್ನು ದೇವರಿಗೆ ಅರ್ಪಿಸಿದ ಭಯಾನಕ ಘಟನೆಯೊಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಹೀಗೆ ತಲೆಯನ್ನು ಕತ್ತರಿಸಿಕೊಳ್ಳಲು ಸ್ವತಃ ದಂಪತಿಯೇ ಮನೆಯಲ್ಲಿ ಶಿರಚ್ಛೇದದ ಯಂತ್ರವನ್ನು ಕೂಡಾ ರೂಪಿಸಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಹೀಗೆ ದೇಹವನ್ನು ದೇವರಿಗೆ ಅರ್ಪಿಸಿಕೊಂಡ ದಂಪತಿಯನ್ನು ಹೇಮುಭಾಯ್ ಮಕ್ವಾನಾ(Hemubhai Makwana) (38) ಮತ್ತು ಹನ್ಸಾಬೆನ್(Hansaben) (35) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಮರಣ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ತಮ್ಮ ವೃದ್ಧ ತಂದೆ ತಾಯಿ ಮತ್ತು ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕುಟುಂಬದ ಸದಸ್ಯರನ್ನು ದಂಪತಿ ಕೋರಿದ್ದಾರೆ.
ಭಕ್ತಿಯ ಪರಾಕಾಷ್ಠೆಯಲ್ಲಿ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತ
ಏನಾಯ್ತು?:
ರಾಜ್‌ಕೋಟ್(Rajkot) ಜಿಲ್ಲೆಯ ವಿಂಚಿಯ್ಯಾ ಗ್ರಾಮದ ಹೇಮುಭಾಯ್ ಮತ್ತು ಹನ್ಸಾಬೆನ್ ಕಳೆದೊಂದು ವರ್ಷದಿಂದ ತಮ್ಮ ಗುಡಿಸಿಲಿನಲ್ಲೇ ಭಾರೀ ಪ್ರಮಾಣದಲ್ಲಿ ದೇವರ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಪ್ರಾರ್ಥನೆಯ ಮುಂದುವರೆದ ಭಾಗವಾಗಿ ದಂಪತಿ ತಮ್ಮ ದೇಹವನ್ನು ದೇವರಿಗೆ ಅರ್ಪಿಸಿಕೊಳ್ಳಲು ನಿರ್ಧರಿಸಿದ್ದರು.
ವಿಶೇಷ ವ್ಯವಸ್ಥೆ:
ತಮ್ಮ ತಲೆಯನ್ನು ಕತ್ತರಿಸಿದ ಬಳಿಕ ಅದನ್ನು ಬೆಂಕಿಯ ಮೂಲಕ ದೇವರಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲು ನಿರ್ಧರಿಸಿದ್ದ ದಂಪತಿ ಅದಕ್ಕೆಂದೇ ಮೊದಲಿಗೆ ಶಿರಚ್ಛೇದ ಸ್ಥಳದ ಮುಂಭಾಗದಲ್ಲೇ ಅಗ್ನಿಜ್ವಾಲೆಯನ್ನು ಹೊತ್ತಿಸಿದ್ದರು. ಬಳಿಕ ಶಿರಚ್ಛೇದದ ಯಂತ್ರಕ್ಕೆ ಇಬ್ಬರೂ ಒಟ್ಟಿಗೆ ತಲೆ ಕೊಟ್ಟಿದ್ದಾರೆ. ನಂತರ ಯಂತ್ರದ ಹಗ್ಗವನ್ನು ಸ್ವಯಂ ಎಳೆದಾಗ ಹರಿತವಾದ ಆಯುಧ ಮೇಲಿನಿಂದ ಕೆಳಗೆ ಜಾರಿ ಒಂದೇ ಹೊಡೆತಕ್ಕೆ ಇಬ್ಬರ ತಲೆಯೂ ತುಂಡಾಗಿದೆ. ಹೀಗಾಗಿ ತುಂಡಾದ ಎರಡೂ ರುಂಡಗಳು ಒಟ್ಟಿಗೆ ಹೋಗಿ ಅಗ್ನಿಜ್ವಾಲೆಗೆ ಸಿಕ್ಕಿ ಆಹುತಿಯಾಗಿದೆ. ಶನಿವಾರ ರಾತ್ರಿ ನಡೆದ ಈ ದುರ್ಘಟನೆ ಬಗ್ಗೆ ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ಸಿಕ್ಕಿದೆ.
ಕೊಂದ ನಂತರ ಮಾನವ ಶವದ ಮಾಂಸ ಬೇಯಿಸಿ ತಿಂದ ಆರೋಪಿಗಳು
ಭಕ್ತಿಯ ಪರಾಕಾಷ್ಠೆ: ಭೀಕರ ಸ್ವಯಂ ಬಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ