
ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳಿಗೆ ಮತ್ತೊಂದು ಆಘಾತ ನೀಡಿರುವ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸಂದೇಶಗಳ ವಿನಿಮಯಕ್ಕಾಗಿ ಬಳಸುತ್ತಿದ್ದ 14 ಮೊಬೈಲ್ ಆ್ಯಪ್‌ಗಳಿಗೆ ನಿಷೇಧ ಹೇರಿದೆ. ಬೆಂಬಲಿಗರು ಹಾಗೂ ಸಂಘಟನೆ ಪರವಾಗಿ ದುಡಿಯುವ ಉಗ್ರರ ಜತೆ ಸಂಪರ್ಕ ಸಾಧಿಸಲು ಉಗ್ರಗಾಮಿ ಸಂಘಟನೆಗಳು ಈ ಆ್ಯಪ್‌ಗಳನ್ನು ಬಳಕೆ ಮಾಡುತ್ತಿದ್ದವು. ಅಲ್ಲದೆ ಪಾಕಿಸ್ತಾನದಿಂದ ಈ ಆ್ಯಪ್‌ಗಳ ಮೂಲಕವೇ ನಿರ್ದೇಶನ ಪಡೆಯುತ್ತಿದ್ದವು. ಹೀಗಾಗಿ ಉಗ್ರ ಸಂಘಟನೆಗಳಿಗೆ ಭರ್ಜರಿ ಹೊಡೆತ ಬಿದ್ದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ರಿಪ್‌ವೈಸರ್ (Crypvisor) , ಎನಿಗ್ಮಾ (Enigma), ಸೇಫ್‌ಸ್ವಿಸ್ (SafeSwiss), ವಿಕ್ರಮಿ (Vikrami), ಮೀಡಿಯಾಫೈರ್ (Mediafire), ಬ್ರಿಯಾರ್(Briar), ಬಿಚಾಟ್ (BiChat), ನಂದ್‌ಬಾಕ್ಸ್ (Nandbox), ಕೊನಿಯಾನ್ (Conion), ಐಎಂಒ(IMO), ಎಲಿಮೆಂಟ್ (Element), ಸೆಕೆಂಡ್ ಲೈನ್( Second Line), ಝಾಂಗಿ (Zangi) ಹಾಗೂ ಥ್ರೀಮಾ (Threema)ಎಂಬ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಭದ್ರತೆ ಹಾಗೂ ಗುಪ್ತಚರ ಸಂಸ್ಥೆಗಳ ಶಿಫಾರಸು ಆಧರಿಸಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿರುವ ಹಾಗೂ ಭಾರತೀಯ ಕಾನೂನುಗಳನ್ನು ಪಾಲನೆ ಮಾಡದಿರುವ ಆ್ಯಪ್‌ಗಳ ಪಟ್ಟಿಯನ್ನು ಸಿದ್ಧಪಡಿಸಿ, ನಿಷೇಧ ಹೇರುವಂತೆ ಸಂಬಂಧಿಸಿದ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿತ್ತು ಅದರಂತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.
ಈ 21 ಆಪ್ ಬಗ್ಗೆ ಎಚ್ಚರವಿರಲಿ, ನಿಮ್ಮ ಫೋನ್‌ನಲ್ಲಿದ್ರೆ ಈಗಲೇ ಡಿಲೀಟ್ ಮಾಡಿ!
ಚೀನಾಕ್ಕೆ ಮತ್ತೊಂದು ಮರ್ಮಾಘಾತ; ಪಬ್‌ಜಿ ಸೇರಿ 118 ಅಪ್ಲಿಕೇಶನ್ ಬ್ಯಾನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ