ನವದೆಹಲಿ: ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೆ ತನ್ನ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ನೀಡಿದೆಯಾದ್ದರಿಂದ ಕ್ರೈಸ್ತ ಧರ್ಮವನ್ನು ಪ್ರಸಾರ ಮಾಡುವ ಮಿಷನರಿಗಳ ಕಾರ್ಯದಲ್ಲಿ ಯಾವುದೇ ತಪ್ಪಿಲ್ಲ. ಇದು ಯಾವುದೇ ರೀತಿ ಕಾನೂನುಬಾಹಿರವಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ರಾಜ್ಯದಲ್ಲಿ ಕೆಲವು ವರ್ಷಗಳಿಂದ ಬಲವಂತವಾಗಿ ಕ್ರೈಸ್ತ ಧರ್ಮದ ಮತಾಂತರ ನಡೆಯುತ್ತಿದೆ ಎಂದು ವಕೀಲ ಅಶ್ವಿನಿ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ‘ರಾಜ್ಯದಲ್ಲಿ ಯಾವುದೇ ಬಲವಂತದ ಮತಾಂತರದ ಯಾವುದೇ ಘಟನೆ ನಡೆದಿಲ್ಲ. ಕ್ರೈಸ್ತ ಧರ್ಮವನ್ನು ಪ್ರಸಾರ ಮಾಡುವ ಮಿಷನರಿಗಳ ಕಾರ್ಯವನ್ನು ಕಾನೂನಿಗೆ ವಿರುದ್ಧವಾಗಿ ನೋಡಲಾಗುವುದಿಲ್ಲ. ಆದರೆ ಧರ್ಮ ಪ್ರಸಾರಕ್ಕಾಗಿ ಅವರು ಕೈಗೊಳ್ಳುವ ಕ್ರಮಗಳು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನದ ಭಾಗ 3ರ ವಿರುದ್ಧವಾಗಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ ಯಾವುದೇ ಮತಾಂತರ ವಿರೋಧಿ ಕಾನೂನನ್ನು ಪರಿಚಯಿಸುವ ಕಲ್ಪನೆಯನ್ನು ವಿರೋಧಿಸಿದ ಸರ್ಕಾರವು ಇಂತಹ ಕಾನೂನುಗಳು ಅಲ್ಪಸಂಖ್ಯಾತರ ವಿರುದ್ಧ ದುರ್ಬಳಕೆಗೆ ಕಾರಣವಾಗುತ್ತದೆ. ರಾಜ್ಯದ ವಿವಿಧ ಮತಾಂತರ ವಿರೋಧಿ ಕಾನೂನುಗಳಡಿಯಲ್ಲಿ ಬಲವಂತದ ಮತಾಂತರದ ಯಾವುದೇ ಘಟನೆಗಳು ವರದಿಯಾಗಿಲ್ಲ ಎಂದು ಪ್ರತಿಪಾದಿಸಿದೆ.
ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವ್ಯಕ್ತಿ
ಅಲ್ಲದೇ ಅರ್ಜಿದಾರರ ಅರ್ಜಿಯು ‘ಧಾರ್ಮಿಕ ಪ್ರೇರೇಪಿತ ಅರ್ಜಿ’ ಯಾಗಿದ್ದು ಬೆದರಿಕೆ, ಉಡುಗೊರೆ ನೀಡುವ ಹಾಗೂ ಆರ್ಥಿಕ ಆಮೀಷವೊಡ್ಡಿ ಮೋಸದಿಂದ ಮತಾಂತರ ಮಾಡಲಾಗಿದೆ ಎಂಬ ಅದರ ವಾದವು ಒಡಿಶಾ (Odisha), ಮಧ್ಯಪ್ರದೇಶ (Madhya pradesh) ಮತ್ತು ಕೆಲ ಹಿಂದಿ ಬುಡಕಟ್ಟು ಸಮುದಾಯಗಳಲ್ಲಿ ನಡೆದಿದೆ. ಹಾಗೂ ಈ ಆರೋಪ ತಮಿಳುನಾಡಿಗೆ ಅನ್ವಯವಾಗುವುದಿಲ್ಲ ಎಂದಿದೆ.
ಅಲ್ಲದೇ ಪ್ರತಿಯೊಬ್ಬ ನಾಗರಿಕನಿಗೆ ತಾನು ಇಚ್ಛಿಸಿದ ಧರ್ಮವನ್ನು ಅನುಸರಿಸುವ ಸ್ವತಂತ್ರ ಹಕ್ಕಿದೆ. ಯಾವುದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ತನ್ನ ಧರ್ಮಕ್ಕೆ ಬಲವಂತವಾಗಿ ಮತಾಂತರ (conversion) ಮಾಡುವ ಹಕ್ಕನ್ನು ಸಂವಿಧಾನ ನೀಡಿಲ್ಲ. ಆದರೆ ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಇತರರಿಗೆ ಬೋಧಿಸಬಹುದಾದ ಹಕ್ಕನ್ನು ನೀಡಿದೆ. ಹಾಗಾಗಿ ಯಾವುದೇ ತನ್ನ ಇಚ್ಛೆ ಅನುಸಾರ ಯಾವುದೇ ವ್ಯಕ್ತಿ ಬೇರೊಂದು ಧರ್ಮಕ್ಕೆ ಮತಾಂತರವಾಗುವುದನ್ನು ಕಾನೂನು ನಿರ್ಬಂಧಿಸಿಲ್ಲ.
ಕ್ರೈಸ್ತರಾಗಿ ಮತಾಂತರ ಆದ ಎಸ್‌ಸಿ ಸಮುದಾಯಕ್ಕೆ ಮೀಸಲಾತಿ!
ದೇಶದ ನಾಗರಿಕರಿಗೆ ಅವರಿಷ್ಟದ ಧರ್ಮವನ್ನು ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಬೇಕು. ನಾಗರಿಕರ ವೈಯಕ್ತಿಕ ನಂಬಿಕೆ ಹಾಗೂ ಗೌಪ್ಯತೆ ಕುರಿತು ಸರ್ಕಾರ ಮಾತನಾಡುವುದು ಸೂಕ್ತವಲ್ಲ. ಅದಾಗ್ಯೂ ಉದ್ದೇಶ ಮತ್ತು ದುರುದ್ದೇಶಪೂರ್ವಕವಾಗಿ ಯಾವುದೇ ಧರ್ಮ ಹಾಗೂ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ರಾಜ್ಯ ಹೊಂದಿರಬೇಕು ಎಂದು ತಮಿಳುನಾಡು ಸರ್ಕಾರ (Tamilnadu Govt) ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ