500 ರೂಪಾಯಿ ಆಸೆಯಿಂದಾಗಿ ರಹಸ್ಯ ಬಿಚ್ಚಿಟ್ಟ ಭಿಕ್ಷುಕ; ಹಣಕ್ಕಾಗಿ ಏನೆಲ್ಲಾ ಮಾಡ್ತಾರೆ ಗುರು!

Published : Mar 10, 2025, 10:57 AM ISTUpdated : Mar 10, 2025, 11:24 AM IST
500 ರೂಪಾಯಿ ಆಸೆಯಿಂದಾಗಿ ರಹಸ್ಯ ಬಿಚ್ಚಿಟ್ಟ ಭಿಕ್ಷುಕ; ಹಣಕ್ಕಾಗಿ ಏನೆಲ್ಲಾ ಮಾಡ್ತಾರೆ ಗುರು!

ಸಾರಾಂಶ

Beggar Secret: 500 ರೂಪಾಯಿ ಆಸೆಗಾಗಿ ಭಿಕ್ಷುಕ ಬಾಲಕನೊಬ್ಬ ತನ್ನ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನವದೆಹಲಿ: ಭಿಕ್ಷುಕ ಬಾಲಕನೊಬ್ಬ 500 ರೂಪಾಯಿ ಮೇಲಿನ ಆಸೆಗಾಗಿ ತನ್ನ ರಹಸ್ಯವನ್ನು ವ್ಯಕ್ತಿಯೋರ್ವನ ಮುಂದೆ ಬಿಚ್ಚಿಟ್ಟಿದ್ದಾನೆ.  ಈ ವಿಡಿಯೋ ನೋಡಿದ ನೆಟ್ಟಿಗರು, ಹಣಕ್ಕಾಗಿ ಏನೆಲ್ಲಾ ಮಾಡ್ತಾರೆ ಗುರು ಎಂದು ಕಮೆಂಟ್ ಮಾಡಿದ್ದಾರೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನಗಳು ನಿಲ್ಲುತ್ತಿದ್ದಂತೆ ಭಿಕ್ಷುಕರು ಕಾಣುತ್ತಾರೆ. ಕಂಕುಳಲ್ಲಿ ಮಗು ಇಟ್ಕೊಂಡು, ಕೆಲವರು ಕುಂಟುತ್ತಾ ಬಂದು ಹಣದ ಸಹಾಯ ಮಾಡುವಂತೆ ಕೇಳುತ್ತಾರೆ. ಕೆಲವರು ಇದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ರಸ್ತೆಗೆ ಇಳಿಯುತ್ತಾರೆ. ತಾನು ಅಂಗವಿಕಲ ಎಂದು ಭಿಕ್ಷೆ ಬೇಡತ್ತಿದ್ದ ಬಾಲಕನ ರಹಸ್ಯವನ್ನು ವ್ಯಕ್ತಿಯೊಬ್ಬರು ಬಯಲಿಗೆ ತಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರ್ ಬಳಿಗೆ ಬರುವ ಯುವಕ, ಹಣದ ಸಹಾಯಕ ಮಾಡುವಂತೆ ಮನವಿ ಮಾಡಿಕೊಳ್ಳುತ್ತಾನೆ. ಆಗ ಕಾರ್‌ನಲ್ಲಿ ಕುಳಿತಿದ್ದ ವ್ಯಕ್ತಿ, ನಾನು ನಿನಗೆ 500 ರೂಪಾಯಿ ನೀಡುತ್ತೇನೆ. ಸ್ವಲ್ಪ ನಡೆದು ತೋರಿಸು ಎಂದು ಹೇಳುತ್ತಾರೆ. ಆಗ ಭಿಕ್ಷುಕ ಎರಡು ಊರುಗೋಲು  ಸಹಾಯದಿಂದ ಕಾರ್ ಮುಂದೆವರೆಗೂ ಹೋಗಿ ಬಂದು, ಹಣ ಕೊಡಿ ಎನ್ನುತ್ತಾನೆ. ಆಗ ವ್ಯಕ್ತಿ, ಹೀಗೆ ಅಲ್ಲ. ಎರಡು ಊರುಗೋಲು ಬಿಟ್ಟು ಸಾಮನ್ಯರಂತೆ ನಡೆದು ತೋರಿಸಬೇಕು ಎಂದು ಹೇಳುತ್ತಾನೆ. ಆರಂಭದಲ್ಲಿ ಭಿಕ್ಷುಕ ಹಿಂಜರಿದರೂ 500 ರೂಪಾಯಿ ಆಸೆಗಾಗಿ, ಆ ವ್ಯಕ್ತಿ ಹೇಳಿದಂತೆ ಊರುಗೋಲು ತೆಗೆದಿಟ್ಟು ಓಡಾಡಿ ತೋರಿಸಿದ್ದಾನೆ. 

ಕಾಲುಗಳು ಸರಿಯಾಗಿದ್ರೂ ತಾನು ಅಂಗವಿಕಲ ಎಂದು ಸುಳ್ಳು ಹೇಳಿ ಭಿಕ್ಷೆ ಬೇಡುತ್ತಿದ್ದವ ಭಿಕ್ಷುಕನ ಅಸಲಿ ಮುಖವನ್ನು ಆ ವ್ಯಕ್ತಿ ಬಯಲು ಮಾಡಿದ್ದಾರೆ. ಯಾಕೆ ಹೀಗೆ ಸುಳ್ಳು ಹೇಳಿ ಹಣ ಕೇಳ್ತಿದ್ದೀಯಾ? ಹಾಗೆ ಕೇಳಿದ್ರೂ ಜನರು ಹಣದ ಸಹಾಯ ಮಾಡುತ್ತಾರೆ? ಏನು ನಿನ್ನ ಹೆಸರು? ನಿಮ್ಮ ಮನೆ ಎಲ್ಲಿದೆ? ದಿನಕ್ಕೆ ಎಷ್ಟು ಸಂಪಾದಿಸುತ್ತೀಯಾ ಎಂದು ಆ ವ್ಯಕ್ತಿ ಪ್ರಶ್ನೆ ಮಾಡುತ್ತಾರೆ. 

ಇದನ್ನೂ ಓದಿ: ಐಸ್‌ಕ್ರೀಂ ಕವರ್ ತೆಗೆದು ಬಾಯಿಗಿಡಲು ಹೊರಟವನಿಗೆ ಶಾಕ್: ಒಳಗಿದ್ದಿದ್ದೇನು ನೋಡಿ

ಇದಕ್ಕೆ ಆ ಭಿಕ್ಷುಕ ತನ್ನ ಹೆಸರು ಬಾದಲ್ ಎಂದು ಹೇಳುತ್ತಾನೆ. ಇಲ್ಲಿಯೇ ಸಮೀಪದ ಹೋಟೆಲ್ ಬಳಿಯ ಫುಟ್‌ಪಾತ್ ಮೇಲೆ ತಾಯಿಯೊಂದಿಗೆ ವಾಸವಾಗಿದ್ದೇನೆ. ಹಾಗೆ ಭಿಕ್ಷೆ ಕೇಳಿದ್ರೆ, ಕೆಲಸ ಮಾಡಲು ನಿನಗೇನು ಆಗಿದೆ ಎಂದು ಹೇಳಿ ಯಾರು ಹಣ ನೀಡಲ್ಲ. ಹಾಗಾಗಿ ಕುಂಟನಂತೆ ನಟಿಸುತ್ತೇನೆ. ತಂದೆ ಮಹಾಕುಂಭ ಮೇಳಕ್ಕೆ ಹೋಗಿದ್ದಾರೆ. ತಾಯಿಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ 500 ರೂಪಾಯಿ ನೀಡುವಂತೆ ಕೇಳುತ್ತಾನೆ. ಆದ್ರೆ ಕಾರ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ಈತನ ಮಾತುಗಳ ಮೇಲೆ ನಂಬಿಕೆಯೇ ಬರಲ್ಲ. ಪಕ್ಕದ ರಸ್ತೆಯಲ್ಲಿಯೂ ಕೆಲವರು ಇದೇ ರೀತಿ ಹಣ ಕೇಳುತ್ತಿರೋದನ್ನು ನೋಡಿದ್ದೇನೆ. ಕುಂಭಮೇಳದ ಬಗ್ಗೆ ಸುಳ್ಳು ಹೇಳಬೇಡ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

ನನಗೆ ಟ್ಯಾಟು ಹಾಕಲು ಬರುತ್ತೆ ಎಂದು ಹೇಳುತ್ತಿದ್ದಂತೆ ನಾನು ನಿನಗೆ ಕೆಲಸ ಕೊಡಿಸುತ್ತೇನೆ ಮಾಡುವೆಯಾ ಎಂದು ಕೇಳುತ್ತಾರೆ. ಇದಕ್ಕೆ ಭಿಕ್ಷುಕ ಒಪ್ಪದೇ ಹಣ ಕೊಡಿ ಎಂದು ಮತ್ತೆ ಕೇಳುತ್ತಾನೆ. ಹಣದ ಸಹಾಯ ಅವಶ್ಯಕತೆ ಇರೋರಿಗೆ ತಲುಪಬೇಕು ಅನ್ನೋದು ನನ್ನ ನಂಬಿಕೆ ಎಂದು ಕೇಳಿದ ವ್ಯಕ್ತಿ ಕೊನೆಗೆ 500ರ ಬದಲಾಗಿ 20 ರೂಪಾಯಿ ನೋಟ್ ನೀಡುತ್ತಾರೆ. ಇದೇ ವಿಡಿಯೋದಲ್ಲಿ ಆತ ದಿನಕ್ಕೆ 300 ರಿಂದ 400 ರೂಪಾಯಿ ಸಂಪಾದಿಸುತ್ತೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಚಿಕ್ಕ ಮಕ್ಕಳಂತೆ ಕುಣಿದ ಸುನೀಲ್‌ ಗವಾಸ್ಕರ್‌, ವೈರಲ್‌ ಆದ ವಿಡಿಯೋ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..