ವೈರಲ್ ವೀಡಿಯೋ : ಚಿಲ್ಲರೆ ನಾಣ್ಯಗಳನ್ನೇ ನೀಡಿ ಐಫೋನ್ 15 ಖರೀದಿಸಿದ ಭಿಕ್ಷುಕ...!

By Anusha Kb  |  First Published Oct 16, 2023, 1:14 PM IST

ಭಿಕ್ಷುಕನೋರ್ವ ಬರೀ ನಾಣ್ಯಗಳನ್ನು ನೀಡಿ ಐಫೋನ್‌ ಮಾರುವ ಶಾಪೊಂದಕ್ಕೆ ಹೋಗಿ ಐ ಫೋನ್ 15 ಖರೀದಿಸಿದ ವೀಡಿಯೋವೊಂದು ವೈರಲ್ ಆಗಿದೆ...!  


ಭಿಕ್ಷುಕನೋರ್ವ ಬರೀ ನಾಣ್ಯಗಳನ್ನು ನೀಡಿ ಐಫೋನ್‌ ಮಾರುವ ಶಾಪೊಂದಕ್ಕೆ ಹೋಗಿ ಐ ಫೋನ್ 15 ಖರೀದಿಸಿದ ವೀಡಿಯೋವೊಂದು ವೈರಲ್ ಆಗಿದೆ...!  ಹಾಗಂತ ಇಲ್ಲಿ ಐಫೋನ್ ಖರೀದಿಸಿದ್ದು ನಿಜವಾದ ಭಿಕ್ಷುಕ ಅಲ್ಲ, ಭಿಕ್ಷುಕನ ವೇಷದಲ್ಲಿದ್ದ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್. ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಇಂದು ಪ್ರಯೋಗ ಶಾಲೆ ಎನಿಸಿದ್ದು, ಪ್ರತಿಯೊಬ್ಬರು ಸಾರ್ವಜನಿಕರ ಗಮನ ಸೆಳೆಯುವ ಸಲುವಾಗಿ ವಿಭಿನ್ನ ವಿಶೇಷವೆನಿಸಿದ್ದ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಅದೇ ರೀತಿ ಇಲ್ಲೋರ್ವ ಯುವಕ, ಹರುಕುಮುರುಕು ಬಟ್ಟೆ ಧರಿಸಿದ ಭಿಕ್ಷುಕನೋರ್ವ (Beggar) ಚಿಲ್ಲರೆ ನಾಣ್ಯಗಳೊಂದಿಗೆ ಐಫೋನ್‌ ಶಾಪ್‌ಗೆ ಹೋದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯುವುದಕ್ಕಾಗಿ ಈ ಪ್ರಯೋಗವನ್ನು ಮಾಡಿದ್ದು, ಈ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. 

Tap to resize

Latest Videos

ಇಂತಹ ಸಿಲ್ಲಿ ಕಾರಣಕ್ಕೂ ವಿಚ್ಚೇದನ ಆಗುತ್ತೆ ನೋಡಿ: ಲಾಯರ್ ಕೊಟ್ಟ ಕಾರಣಗಳ ಲಿಸ್ಟ್ ನೋಡಿ ಬೆಚ್ಚಿದ ಅವಿವಾಹಿತರು

ಸಾಮಾನ್ಯವಾಗಿ ಸ್ಥಿತಿವಂತರೇ ಐಫೋನ್‌ನ (iphone 15) ದುಬಾರಿ ಬೆಲೆಯ ಕಾರಣಕ್ಕೆ ಅದನ್ನು ಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಜನ ಸಾಮಾನ್ಯರಂತು ಇದನ್ನು ಕೊಳ್ಳಲು ಸಾಲವೇ ಮಾಡಬೇಕಷ್ಟೇ, ಇಂತಹ ಸ್ಥಿತಿಯಲ್ಲಿ ಭಿಕ್ಷುಕನೋರ್ವ ಐಫೋನ್ ಖರೀದಿಸಲು ಹೋದರೆ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿಯುವುದಕ್ಕಾಗಿ ಈ ವಿಶೇಷ ಪ್ರಯೋಗ ನಡೆದಿದೆ. ಎಕ್ಸ್‌ಪೆರಿಮೆಂಟ್ ಕಿಂಗ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್‌ ಆಗಿದೆ. 

ವೀಡಿಯೋದಲ್ಲಿ ಯುವಕನೋರ್ವ ಭಿಕ್ಷುಕನ ವೇಷದಲ್ಲಿ ಚೀಲದ ತುಂಬಾ ನಾಣ್ಯದೊಂದಿಗೆ  ಜೋಧ್‌ಪುರದ (Jodhpur) ಮೊಬೈಲ್ ಶೋರೂಮ್ ಒಂದಕ್ಕೆ ಹೋಗಿ ಐಪೋನ್ ಖರೀದಿಸಲು ಹೋಗುತ್ತಾನೆ. ಆದರೆ ಹಲವು ಮೊಬೈಲ್ ಶೋರೂಮ್‌ಗಳು (Showroom) ಆತನ ಹರುಕು ಮುರುಕು ವೇಷ ನೋಡಿ ಮೊಬೈಲ್ ಶೋರೂಮ್ ಒಳಗೆ ಪ್ರವೇಶಿಸುವುದಕ್ಕೆ ಬಿಡುವುದಿಲ್ಲ,  ಮತ್ತೆ ಕೆಲವರು ನಾಣ್ಯದ ಕಾರಣಕ್ಕೆ ಆತನ ಐಫೋನ್ ಕೊಳ್ಳುವ ಬಯಕೆಗೆ ತಣ್ಣೀರೆರಚುತ್ತಾರೆ.  ಆದರೂ ಕೊನೆಯದಾಗಿ ಒಂದು ಮೊಬೈಲ್ ಶೋರೂಮ್ ಈತನ ಬಳಿ ಇರುವ ಚಿಲ್ಲರೆ ನಾಣ್ಯವನ್ನು ಸ್ವೀಕರಿಸಿ ಮೊಬೈಲ್ ಫೋನ್ ಖರೀದಿಸಲು ಅವಕಾಶ ಮಾಡಿಕೊಡುತ್ತದೆ. ನಂತರ ಯುವಕ ತನ್ನ ಕೈಯಲ್ಲಿದ್ದ ನಾಣ್ಯಗಳ ಚೀಲವನ್ನು ಮೊಬೈಲ್ ಶೋರೂಮ್‌ನ ಮೇಜಿನ ಮೇಲೆ ಸುರಿಯುತ್ತಾನೆ. ನಂತರ ಅಲ್ಲಿದ್ದ ಸಿಬ್ಬಂದಿ ಎಲ್ಲರೂ ಜೊತೆಯಾಗಿ ಈ ನಾಣ್ಯವನ್ನು ಲೆಕ್ಕ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ನಂತರ ಆತನಿಗೆ ಐಫೋನ್ 15 ನೀಡುತ್ತಾರೆ.  ಅಲ್ಲದೇ ಈ ಭಿಕ್ಷುಕ ಶಾಪ್ ಮಾಲೀಕರ ಜೊತೆ ಫೋಟೋವನ್ನು ತೆಗೆದುಕೊಳ್ಳುತ್ತಾನೆ. ಅಲ್ಲಿದ್ದ ಕೆಲವರು ಅಚ್ಚರಿಯಿಂದ ಈತನನ್ನು ನೋಡುವುದನ್ನು ಕಾಣಬಹುದು. 

ಭಾರತೀಯರಿಗೆ ನವರಾತ್ರಿ ಶುಭಕೋರಿ ಸ್ನೇಹ ಬಯಸಿದ ಕೆನಡಾ ಪ್ರಧಾನಿ

ಈ ವೀಡಿಯೋ ಪೋಸ್ಟ್ ಆದಾಗಿನಿಂದ 34 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.  ಅನೇಕರು ಈ ಪ್ರಯೋಗವನ್ನು ಶ್ಲಾಘಿಸಿದ್ದಾರೆ, ಅಲ್ಲದೇ ಭಿಕ್ಷುಕನ ಒಳಗೆ ಕರೆದುಕೊಂಡು ಅಂಗಡಿ ಮಾಲೀಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.  ಆದರೆ ಒಬ್ಬರು ಇದು ಪ್ಲಾನ್‌ಡ್‌, ಸ್ಕ್ರಿಪ್ಟೆಡ್ ಎಂದು ದೂರಿದ್ದಾರೆ.  ಇದು ಮನೋರಂಜನೆಯ ಜೊತೆ ಚಿಂತನೆಗೆ ಒಳಪಡಿಸುವ ವೀಡಿಯೋ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಯಾರೇ ಆದರೂ ಗ್ರಾಹಕರನ್ನು ಗೌರವಿಸಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಆಪಲ್ ಸರಣಿಯ iPhone 15 ಫೋನ್‌ ಭಾರತದಲ್ಲಿ ಸೆಪ್ಟೆಂಬರ್‌ 22 ರಿಂದ ಗ್ರಾಹಕರ ಖರೀದಿಗೆ ಲಭ್ಯವಾಗಿತ್ತು. ಇದು ಬಿಡುಗಡೆಗೆ ಮೊದಲೇ ದೆಹಲಿ ಮತ್ತು ಮುಂಬೈನಲ್ಲಿನ ಆಪಲ್‌ನ ರಿಟೈಲ್ ಶಾಪ್‌ಗಳ ಹೊರಗೆ ಜನ ಉದ್ದನೇಯ ಸರತಿ ಸಾಲಿನಲ್ಲಿ ನಿಂತಿದ್ದರು. 128 GB ಬೇಸ್ ಸ್ಟೋರೇಜ್ ಹೊಂದಿರುವ ಐಫೋನ್ 15ನ ದರ  79,900 ರಿಂದ ಆರಂಭವಾಗುತ್ತದೆ.  ಐಫೋನ್ 15 ಪ್ಲಸ್‌ಗೆ  89,900  ರೂ ಇದೆ. ಅದೇ ರೀತಿ 128GB ಹೊಂದಿರುವ  iPhone 15 Pro ದರ 1,34,900 ರಿಂದ ಆರಂಭವಾಗುತ್ತದೆ. ಹಾಗೆಯೇ iPhone 15 Pro Maxಗೆ  1, 59,900 ದರ ಇದೆ. 

 

click me!