ಒಂದು ಬಾಳೆಹಣ್ಣು, ಸೇಬು, ಒಂದು ಐಫೋನ್, ಬಿಜೆಪಿ ಶಾಸಕನ ವಿಡಿಯೋ ಟ್ರೋಲ್‌ಗೆ ಗುರಿಯಾಗಿದ್ದೇಕೆ?

Published : Oct 15, 2026, 04:03 PM IST
ratnakar mishra troll

ಸಾರಾಂಶ

ಒಂದು ಬಾಳೇ ಹಣ್ಣ, ಒಂದು ಸೇಬು, ಒಂದು ಐಫೋನ್‌‌ನಿಂದ ಬಿಜೆಪಿ ಶಾಸಕ ಫುಲ್ ಟ್ರೋಲ್ ಆಗಿದ್ದಾರೆ. ಏನಿದು ಶಾಸಕನ ಒಂದು ಫ್ರೂಟ್ಸ್ ಹಾಗೂ ಐಫೋನ್ ಕತೆ? ಈ ವಿಡಿಯೋ ದೇಶಾದ್ಯಂತ ಸಂಚಲನ ಮೂಡಿಸಿದೆ.

ಮಿರ್ಜಾಪುರ್ (ಅ.15) ರಾಜಕೀಯ ನಾಯಕರು ಏನೇ ಮಾಡಿದರೂ ಅದರ ಹಿಂದೆ ಒಂದು ರಾಜಕೀಯ ಉದ್ದೇಶವಿರುತ್ತೆ, ನೋಟವಿರುತ್ತೆ. ಅದು ಬಡವರಿಗೆ ಮಾಡಿದ ಸಹಾಯವೇ ಆಗಲಿ, ಸರ್ಕಾರದ ಯೋಜನೆ ಆಗಲಿ ಎಲ್ಲದರ ಹಿಂದೆ ರಾಜಕೀಯ ಇದ್ದೇ ಇರುತ್ತೆ. ಇದೀಗ ಬಿಜೆಪಿ ಶಾಸಕನ ವಿಡಿಯೋ ಒಂದು ಭಾರಿ ವೈರಲ್ ಆಗುತ್ತಿದೆ.ಜೊತೆಗೆ ಅಷ್ಟೇ ಟ್ರೋಲ್ ಆಗುತ್ತಿದೆ. ಒಂದು ಬಾಳೇ ಹಣ್ಣು, ಒಂದು ಸೇಬು ಹಾಗೂ ಒಂದು ಐಫೋನ್. ಇದೇ ಇದೀಗ ಟಾಕ್ ಆಫ್ ದಿ ಟೌನ್ ಆಗಿ ಕೋಲಾಹಲ ಸೃಷ್ಟಿಸಿದೆ.

ಪ್ರಚಾರದ ಗಿಮಿಕ್‌ನಲ್ಲಿ ಫುಲ್ ಟ್ರೋಲ್

ಮಿರ್ಜಾಪುರದ ಬಿಜೆಪಿ ಶಾಸಕ ರತ್ನಾಕರ್ ಮಿಶ್ರಾ ಫುಲ್ ಟ್ರೋಲ್ ಆಗಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇದೀಗ ಪ್ರಚಲಿತದಲ್ಲಿರಲು, ಮತದಾರರ ಮನಗೆಲ್ಲಲು, ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಒಂದಲ್ಲಾ ಒಂದು ಪ್ರಚಾರದ ಸ್ಟಂಟ್ ಮಾಡುತ್ತಾರೆ. ಇದಕ್ಕೆ ರತ್ನಾಕರ್ ಮಿಶ್ರಾ ಕೂಡ ಹೊರತಾಗಿಲ್ಲ. ರತ್ನಾಕರ್ ಮಿಶ್ರಾ ಈ ಬಾರಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸುವ ಪ್ರಚಾರದ ಗಿಮಿಕ್ ಮಾಡಿದ್ದಾರೆ.

ಹಣ್ಣು ಹಂಪಲು ಪ್ಲಾನ್

ಮಿರ್ಜಾಪುರದ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ರತ್ನಾಕರ್ ಮಿಶ್ರಾ ರೋಗಿಗಳ ಆರೋಗ್ಯ ವಿಚಾರಿಸುವಾಗ ಬರಿಗೈಯಲ್ಲಿ ಹೋದರೆ ಹೇಗೆ ಎಂದು ಕೆಲ ಹಣ್ಣುಗಳನ್ನು ಹಂಚಲು ನಿರ್ಧರಿಸಿದ್ದಾರೆ. ಹೆಚ್ಚು ಹಣ ಖರ್ಚಾಗಬಾರದು, ಹೆಚ್ಚು ಶ್ರಮ ಇರಬಾರದು. ಆದರೆ ಸೋಶಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಫುಲ್ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಒಂದಷ್ಟು ಹಣ್ಣು ಹಂಪಲು ಖರೀದಿಸಿ ತಂದಿದ್ದಾರೆ. ಬೆಂಬಲಿಗರ ಜೊತೆ ಆಸ್ಪತ್ರೆಗೆ ಎಂಟ್ರಿಕೊಟ್ಟಿದ್ದಾರೆ.

ಒಂದು ಬಾಳೆ ಹಣ್ಣು, ಒಂದು ಸೇಬು, ಒಂದು ಐಫೋನ್

ರೋಗಿಗಳಿಗೆ ಹಣ್ಣು ಹಂಚಿ ಆರೋಗ್ಯ ವಿಚಾರಿಸುವ ಕಾರ್ಯಕ್ರಮ ಆಗಿತ್ತು. ರತ್ನಾಕರ್ ಮಿಶ್ರಾ ಒಂದು ಕೈಯಲ್ಲಿ ಐಫೋನಿ 17 ಪ್ರೋ ಮ್ಯಾಕ್ಸ್ ಹಿಡಿದರೆ, ಮತ್ತೊಂದು ಕೈಯಲ್ಲಿ ಒಂದು ಬಾಳೇ ಹಣ್ಣು ಹಾಗೂ ಒಂದು ಸೇಬನ್ನು ಒಬ್ಬೊಬ್ಬ ರೋಗಿಗೆ ಹಂಚುತ್ತಾ ಸಾಗಿದ್ದಾರೆ. ಇದರ ನಡುವೆ ಕೆಲವು ಭಾರಿ ತಮ್ಮ ಫೋನ್ ಮೂಲಕ ಮಾತನಾಡುತ್ತಾ ಒಂದು ಬಾಳೇ ಹಣ್ಣು ಒಂದು ಸೇಬು ಹಂಚಿದ್ದಾರೆ. ರೋಗಿಯ ಯೋಗ ಕ್ಷೇಮ ಕೇಳುವುದಿರಲಿ, ಅವರ ಮುಖ ನೋಡಿದ ನೆನಪು ಕೂಡ ಇಲ್ಲ.

ರತ್ನಾಕರ್ ಮಿಶ್ರಾ ಹಣ್ಣು ಹಂಚಿದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಹಲವರು ಕಮೆಂಟ್ಸ್ ಮಾಡುತ್ತಿದ್ದಾರೆ. ಕಡಿಮೆ ಖರ್ಚು, ಕಡಿಮೆ ಪರಿಶ್ರಮದಲ್ಲಿ ಗರಿಷ್ಠ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ಲಾನ್ ಎಂದು ಹಲವರು ಹೇಳಿದ್ದಾರೆ. ಪ್ರಚಾರಕ್ಕಾಗಿ ಮಾಡಿದ ಈ ವಿಡಿಯೋ ವೈರಲ್ ಆಗಿದೆ. ಆದರೆ ನೆಗಟೀವ್ ಇಂಪಾಕ್ಟ್ ಆಗಿದೆ. ನೆಟ್ಟಿಗರು ರತ್ನಾಕರ್ ಮಿಶ್ರಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಷ್ಟಕ್ಕೆ ಹಣ್ಣ ಹಂಚುವ ಕಾರ್ಯಕ್ರಮ ಬೇಕಿತ್ತಾ, ಸುಮ್ಮನೆ ಇರಬಹುದಿತ್ತಲ್ಲಾ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂದು ರಸ್ತೆಯಲ್ಲಿ ಸಾವು ಬದುಕಿನ ಹೋರಾಟ, ಇಂದು ರೈಡರ್‌ಗಳ ಜೊತೆ ಸವಾರಿ! ನಾಯಿಮರಿಯ ಕಥೆ ನೆಟ್ಟಿಗರ ಕಣ್ಣಾಲಿ ತೇವಗೊಳಿಸಿದೆ
Prahaar: ನಾಳೆ ತೆರೆಗೆ ಬರಲಿದೆ ಮತ್ತೊಂದು ದುರಂಧರ್‍‌; ಬರೀ ಡೈಲಾಗ್ಸ್ ಅಲ್ಲ, ನೈಜ ಸಾಕ್ಷ್ಯಗಳ ಪ್ರಹಾರ ಎನ್ನಲು ಕಾರಣವೇನು?