ಅನಾಮಧೇಯ ವ್ಯಕ್ತಿಯಿಂದ ಐಐಟಿ ಬಾಂಬೆಗೆ ಭರ್ಜರಿ ದೇಣಿಗೆ

Published : Aug 27, 2023, 06:32 AM ISTUpdated : Aug 27, 2023, 07:05 AM IST
ಅನಾಮಧೇಯ ವ್ಯಕ್ತಿಯಿಂದ ಐಐಟಿ ಬಾಂಬೆಗೆ ಭರ್ಜರಿ ದೇಣಿಗೆ

ಸಾರಾಂಶ

ಅನಾಮಧೇಯ ವ್ಯಕ್ತಿಯೊಬ್ಬರು ಐಐಟಿ ಬಾಂಬೆಗೆ ಭರ್ಜರಿ 160 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಳೆಯ ವಿದ್ಯಾರ್ಥಿಯೊಬ್ಬ ಈ ಭರ್ಜರಿ ಕೊಡುಗೆ ನೀಡಿದ್ದು ಕೊಡುಗೆ ನೀಡಿದವರು ಹೆಸರನ್ನು ತಿಳಿಸಲು ಇಚ್ಛಿಸದ ಕಾರಣ ಹೆಸರನ್ನು ಬಹಿರಂಗಗೊಳಿಸಿಲ್ಲ ಎಂದು ಐಐಟಿ ಪ್ರಕಟಣೆ ತಿಳಿಸಿದೆ.

ಮುಂಬೈ: ಅನಾಮಧೇಯ ವ್ಯಕ್ತಿಯೊಬ್ಬರು ಐಐಟಿ ಬಾಂಬೆಗೆ ಭರ್ಜರಿ 160 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಳೆಯ ವಿದ್ಯಾರ್ಥಿಯೊಬ್ಬ ಈ ಭರ್ಜರಿ ಕೊಡುಗೆ ನೀಡಿದ್ದು ಕೊಡುಗೆ ನೀಡಿದವರು ಹೆಸರನ್ನು ತಿಳಿಸಲು ಇಚ್ಛಿಸದ ಕಾರಣ ಹೆಸರನ್ನು ಬಹಿರಂಗಗೊಳಿಸಿಲ್ಲ ಎಂದು ಐಐಟಿ ಪ್ರಕಟಣೆ ತಿಳಿಸಿದೆ.

ಇದೇ ಮೊದಲ ಬಾರಿಗೆ ನಾವು ಅನಾಮಧೇಯ ವ್ಯಕ್ತಿಯಿಂದ ದೇಣಿಗೆಯನ್ನು ಸ್ವೀಕರಿಸಿದ್ದೇವೆ. ಇಂತಹ ದೇಣಿಗೆಗಳು ಅಮೆರಿಕದಲ್ಲಿ (America) ಸಾಮಾನ್ಯವಾಗಿವೆ. ಆದರೆ ಭಾರತದಲ್ಲಿ ಯಾವುದೇ ವಿಶ್ವವಿದ್ಯಾಲಯ ಈ ಮೊದಲು ಇಂತಹ ದೇಣಿಗೆ ಪಡೆದುಕೊಂಡಿದೆ ಎಂಬುದರ ಬಗ್ಗೆ ನನಗೆ ಖಾತ್ರಿಯಿಲ್ಲ. ಭಾರತದಲ್ಲಿ ದೇಣಿಗೆ ನೀಡಿದ ಯಾರೂ ಸಹ ಹೆಸರನ್ನು ಹೇಳಿಕೊಳ್ಳದೇ ಇರುವುದಿಲ್ಲ. ಆದರೆ ಐಐಟಿ ಬಾಂಬೆಗೆ (IIT Bombay) ದೇಣಿಗೆ ನೀಡಿದರೆ ಅದು ಸರಿಯಾಗಿ ಬಳಕೆಯಾಗುತ್ತದೆ ಎಂದು ನೀಡಿದವರು ನಂಬಿದ್ದಾರೆ ಎಂದು ಪ್ರೊಫೆಸರ್‌ ಸುಭಾಶಿಸ್‌ ಚೌಧರಿ ಹೇಳಿದ್ದಾರೆ.

ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಮಾಂಸಾಹಾರ ಸೇವಿಸಿದ ವಿದ್ಯಾರ್ಥಿಗೆ ಅವಮಾನ! ಭುಗಿಲೆದ್ದ ಆಕ್ರೋಶ

ಐಐಟಿಯ ‘ಹಸಿರು ಇಂಧನ ಮತ್ತು ಸುಸ್ಥಿರ ಸಂಶೋಧನಾ ವಿಭಾಗ ಈ ದೇಣಿಗೆಯನ್ನು ಪಡೆದುಕೊಂಡಿದೆ. ಈ ವಿಭಾಗವನ್ನು ಫೋಟೋವೋಲ್ಟಿಕ್ಸ್‌, ಬ್ಯಾಟರಿ ತಂತ್ರಜ್ಞಾನ, ಶುದ್ಧ ವಾಯು ವಿಜ್ಞಾನ ಮತ್ತು ಇಂಗಾಲ ಹೊರಸೂಸುವಿಕೆಯಂತಹ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಸ್ಥಾಪಿಸಲಾಗಿದೆ. ಅಲ್ಲದೇ ಜಾಗತಿಕ ತಾಪಮಾನ ಏರಿಕೆಯ ನಿಯಂತ್ರಣ ಕ್ರಮಗಳ ಬಗ್ಗೆ ಈ ಕೇಂದ್ರ ಸಂಶೋಧನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದು ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿಗಳಿಂದ ಪಡೆದುಕೊಳ್ಳುತ್ತಿರುವ 2ನೇ ದೇಣಿಗೆಯಾಗಿದೆ. ಕಳೆದ ವರ್ಷ ನಂದನ್‌ ನಿಲೇಕಣಿ (Nandan nilekani) ಅವರು 315 ಕೋಟಿ ರು. ದೇಣಿಗೆ ನೀಡಿದ್ದರು. ಇಲ್ಲಿಯವರೆಗೆ ಅವರು 400 ಕೋಟಿ ರು. ಹೆಚ್ಚು ದೇಣಿಗೆ ನೀಡಿದ್ದಾರೆ. ಈ ವರ್ಷ ರಾಷ್ಟ್ರೀಯ ರಾರ‍ಯಂಕಿಂಗ್‌ನಲ್ಲಿ ಐಐಟಿ ಬಾಂಬೆ 4ನೇ ಸ್ಥಾನ ಪಡೆದುಕೊಂಡಿದೆ.

QS World University Rankings: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅತ್ಯುನ್ನತ ಸ್ಥಾನ ಪಡೆದ ಐಐಟಿ-ಬಾಂಬೆ, ಐಐಟಿ-ದೆಹಲಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ