ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳು ಸೇರಿ 9 ಕಡೆ ಲಸಿಕೆಗಳ ಪೋಲು!

By Suvarna News  |  First Published Jun 7, 2021, 1:00 PM IST

* ದೇಶದಲ್ಲಿ ಕೊರೋನಾ ಸಂಕಟದ ನಡುವೆಯೂ ಲಸಿಕೆ ಅಭಿಯಾನ

* ಒಂಭತ್ತು ರಾಜ್ಯಗಳಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಿರ್ಲಕ್ಷ್ಯ, ವ್ಯಾಕ್ಸಿನ್ ಪೋಲು

* ಯಾವ ರಾಜ್ಯ ಎಷ್ಟು ಬಳಸಿದೆ? ಇಲ್ಲಿದೆ ವಿವರ


ನವದೆಹಲಿ(ಜೂ. 07): ದೇಶದಲ್ಲಿ ಕೊರೋನಾ ಸಂಕಟದ ನಡುವೆಯೂ ಲಸಿಕೆ ಪಡೆಯಲು ಜನ ಸಾಮಾನ್ಯರು ಹರಸಾಹಸ ಪಡುತ್ತಿದ್ದಾರೆ. ಅನೇಕ ರಾಜ್ಯಗಳು ಕೆಂದ್ರ ತಮಗೆ ಕಡಿಮೆ ಲಸಿಕೆ ನೀಡಿವೆ ಎಂದು ದೂರಿದ್ದರೆ, ಇನ್ನು ಕೆಲವು ರಾಜ್ಯಗಳು ಸೂಕ್ತ ಸಮಯದಲ್ಲಿ ಲಸಿಕೆ ಪೂರೈಕೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಆದರೀಗ ಈ ಸಂಬಂಧ ಒಂಭತ್ತು ರಾಜ್ಯಗಳ ಅಂಕಿ ಅಂಶ ಹೊರಬಿದ್ದಿದ್ದು, ಆರೋಪಕ್ಕೆ ವಿರುದ್ಧವಾದ ವಿಚಾರ ಬಹಿರಂಗಪಡಿಸಿವೆ. ಹೌದು ಈ ಒಂಭತ್ತು ರಾಜ್ಯಗಳು ಕೇಂದ್ರ ಕಳುಹಿಸಿದ ಲಸಿಕೆಗಳ ಸಂಪೂರ್ಣ ಬಳಕೆಯನ್ನೂ ಮಾಡಿಲ್ಲ. ಇವುಗಳಲ್ಲಿ ಕಾಂಗ್ರೆಸ್‌ ಆಡಳಿತವಿರುವ ಪಂಜಾಬ್‌, ಛತ್ತೀಸ್‌ಗಢ ಸೇರಿ ದೆಹಲಿ, ಮಹಾರಾಷ್ಟ್ರ, ಝಾರ್ಖಂಡ್, ಕೇರಳ, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಕೂಡಾ ಸೇರಿದೆ.

ಒಂಭತ್ತು ರಾಜ್ಯಗಳಿಂದ ಲಸಿಕೆ ಅಭಿಯಾನ ನಿಧಾನ

Tap to resize

Latest Videos

ಕೇಂದ್ರ ಆರೋಗ್ಯ ಇಲಾಖೆ ಅನುಸಾರ ಈ ಒಂಭತ್ತು ರಾಜ್ಯಗಳ ಬಳಿ ಈಗಲೂ 1.65 ಕೋಟಿ ಡೋಸ್‌ನಷ್ಟು ಲಸಿಕೆ ಲಭ್ಯವಿದೆ. ಈ ರಾಜ್ಯಗಳಿಗೆ ಜನವರಿಯಿಂದ ಮಾರ್ಚ್‌ ನಡುವೆ ಲಭ್ಯಪಡಿಸಿದ ಲಸಿಕೆಗಳನ್ನು ಸರಿಯಾಗಿ ಉಪಯೋಗಿಸಿಲ್ಲ. ಲಸಿಕೆ ಅಭಿಯಾನ ನಿಧಾನವಾಗಲು ಈ ರಾಜ್ಯಗಳೇ ಕಾರಣ ಎನ್ನಬಹುದು. ಈ ರಾಜ್ಯಗಳಿಗೆ ಬೇಕಾದಷ್ಟು ಲಸಿಕೆ ಪೂರೈಸಿದರೂ, ಇದನ್ನು ಸರಿಯಾಗಿ ಉಪಯೋಗಿಸದಿರಲು ಕಾರಣವೇನು ಎಂಬುವುದು ಮಾತ್ರ ಯಕ್ಷ ಪ್ರಶ್ನೆ. ಕಳೆದ ದಿನಗಳಲ್ಲಿ ಸರ್ಕಾರಿ ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿದ ಆರೋಪ ಕೇಳಿ ಬಂದಿತ್ತು. ಅದಕ್ಕೂ ಮುನ್ನ ರಾಜಸ್ಥಾನದಲ್ಲಿ ಲಸಿಕೆಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದವು. ಈ ರಾಜ್ಯಗಳಿಗೆ ಪ್ರತೀ ತಿಂಗಳು ಪೂರೈಸುತ್ತಿರುವ ಲಸಿಕೆಗಳನ್ನು ಹೆಚ್ಚಿಸಲಾಗಿದೆ ಎಂಬುವುದು ಉಲ್ಲೇಖನೀಯ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಲಸಿಕೆ ವಿಚಾರದಲ್ಲಿ ಒಂಭತ್ತು ರಾಜ್ಯಗಳ ಪರಿಸ್ಥಿತಿ

ರಾಜಸ್ಥಾನ-ರಾಜ್ಯಕ್ಕೆ ಮೂರು ತಿಂಗಳಲ್ಲಿ 10.57 ಲಕ್ಷ ಡೋಸ್ ಸಿಕ್ಕಿದೆ. ಇದರಲ್ಲಿ ಬಳಕೆಯಾಗಿದ್ದು ಮಾತ್ರ ಕೇವಲ 5.72 ಲಕ್ಷ . ಜನವರಿಯಲ್ಲಿ 1.27 ಲಕ್ಷ ಡೋಸ್‌ ಪೂರೈಕೆಯಾಗಿದ್ದರೂ ಬಳಸಿದ್ದು ಕೇವಲ 0.33 ಲಕ್ಷ. ಫೆಬ್ರವರಿಯಲ್ಲಿ 2.06 ಲಕ್ಷ ಡೋಸ್‌ಕೊಟ್ಟರೂ, ಬಳಕರೆಯಾಗಿದ್ದು ಕೇವಲ 0.69 ಲಕ್ಷ. ಇನ್ನು ಮಾರ್ಚ್‌ನಲ್ಲಿ 7.24 ಲಕ್ಷ ಡೋಸ್‌ಗಳನ್ನುಕೊಟ್ಟಿದ್ದು, ಎಷ್ಟು ಬಳಕೆಯಾಗಿದೆ ಎಂಬ ಮಾಹಿತಿ ಇಲ್ಲ.

ಪಂಜಾಬ್- ಮೂರು ತಿಂಗಳಲ್ಲಿ ರಾಜ್ಯಕ್ಕೆ 2.89 ಲಕ್ಷ ಡೋಸ್ ನೀಡಲಾಗಿದೆ. ಆದರೆ ಬಳಕೆಯಾಘಿದ್ದು ಮಾತ್ರ 0.84 ಲಕ್ಷ. ಜನವರಿಯಲ್ಲಿ 0.44 ಲಕ್ಷ ಡೋಸ್‌ಪೂರೈಕೆಯಾದರೂ ಕೇವಲ 0.06 ಲಕ್ಷಗ ಡೋಸ್‌ ಬಳಕೆ. ಫೆಬ್ರವರಿಯಲ್ಲಿ 1.08 ಲಕ್ಷ ಡೋಸ್‌ಗಳನ್ನು ಪಡೆದರೂ ಕೇವಲ 0.12 ಲಕ್ಷಗಡೋಸ್‌ ಬಳಕೆ. ಇನ್ನು ಮಾರ್ಚ್‌ನಲ್ಲಿ 1.37 ಲಕ್ಷ ಡೋಸ್‌ಗಳನ್ನುಪಡೆಯಲಾಗಗಿದ್ದು, ಎಷ್ಟು ಬಳಕೆಯಾಗಿದೆ ಎಂಬ ಮಾಹಿತಿ ಇಲ್ಲ.

ಛತ್ತೀಸ್‌ಗಢ: ಮೂರು ತಿಂಗಳಲ್ಲಿ ರಾಜ್ಯಕ್ಕೆ ಸಿಕ್ಕಿದ್ದು 4.26 ಲಕ್ಷ ಡೋಸ್‌ಗಳು. ಬಳಕೆಯಾಘಿದ್ದು ಮಾತ್ರ ಕೇವಲ 1.94 ಲಕ್ಷ ಡೋಸ್‌ಗಳು. ಜನವರಿಯಲ್ಲಿ 0.63 ಲಕ್ಷ ಡೋಸ್‌ ಪಡೆದಿದ್ದರೂ ಬಳಕೆಯಾಗಿದ್ದು ಕೇವಲ 0.05 ಲಕ್ಷ ಮಾತ್ರ. ಫೆಬ್ರವರಿಯಲ್ಲಿ 1.04 ಲಕ್ಷ ಡೋಸ್‌ಗಳನ್ನು ಪಡೆದ ರಾಜ್ಯ ಬಳಸಿದ್ದು ಕೇವಲ 0.14 ಲಕ್ಷ. ಇನ್ನು ಮಾರ್ಚ್‌ನಲ್ಲಿ 2.57 ಲಕ್ಷ ಡೋಸ್‌ಗಳು ಪೂರೈಕೆಯಾಗಿದ್ದು, ಬಳಕೆಯಾಗಿದ್ದೆಷ್ಟು ಎಂಬ ಮಾಹಿತಿ ಇಲ್ಲ. 

ತೆಲಂಗಾಣ-ರಾಜ್ಯಕ್ಕೆ ಮೂರು ತಿಂಗಳಲ್ಲಿ ಪೂರೈಕೆಯಾಗಿದ್ದು 4.14 ಲಕ್ಷ ಡೋಸ್ ಆದರೆ ಬಳಕೆಯಾಗಿದ್ದು ಮಾತ್ರ ಕೇವಲ 1.03 ಲಕ್ಷ ಡೋಸ್. ಜನವರಿಯಲ್ಲಿ 0.89 ಲಕ್ಷ ಡೋಸ್‌ ಪಡೆದ ರಾಜ್ಯ ಬಳಸಿದ್ದು ಕೇವಲ 0.17 ಲಕ್ಷ. ಫೆಬ್ರವರಿಯಲ್ಲಿ ಅದು 1.38 ಲಕ್ಷ ಡೋಸ್‌ಗಳನ್ನು ಪಡೆದುಕೊಂಡಿದ್ದು, ಕೇವಲ 0.25 ಲಕ್ಷ ಮಾತ್ರ ಬಳಸಿದೆ. ಇನ್ನು ಮಾರ್ಚ್‌ನಲ್ಲಿ 1.87 ಲಕ್ಷ ಡೋಸ್‌ ನಿಡಿದ್ದು, ಬಳಕೆಯಾಗಿದ್ದೆಷ್ಟು ಎಂಬ ಮಾಹಿತಿ ಇಲ್ಲ.

ಆಂಧ್ರಪ್ರದೇಶ- ಮೂರು ತಿಂಗಳಲ್ಲಿ ರಾಜ್ಯಕ್ಕೆ 6.55 ಲಕ್ಷ ಡೋಸ್ ಸಿಕ್ಕಿದೆ. ಇದರಲ್ಲಿ ಬಳಕೆಯಾಗಿದ್ದು ಕೇವಲ 2.61 ಲಕ್ಷ ಡೋಸ್. ಜನವರಿಯಲ್ಲಿ 1.05 ಲಕ್ಷ ಡೋಸ್‌ ಪೂರೈಕೆಯಾಗಿದ್ದು, ಕೇವಲ 0.19 ಲಕ್ಷಗಳನ್ನು ಮಾತ್ರ ಬಳಸಲಾಗಿದೆ. ಫೆಬ್ರವರಿಯಲ್ಲಿ 2.46 ಲಕ್ಷ ಡೋಸ್‌ಗಳ ಪೈಕಿ ಕೇವಲ 0.48 ಲಕ್ಷಗಳನ್ನು ಮಾತ್ರ ಬಳಸಲಾಗಿದೆ. ಮಾರ್ಚ್ನಲ್ಲಿ 3.04 ಲಕ್ಷ ಡೋಸ್‌ ಪೂರೈಕೆಯಾಗಿದ್ದರೂ, ಬಳಕೆಯಾಗಿದ್ದೆಷ್ಟು ಎಂಬ ಮಾಹಿತಿ ಇಲ್ಲ.

ಜಾರ್ಖಂಡ್- ಮೂರು ತಿಂಗಳಲ್ಲಿ ರಾಜ್ಯಕ್ಕೆ 3.07 ಲಕ್ಷ ಡೋಸ್ ಸಿಕ್ಕಿದೆ. ಇದರಲ್ಲಿ ಕೇವಲ 1.06 ಲಕ್ಷಗಳನ್ನು ಮಾತ್ರ ಬಳಸಲಾಗಿದೆ. ಜನವರಿಯಲ್ಲಿ 0.37 ಲಕ್ಷ ಡೋಸ್‌ಗಳನ್ನು ಪಡೆದ ರಾಜ್ಯ ಬಳಸಿದ್ದು ಕೇವಲ 0.04 ಲಕ್ಷ ಡೋಸ್. ಫೆಬ್ರವರಿಯಲ್ಲಿ 0.95 ಲಕ್ಷ ಡೋಸ್‌ ಪೂರೈಕೆಯಾಗಿದ್ದು, ಕೇವಲ 0.27 ಲಕ್ಷ ಮಾತ್ರ ಬಳಸಲಾಯಿತು. ಮಾರ್ಚ್‌ನಲ್ಲಿ 1.75 ಲಕ್ಷ ಡೋಸ್‌ಗಳು ಸಿಕ್ಕಿದ್ದು ಬಳಕೆಯಾಗಿದ್ದೆಷ್ಟೆಂಬ ಮಾಹಿತಿ ಇಲ್ಲ.

ಕೇರಳ- ಮೂರು ತಿಂಗಳಲ್ಲಿ ರಾಜ್ಯಕ್ಕೆ 6.28 ಲಕ್ಷ ಡೋಸ್ ಸಿಕ್ಕಿದೆ. ಇದರಲ್ಲಿ ಅವರು ಕೇವಲ 3.04 ಲಕ್ಷ ಡೋಸ್‌ ಬಳಕೆಯಾಗಿದೆ. ಜನವರಿಯಲ್ಲಿ 0.83 ಲಕ್ಷ ಡೋಸ್‌ಗಳನ್ನು ಪಡೆದ ರಾಜ್ಯ ಕೇವಲ 0.17 ಲಕ್ಷ ಬಳಸಿದೆ. ಫೆಬ್ರವರಿಯಲ್ಲಿ 1.31 ಲಕ್ಷ ಡೋಸ್‌ ಪಡೆದ ರಾಜ್ಯ ಬಳಸಿದ್ದು ಕೇವಲ 0.42 ಲಕ್ಷ ಡೋಸ್. ಇನ್ನು ಮಾರ್ಚ್‌ನಲ್ಲಿ 4.14 ಲಕ್ಷ ಪಡೆದ ರಾಜ್ಯ ಬಳಸಿದ್ದೆಷ್ಟೆಂಬ ಮಾಹಿತಿ ಇಲ್ಲ.

ಮಹಾರಾಷ್ಟ್ರ- ಮೂರು ತಿಂಗಳಲ್ಲಿ ರಾಜ್ಯಕ್ಕೆ 14.33 ಲಕ್ಷ ಡೋಸ್ ಸಿಕ್ಕಿದೆ. ಇದರಲ್ಲಿ ಬಳಸಿದ್ದು ಕೇವಲ 6.21 ಲಕ್ಷ. ಜನವರಿಯಲ್ಲಿ 1.97 ಲಕ್ಷ ಡೋಸ್‌ ಪೂರೈಕೆಯಾದರೂ ಬಳಸಿದ್ದು ಕೇವಲ 0.27 ಲಕ್ಷ. ಫೆಬ್ರವರಿಯಲ್ಲಿ 4.12 ಲಕ್ಷ ಡೋಸ್‌ ಬಂದಿದ್ದರೂ ಬಳಕೆಯಾಗಿದ್ದು ಕೇವಲ 0.93 ಲಕ್ಷ. ಮಾರ್ಚ್‌ನಲ್ಲಿ 8.24 ಲಕ್ಷ ಡೋಸ್‌ ಪಡೆದ ರಾಜ್ಯ ಬಳಸಿದ್ದೆಷ್ಟೆಂಬ ಮಾಹಿತಿ ಇಲ್ಲ.

ರಾಷ್ಟ್ರೀಯ ರಾಜಧಾನಿ (ಎನ್‌ಸಿಟಿ) ಮತ್ತು ದೆಹಲಿ - ಮೂರು ತಿಂಗಳಲ್ಲಿ ಪೂರೈಕೆಯಾಗಿದ್ದು, 4.36 ಲಕ್ಷ, ಆದರೆ ಬಳಕೆಯಾಗಿದ್ದು ಕೇವಲ 2.42 ಲಕ್ಷ. ಜನವರಿಯಲ್ಲಿ 0.71 ಲಕ್ಷ ಡೋಸ್‌ಗಳನ್ನು ಪಡೆದರೂ ಬಳಸಿದ್ದು ಮಾತ್ರ ಕೇವಲ 0.06 ಲಕ್ಷ ಡೋಸ್. ಫೆಬ್ರವರಿಯಲ್ಲಿ 1.22 ಲಕ್ಷ ಡೋಸ್‌ಗಳ ಪೈಕಿ ಬಳಸಿದ್ದು ಕೇವಲ 0.35 ಲಕ್ಷ ಡೋಸ್. ಮಾರ್ಚ್‌ನಲ್ಲಿ 2.43 ಲಕ್ಷ ಡೋಸ್‌ ಪಡೆದ ರಾಜ್ಯ ಬಳಸಿದ್ದೆಷ್ಟೆಂಬ ಮಾಹಿತಿ ಇಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!