ಬೈಕ್ ಓಡಿಸ್ತಿದ್ದಾಗ ಚೈನೀಸ್ ಮಾಂಜಾ ಕತ್ತಿಗೆ ಸಿಲುಕಿ ವಿದ್ಯಾರ್ಥಿ ಸಾವು

Published : Nov 30, 2025, 11:49 PM IST
Indore student dies after neck cut by Chinese 'manjha

ಸಾರಾಂಶ

Dangerous Chinese kite string: ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಎಲ್ಲಿಂದಲೋ ಬಂದ ಚೈನೀಸ್ ಮಾಂಜಾ(ಗಾಳಿಪಟದ ದಾರ) ಕತ್ತಿಗೆ ಸಿಲುಕಿ 16ರ ಹರೆಯದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಬೈಕ್‌ನಲ್ಲಿ ಹೋಗ್ತಿದ್ದಾಗ ಚೈನೀಸ್ ಮಾಂಜಾ ಕತ್ತಿಗೆ ಸಿಲುಕಿ ವಿದ್ಯಾರ್ಥಿ ಸಾವು:

ಇಂದೋರ್: ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಎಲ್ಲಿಂದಲೋ ಬಂದ ಚೈನೀಸ್ ಮಾಂಜಾ(ಗಾಳಿಪಟದ ದಾರ) ಕತ್ತಿಗೆ ಸಿಲುಕಿ 16ರ ಹರೆಯದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ವೇಳೆ ಆತನಿಗೆ ಸಹಾಯ ಮಾಡಲು ಯತ್ನಿಸಿದ ಸ್ನೇಹಿತರು ಕೂಡ ಈ ಚೈನೀಸ್ ಮಾಂಜಾವನ್ನು ಮುಟ್ಟಿ ಗಾಯಗೊಂಡಿದ್ದಾರೆ.

ಇಂದೋರ್‌ನಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾಗ ಚೈನೀಶ್ ಗಾಳಿಪಟದ ದಾರವೊಂದು ನವತರುಣನ ಗಂಟಲು ಕತ್ತರಿಸಿದೆ. ಇಂದೋರ್‌ನ ತೇಜಾ ಜಿ ನಗರ ಬೈಪಾಸ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಆ ಹುಡುಗನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದ್ದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದುರಂತ ಸಂಭವಿಸಿದ್ದು ಹೇಗೆ?

ಓಮ್ಯಾಕ್ಸ್ ಸಿಟಿ ನಿವಾಸಿ ರಾಮಕಿಶನ್ ಅವರ ಪುತ್ರ ಹದಿನಾರು ವರ್ಷದ ಗುಲ್ಶನ್ ಈ ದುರಂತದಲ್ಲಿ ಮೃತಪಟ್ಟ ಬಾಲಕ. ಈತ ತನ್ನ ಸಹೋದರ ಅರುಣ್ ಮತ್ತು ಸ್ನೇಹಿತರಾದ ವಿಶಾಲ್ ಮತ್ತು ಕೃಷ್ಣ ಅವರೊಂದಿಗೆ ಬೆಳಗ್ಗೆ ರಾಳಮಂಡಲಕ್ಕೆ ಭೇಟಿ ನೀಡಿದ್ದರು. ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಅವರು ಹಿಂತಿರುಗುತ್ತಿರುವಾಗ, ಇದ್ದಕ್ಕಿದ್ದಂತೆ ಗಾಳಿಪಟದ ದಾರವೊಂದು ಅವರ ಬೈಕಿನ ಕಡೆಗೆ ಬಂದಿತು. ಅದು ಗುಲ್ಶನ್ ಅವರ ಕುತ್ತಿಗೆಗೆ ಸುತ್ತಿಕೊಂಡು ಕತ್ತಿನಲ್ಲಿ ಆಳವಾದ ಗಾಯವನ್ನುಂಟುಮಾಡಿತು. ಆ ದಾರವು ಚೈನೀಸ್ ಮಾಂಜಾದ ದಾರ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಕಾಯುವಿಕೆ ಮುಗಿತ್ತು: ಡೆವಿಲ್ ಸಿನಿಮಾ ಬಗ್ಗೆ ಜೈಲಿನಿಂದಲೇ ಟ್ವಿಟ್ ಮಾಡಿದ್ರಾ ದರ್ಶನ್

ಈ ವೇಳೆ ಆ ಚೈನೀಸ್ ಮಾಂಜಾದ ಸೆರೆಯಿಂದ ಅವನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾಗ ಅವನ ಸ್ನೇಹಿತರು ಕೂಡ ಗಾಯಗೊಂಡಿದ್ದಾರೆ. ಗುಲ್ಶನ್ ಅವರ ಸ್ನೇಹಿತರಾದ ಅರುಣ್, ವಿಶಾಲ್ ಮತ್ತು ಕೃಷ್ಣ ದಾರ ಹಿಡಿಯಲು ಪ್ರಯತ್ನಿಸಿದಾಗ ಅವರ ಕೈಗಳಿಗೆ ಗಾಯವಾಗಿದೆ. ಗುಲ್ಶನ್‌ಗೆ ತೀವ್ರ ಗಾಯವಾಗಿದ್ದು,. ಅವರು ಬಹಳಷ್ಟು ರಕ್ತ ಸೋರಿಕೆಯಾಯ್ತು. ಪರಿಣಾಮ ಬಾಲಕ ಆಸ್ಪತ್ರೆಗೆ ತಲುಪುವ ವೇಳೆಗೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು.

ಗುಲ್ಶನ್ ಮೂಲತಃ ತಿಕ್ರಿ ಅಶೋಕ್ ನಗರದನಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದ, ಗುಲ್ಶನ್ ತಂದೆ ರಾಮಕಿಶನ್ ಕೂಲಿ ಕೆಲಸ ಮಾಡುತ್ತಿದ್ದರು. ಗುಲ್ಶನ್‌ಗೆ ತಾಯಿ ಹಾಗೂ ತಮ್ಮ ಅರುಣ್ ಇದ್ದು ಆತ ತನ್ನ ಅಧ್ಯಯನದ ಜೊತೆಗೆ ತನ್ನ ಕುಟುಂಬವನ್ನು ಪೋಷಿಸಲು ಸಣ್ಣಪುಟ್ಟ ಕೆಲಸಗಳನ್ನು ಸಹ ಮಾಡುತ್ತಿದ್ದ. ಆದರೆ ಬಾಲಕನ ಹಠಾತ್ ಸಾವು ಕುಟುಂಬವನ್ನು ಶೋಕದ ಕಡಲಲ್ಲಿ ತೇಲಿಸಿದೆ.

ಇದನ್ನೂ ಓದಿ: ದಿತ್ವಾ ಚಂಡಮಾರುತಕ್ಕೆ ತಮಿಳುನಾಡಿನಲ್ಲಿ 3 ಸಾವು: 149 ಪ್ರಾಣಿಗಳು ಬಲಿ, 234 ಮಣ್ಣಿನ ಮನೆಗಳು ನಾಶ, 57,000 ಹೆಕ್ಟೇರ್ ಕೃಷಿಭೂಮಿ ಜಲಾವೃತ

ಚೈನೀಸ್ ಮಾಂಜಾ ಎಂದರೆ ಏನು?

ಚೈನೀಸ್ ಮಾಂಜಾ ಎಂಬುದು ನೈಲಾನ್ ಅಥವಾ ಪಾಲಿಸ್ಟರ್‌ನಿಂದ ತಯಾರಿಸಿದ ಸಿಂಥೆಟಿಕ್ ಗಾಳಿಪಟ ದಾರವಾಗಿದ್ದು, ಇದನ್ನು ಗಾಜಿನ ಪುಡಿಯಂತಹ ಘರ್ಷಕ ವಸ್ತುಗಳನ್ನು ಲೇಪಿಸಲಾಗುತ್ತದೆ, ಇದರಿಂದ ಇದು ಅತ್ಯಂತ ತೀಕ್ಷ್ಣ ಮತ್ತು ಬಾಳಿಕೆ ಬರುವಂತೆ ಮಾಡುತ್ತದೆ. ಜೊತೆಗೆ ಇದು ಅಪಾಯಕಾರಿ ಕತ್ತರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಜನರು ಮತ್ತು ಪ್ರಾಣಿಗಳನ್ನು ಸಹ ಗಂಭೀರವಾಗಿ ಗಾಯಗೊಳಿಸಬಹುದು ಇದು ವಿದ್ಯುತ್ ತಂತಿಗಳನ್ನು ಸ್ಪರ್ಶಿಸುವ ಮೂಲಕ ವಿದ್ಯುತ್ ಕಡಿತವನ್ನು ಉಂಟುಮಾಡಬಹುದು ಮತ್ತು ಇದು ಜೈವಿಕ ವಿಘಟನೀಯವಲ್ಲದ ಕಾರಣ ಪರಿಸರಕ್ಕೂ ಹಾನಿಕಾರಕವಾಗಿದೆ. ಈ ಅಪಾಯಗಳಿಂದಾಗಿ ಚೈನೀಸ್ ಮಾಂಜಾ ಮಾರಾಟ ಮತ್ತು ಬಳಕೆಯನ್ನು ಅನೇಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ.

ಚೀನೀ ಗಾಳಿಪಟ ದಾರದ ಮೇಲೆ ಈಗಾಗಲೇ ನಿಷೇಧ ಜಾರಿಯಲ್ಲಿದೆ.

ಇಂದೋರ್ ಕಲೆಕ್ಟರ್ ಶಿವಂ ವರ್ಮಾ ಅವರು ನವೆಂಬರ್ 25 ರಂದೇ ಚೀನೀ ಗಾಳಿಪಟ ದಾರವನ್ನು ನಿಷೇಧಿಸಿದ್ದರು. ಈ ದಾರವು ಆಗಾಗ್ಗೆ ಅಪಘಾತಗಳಿಗೆ ಕಾರಣವಾಗುತ್ತದೆ ಮತ್ತು ಅನೇಕ ಗಂಭೀರ ಗಾಯಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದರು. ಇದು ಮೂಕ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ. ಚೀನೀ ಮಾಂಜಾ ಮಾರಾಟ ಮತ್ತು ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ಯಾರಾದರೂ ನಿಷೇಧವನ್ನು ಉಲ್ಲಂಘಿಸಿದರೆ ಅಧಿಕಾರಿಗಳು ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!