52 ಬಾರಿ ಸಾರಿ ಕೇಳಿ 3ನೇ ಮಹಡಿಯಿಂದ ಜಿಗಿದ 8ನೇ ಕ್ಲಾಸ್ ವಿದ್ಯಾರ್ಥಿ, ರಾಷ್ಟ್ರಮಟ್ಟದ ಸ್ಕೇಟಿಂಗ್ ಆಟಗಾರ

Published : Nov 30, 2025, 04:08 PM IST
Class 8 Boy Jumps From School Building

ಸಾರಾಂಶ

ಮಧ್ಯಪ್ರದೇಶದಲ್ಲಿ, ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಆಟಗಾರನಾದ 8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಕೃತ್ಯವೆಸಗುವ ಮೊದಲು ಆತ 52 ಬಾರಿ ಕ್ಷಮೆ ಕೇಳಿದ್ದಾನೆ ಎಂದು ವರದಿಯಾಗಿದೆ.

ಶಾಲಾ ಕಟ್ಟಡದಿಂದ ಕೆಳಗೆ ಹಾರಿದ 8ನೇ ಕ್ಲಾಸ್ ವಿದ್ಯಾರ್ಥಿ:

ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಇತ್ತೀಚೆಗೆ ಸಾವಿಗೆ ಶರಣಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ವಿದ್ಯಾರ್ಥಿಯೋರ್ವ ಮೆಟ್ರೋ ಸ್ಟೇಷನ್‌ನಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದ ಅದಕ್ಕೂ ಮೊದಲು ರಾಜಸ್ಥಾನದ ಜೈಪುರದಲ್ಲಿ ವಿದ್ಯಾರ್ಥಿಯೊಬ್ಬಳು ಶಾಲಾ ಕಟ್ಟಡದಿಂದ ಕೆಳಗೆ ಹಾರಿ ಬದುಕು ಕೊನೆಗೊಳಿಸಿದ್ದಳು. ಈ ಘಟನೆ ಮಾಸುವ ಮೊದಲೇ ಈಗ ಮಧ್ಯ ಪ್ರದೇಶದಲ್ಲಿ ಶಾಲಾ ಕಟ್ಟಡದಿಂದ ವಿದ್ಯಾರ್ಥಿಯೋರ್ವಕೆಳಗೆ ಹಾರಿದ್ದಾನೆ. ಹೀಗೆ ಆತ್ಮ8ತ್ಯೆ ಮಾಡಿಕೊಂಡ ಹಾಗೂ ಯತ್ನಿಸಿದ ವಿದ್ಯಾರ್ಥಿಗಳೆಲ್ಲರೂ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇ ಆಗಿದ್ದಾರೆ.

ರಾಜಸ್ಥಾನ ಹಾಗೂ ದೆಹಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ತೀವ್ರ ತರದ ಆರೋಪ ಮಾಡಿದ್ದಾರೆ. ಹಾಗೆಯೇ ಈಗ ಆತ್ಮಹತ್ಯೆಗೆ ಯತ್ನಿಸಿದ 8ನೇ ಕ್ಲಾಸ್ ಬಾಲಕ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಆಟಗಾರನಾಗಿದ್ದು, ತಾನು ಓದುತ್ತಿದ್ದ ಖಾಸಗಿ ಶಾಲೆಯ ಕಟ್ಟಡದ 3ನೇ ಮಹಡಿಯಿಂದ ಕೆಳಗೆ ಹಾರಿ ಜೀವನ ಅಂತ್ಯಗೊಳಿಸಲು ಯತ್ನಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಮಧ್ಯಪ್ರದೇಶ ರತ್ಲಮ್‌ನ ಡೋಂಗ್ರ ನಗರದ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಾಲೆಗೆ ಮೊಬೈಲ್ ತಂದಿದ್ದ ಬಾಲಕ: ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಪೋಸ್ಟ್

ಘಟನೆಯಿಂದ ಬಾಲಕ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಾಲೆಯ ಪ್ರಕಾರ, ವಿದ್ಯಾರ್ಥಿ ಗುರುವಾರ ತನ್ನ ಮೊಬೈಲ್ ಫೋನ್ ಅನ್ನು ಶಾಲೆಗೆ ತಂದು ತರಗತಿಯಲ್ಲಿ ವೀಡಿಯೊ ರೆಕಾರ್ಡ್ ಮಾಡಿದ್ದಾನೆ. ಬಳಿಕ ಅದನ್ನು ಸಾಮಾಜಿಕ ಮಾಧ್ಯಮಕ್ಕೆ ಅಪ್‌ಲೋಡ್ ಮಾಡಿದ್ದಾನೆ.. ಶಾಲಾ ಆಡಳಿತ ಮಂಡಳಿಯು ಬಾಲಕ ಮಾಡಿದ ವೀಡಿಯೊವನ್ನು ಪತ್ತೆ ಮಾಡಿದ್ದಾರೆ. ಬಳಿಕ ಶುಕ್ರವಾರ ಅವನ ಪೋಷಕರಿಗೆ ಕರೆ ಮಾಡಿ ಶಾಲಾ ನಿಯಮಗಳನ್ನು ಬಾಲಕ ಉಲ್ಲಂಘಿಸಿದ ಬಗ್ಗೆ ಪೋಷಕರ ಜೊತೆ ಚರ್ಚಿಸಿದ್ದಾರೆ.

ವಿಚಾರ ತಿಳಿದು ಪೋಷಕರ ಕರೆಸಿದ ಪ್ರಾಂಶುಪಾಲರು

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಈಗ ತನಿಖೆಯ ಭಾಗವಾಗಿರುವ ಶಾಲೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವಂತೆ 13 ವರ್ಷದ ಬಾಲಕ ಪ್ರಾಂಶುಪಾಲರ ಕಚೇರಿಗೆ ಹೋಗುವುದು ಕಾಣುತ್ತಿದೆ. ಒಳಗೆ ಅವನು ಸುಮಾರು ನಾಲ್ಕು ನಿಮಿಷಗಳ ಕಾಲ ತನ್ನ ತಪ್ಪಿಗೆ ಪದೇ ಪದೇ ಕ್ಷಮೆಯಾಚಿಸುತ್ತಾ, ಭಯ ಮತ್ತು ಹತಾಶೆಯಿಂದ 52 ಬಾರಿ ಕ್ಷಮಿಸಿ ಎಂದು ಕೇಳಿದ್ದಾನೆ ಎಂದು ವರದಿಯಾಗಿದೆ.

ಪ್ರಾಂಶುಪಾಲರಿಂದ ಬೆದರಿಕೆ ಆರೋಪ

ಆದರೆ ಆತ್ಮಹತ್ಯೆಗೆ ಯತ್ನಿಸಿದ ನಂತರ ಬಾಲಕ ನೀಡಿದ ಹೇಳಿಕೆಯಲ್ಲಿ, ಆ ಸಮಯದಲ್ಲಿ ಪ್ರಾಂಶುಪಾಲರು, ಬಾಲಕನಿಗೆ ಅವನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಅವನನ್ನು ಅಮಾನತು ಮಾಡುವುದಾಗಿ ಹಾಗೂ ಅವನ ಪದಕಗಳನ್ನು ಕಸಿದುಕೊಳ್ಳುವುದಾಗಿ ಬೆದರಿಸಿದ್ದಾರೆ. ಪ್ರಾಂಶುಪಾಲರ ಮಾತು ಕೇಳಿದ ನಂತರ ಇತ್ತ ಸ್ಕೇಟಿಂಗ್‌ನಲ್ಲಿ ಈಗಾಗಲೇ ತನ್ನ ಸಾಧನೆಗಳಿಗೆ ಹೆಸರುವಾಸಿಯಾಗಿದ್ದ, ಎರಡು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದ ಆ ಬಾಲಕನಿಗೆ ಆಘಾತವಾಗಿದ್ದು, ಕುಸಿದು ಬಿದ್ದಿದ್ದಾನೆ ಎಂದು ವರದಿಯಾಗಿದೆ.

ಇದಾಗಿ ಕೆಲವು ಕ್ಷಣಗಳ ನಂತರ, ಅವನು ಪ್ರಾಂಶುಪಾಲರ ಕಚೇರಿಯಿಂದ ಹೊರಗೆ ಧಾವಿಸಿ ಬಂದು ಕಾರಿಡಾರ್ ಮೂಲಕ ಓಡಿ ಹೋಗಿ ಇದ್ದಕ್ಕಿದ್ದಂತೆ ಮೂರನೇ ಮಹಡಿಯಿಂದ ಜಿಗಿದಿರುವುದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಆದರೆ ಆಘಾತಕಾರಿ ಸಂಗತಿಯೆಂದರೆ, ಆ ಕ್ಷಣದಲ್ಲಿ ಆ ಹುಡುಗನ ತಂದೆ ಶಾಲೆಯಲ್ಲಿ ಪೋಷಕರು ಕಾಯುವ ಪ್ರದೇಶದಲ್ಲಿ ಕುಳಿತಿದ್ದರು. ಕೆಲವೇ ಮೀಟರ್ ದೂರದಲ್ಲಿದ್ದರು ಅಲ್ಲಿ ಏನಾಗಯಿತು ಎಂಬುದರ ಅರಿವಿರಲಿಲ್ಲ.

ಇದನ್ನೂ ಓದಿ: ಶಾಹೀನಾ ನನ್ನ ಪತ್ನಿ ಮಸೀದಿಯಲ್ಲಿ ನಿಖಾ ನಡೆದಿದೆ: ದೆಹಲಿ ಸ್ಪೋಟದ ಆರೋಪಿ ಮುಜಾಮಿಲ್ ಮದ್ವೆ ರಹಸ್ಯ

ನನ್ನ ಮಗನನ್ನು ಭೇಟಿಯಾಗುವುದಕ್ಕಾಗಿ ನನ್ನನ್ನು ಶಾಲೆಗೆ ಆಹ್ವಾನಿಸಲಾಗಿತ್ತು. ನಾನು ಶಾಲೆಗೆ ತಲುಪಿದ ನಂತರ ಅವನು ಬಿದ್ದಿದ್ದಾನೆಂದು ನನಗೆ ತಿಳಿಯಿತು. ಅವನು ಎರಡು ಬಾರಿ ರಾಷ್ಟ್ರೀಯ ಸ್ಕೇಟಿಂಗ್‌ನಲ್ಲಿ ಭಾಗವಹಿಸಿದ್ದಾನೆ. ಶಾಲೆಯಿಂದ ನನಗೆ ಮೊದಲಿಗೆ ಶಾಲೆಗೆ ಬರುವಂತೆ ಕರೆ ಬಂತು, ಆದರೆ ನಂತರ ಶಾಲೆಯಿಂದ ಮತ್ತೊಂದು ಕರೆ ಬಂದಿದ್ದು, ನೇರವಾಗಿ ಆಸ್ಪತ್ರೆಗೆ ಬರುವಂತೆ ಕೇಳಿಕೊಂಡರು ಎಂದು ವಿದ್ಯಾರ್ಥಿಯ ತಂದೆ ಪ್ರೀತಮ್ ಕಟಾರ ಹೇಳಿದ್ದಾರೆ.

ಮಗು ಶಾಲೆಗೆ ಫೋನ್ ತಂದಿದ್ದು ಶಾಲಾ ನೀತಿಯ ಉಲ್ಲಂಘನೆ. ಆದರೆ ಪರಿಸ್ಥಿತಿ ಅನಿರೀಕ್ಷಿತವಾಗಿ ತೀವ್ರ ಸ್ವರೂಪ ಪಡೆಯಿತು. ಮಗು 8 ನೇ ತರಗತಿಯಲ್ಲಿ ಓದ್ತಿದ್ದಾನೆ. ಅವನು ಫೋನ್ ತಂದಿದ್ದ. ನಂತರ ಕಾರಿಡಾರ್‌ನಲ್ಲಿ ಓಡಿದ ಅವನು ಕಟ್ಟಡದಿಂದ ಕೆಳಗೆ ಹಾರಿದ್ದಾನೆ. ಅವನ ಸ್ಥಿತಿ ಸ್ಥಿರವಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಶಾಲೆಯಲ್ಲಿ ಮೊಬೈಲ್ ಫೋನ್‌ಗಳಿಗೆ ಅನುಮತಿ ಇಲ್ಲ, ಶಿಕ್ಷಕರ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗುತ್ತದೆ. ಅವನು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ಥಾನ ಹೊಂದಿರುವ ಸ್ಕೇಟರ್ ಎಂದು ಎಸ್‌ಡಿಎಂ ಆರ್ಚೀ ಹರಿತ್ ಹೇಳಿದ್ದಾರೆ. ಯಾವುದೇ ಶಿಸ್ತು ಕ್ರಮ ಕೈಗೊಳ್ಳುವ ಮೊದಲು ಬಾಲಕನ ತಂದೆಯೊಂದಿಗೆ ಮಾತನಾಡಲು ಆಡಳಿತ ಮಂಡಳಿ ಉದ್ದೇಶಿಸಿತ್ತು ಎಂದು ಶಾಲೆ ತಿಳಿಸಿದೆ. ಆದಾರೆ ಬಾಲಕನ ಪದೇ ಪದೇ ಕ್ಷಮೆಯಾಚಿಸಿ ಹಠಾತ್ ಆಗಿ ಕಟ್ಟಡದಿಂದ ಕೆಳಗೆ ಹಾರಿದ್ದಾನೆ.

ಇದನ್ನೂ ಓದಿ: ಹಾಂಗ್‌ಕಾಂಗ್: ಈ ಶತಮಾನದ ಭೀಕರ ಅಗ್ನಿ ದುರಂತಕ್ಕೆ ಬಲಿಯಾದವರ ಸಂಖ್ಯೆ 128ಕ್ಕೆ ಏರಿಕೆ, 280 ಮಂದಿ ನಾಪತ್ತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
India Latest News Live: 19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು - ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ