
ನವದೆಹಲಿ: ಕೆಂಪುಕೋಟೆ ಬಳಿ ನಡೆದ ಆತ್ಮಾಹುತಿ ದಾಳಿಯ ಉಗ್ರಜಾಲವನ್ನು ಭೇದಿಸುತ್ತಿರುವ ದೆಹಲಿ ಪೊಲೀಸರು, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇಓ) ವೈದ್ಯಕೀಯ ಪದವಿ ಪಡೆದು, ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮಾಹಿತಿ ನೀಡುವಂತೆ ದೆಹಲಿಯ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಶನಿವಾರ ನೊಟೀಸ್ ಜಾರಿ ಮಾಡಿದ್ದಾರೆ.
ಬಾಂಬ್ ಸ್ಫೋಟದಲ್ಲಿ ಅಲ್ ಫಲಾ ವಿವಿಯ ವೈದ್ಯರ ಕೈಚಳಕವಿರುವುದು ಹಾಗೂ ಅವರಿಗೆ ನಿಷೇಧಿತ ಉಗ್ರಸಂಘಟನೆ ಜೈಷ್-ಎ-ಮೊಹಮ್ಮದ್‌ನ ನಂಟಿರುವುದು ದೃಢವಾದ ಬೆನ್ನಲ್ಲೇ, ತನಿಖಾಧಿಕಾರಿಗಳು ದೆಹಲಿ ವೈದ್ಯರ ಬೆನ್ನು ಹತ್ತಿದ್ದಾರೆ.
ಈ ಹಿನ್ನೆಲೆ ಪಾಕ್, ಬಾಂಗ್ಲಾ, ಚೀನಾ ಹಾಗೂ ಯುಎಇಯಲ್ಲಿ ಓದಿದ ವೈದ್ಯರ ಹೆಸರು ಮತ್ತು ಮಾಹಿತಿ ನೀಡುವಂತೆ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ವೈದ್ಯರಾದ ಡಾ. ಶಾಹೀನ್, ಡಾ. ಮುಜಮ್ಮಿಲ್, ಡಾ. ಅದೀಲ್‌ರನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ