ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಶುಕ್ರವಾರ ಭಾರಿ ಅನಾಹುತ ಸೃಷ್ಟಿಸಿದ ಮಳೆ ಕಳೆದ 88 ವರ್ಷದಲ್ಲೇ ಜೂನ್ ತಿಂಗಳಲ್ಲಿ ಸುರಿದ ದಾಖಲೆ ಮಳೆಯಾಗಿದೆ
ನವದೆಹಲಿ(ಜೂ.29): ಬಿಸಿಗಾಳಿ, ಬಿರುಬೇಸಿಗೆಯಿಂದ ತತ್ತರಿಸಿದ್ದ ದೆಹಲಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿದೆ. ಮೊದಲ ದಿನವೇ 88 ವರ್ಷಗಳ ದಾಖಲೆಯ 23 ಸೆಂ.ಮೀ. ಮಳೆಯಾಗಿದ್ದು, ರಾಜಧಾನಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ.
ದೆಹಲಿ ಏರ್‌ಪೋರ್ಟ್ ಟರ್ಮಿನಲ್ 1ರ ಚಾವಣಿ ಕಾರಿನ ಮೇಲೆ ಕುಸಿದು ಚಾಲಕ ದುರ್ಮರಣಕ್ಕೀಡಾಗಿದ್ದಾನೆ. ವಿವಿಐಪಿಗಳ ಮನೆಗೂ ನೀರು ನುಗ್ಗಿದೆ. ಸಂಸತ್ ಸದಸ್ಯರು ಸದನಕ್ಕೆ ತೆರಳಲು ಪ್ರಯಾಸಪಟ್ಟಿದ್ದಾರೆ. ರಸ್ತೆ, ರೈಲು, ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ.
ರಾಜಧಾನಿ ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಭಾರೀ ಗಾಳಿ ಸಹಿತ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ವಾಹನ, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯಕ್ಕೆ ಕಾರಣ ವಾಗಿದೆ. ಹಲವು ತಗ್ಗು ಪ್ರದೇಶಗಳು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಜನಜೀವನವೂ ವ್ಯತ್ಯಯವಾಗಿದೆ.
ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ, ಕರಾವಳಿಗೆ ರೆಡ್ , 4 ಜಿಲ್ಲೆಗೆ ಆರೇಂಜ್ ಅಲರ್ಟ್!
ವಿಶೇಷವೆಂದರೆ ಕಳೆದ ತಿಂಗಳ ಅಂತ್ಯದಿಂದ ಜೂ.22ರವರೆಗೆ ದೆಹಲಿಯಲ್ಲಿ ಸತತ 40 ದಿನ 40 ಡಿ.ಸೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಜೊತೆಗೆ 2 ದಿನ ಉಷ್ಣಾಂಶ 50 ಡಿ.ಸೆ ಗಡಿಯನ್ನೂ ದಾಟಿತ್ತು. ಗುರುವಾರ ಕೂಡಾ ಭಾರೀ ಉಷ್ಣಹವೆ ಇದ್ದ ದೆಹಲಿಯಲ್ಲಿ ಶುಕ್ರವಾರ ಬೆಳಗಿನ ಜಾವ ಭಾರೀ ಮಳೆ ಸುರಿದಿದೆ.
ನಿರ್ಮಾಣ ಹಂತದ ಗೋಡೆ ಕುಸಿದು ಮೂವರು ಮಣ್ಣಿನಡಿ ಸಿಕ್ಕಿಬಿದ್ದಿದ್ದಾರೆ. ಅವರು ಬದುಕಿರುವ ಸಾಧ್ಯತೆ ಕ್ಷೀಣವಾಗಿದೆ ಎನ್ನಲಾಗಿದೆ. ಇನ್ನು ವಸಂತ್ ವಿಹಾರ್ ಪ್ರದೇಶದಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಸಾವನ್ನಪ್ಪುವುದರೊಂದಿಗೆ ಮೊದಲ ದಿನವೇ ಮಳೆ 5 ಜನರನ್ನು ಬಲಿ ವಡೆದ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ದೆಹಲಿಯ ವಿಐಪಿ ಪ್ರದೇಶ ಗಳು ಹಾಗೂ ಜನಸಾಮಾನ್ಯರ ಪ್ರದೇಶಗಳಿಗೂ ಪ್ರವಾಹ ಪರಿಸ್ಥಿತಿ ಉಂಟಾಗಿ ಇಡೀ ದಿನ ಜನರು ಹಾಗೂ ಗಣ್ಯರು ಪರದಾಡಿದ್ದಾರೆ.
ದಿಲ್ಲಿ, ನೋಯ್ಡಾ ಭಾರಿ ಪರದಾಟ
ಭಾಗಗಳಿಗೆ ನೀರು ನುಗ್ಗಿ ರಸ್ತೆ ಸಂಚಾರ ಹಾಗೂ ದೈನಂದಿನ ಜೀವನಕ್ಕೆ ಅಡಚಣೆ ಉಂಟಾಯಿತು. ಒಳಚರಂಡಿ ವ್ಯವಸ್ಥೆ ವೈಫಲ್ಯದಕಾರಣ, ದಿಲ್ಲಿಯಲ್ಲಿ ಪ್ರಮುಖ ಪ್ರದೇಶ, ಪ್ರಗತಿ ಮೈದಾನದ ಸುರಂಗ, ಐಟಿಒ ಜಂಕ್ಷನ್ ಮತ್ತು ಮಯೂರ್ ವಿಹಾರ್ ಸೇರಿದಂತೆ ನಗರದಾದ್ಯಂತ ರಸ್ತೆ ಗಳು ಜಲಾವೃತವಾದವು ಹಾಗೂ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿತು. ನೋಯ್ತಾ ದಲ್ಲೂ ಪರಿಸ್ಥಿತಿ ಅಷ್ಟೇ ತೀವ್ರ ವಾಗಿತ್ತು. ಮಹಾಮಾಯಾ ಪ್ರೈಓವರ್. ಸೆಕ್ಟರ್ 62, ಸೇರಿದಂತೆ ಹಲವು ಪ್ರದೇಶಗಳು ಜಲಾ ವೃತವಾಗಿದೆ. ಮಳೆ ಕಾರಣ ಸಾವಿರಾರು ಪ್ರಯಾಣಿಕರು ಕಚೇರಿ, ಶಾಲೆ, ಕಾಲೇಜಿಗೆ ತೆರಳಲು ಪರದಾಡುವಂತಾಯಿತು.
ರಾಮನಗರ: ಪೂರ್ವ ಮುಂಗಾರಿನಲ್ಲಿ ಶೇ.82.87ರಷ್ಟು ಬಿತ್ತನೆ
ಪ್ರವಾಹಕ್ಕೆ ಕಾರಣ ಏನು?
ಹವಾಮಾನ ಇಲಾಖೆಯ ಪ್ರಕಾರ, ನಗರದ ಸೆರ್ಪ್ಟಜಂಗ್‌ನಲ್ಲಿ 228.1 2 . 0 10000 20, ಮೀ. ಮಳೆ ಸುರಿದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಸಚಿವೆ ಆತಿನಿ, 'ಒಂದೇ ದಿನ 23 ಸೆಂ.ಮೀ. ದಾಖಲೆ ಮಳೆ ಸುರಿದಿದೆ. ಇಷ್ಟೊಂದು ಮಳೆ ಆದರೆ ಅದನ್ನು ತಾಳುವ ಶಕ್ತಿ ದಿಲ್ಲಿಯ ಒಳಚರಂಡಿಗಳಿಗೆ ಇಲ್ಲ. ಹೀಗಾಗಿ ಒಳಚರಂಡಿಗಳ ಸ್ವಚ್ಛತೆ ಹಾಗೂ ವವೀಕರಣಕ್ಕೆ ಕ್ರಮ ಜರುಗಿಸಲಾಗುತ್ತಿದೆ. ಪ್ರವಾಹದ 200 ಹಾಟ್ ಸ್ಪಾಟ್ಗಳನ್ನು ಗುರುತಿಸಲಾಗಿದೆ' ಎಂದಿ ದ್ದಾರೆ. ಈ ನಡುವೆ, ಪ್ರವಾಹಕ್ಕೆ ದಿಲ್ಲಿ ಸರ್ಕಾರದ ವೈಫಲ್ಯವೇ ಕಾರಣ ಎಂದು ಜನರು ಹಾಗೂ ಪ್ರತಿಪಕ್ಷಗಳು ಕಿಡಿಕಾರಿವೆ.
1936ರ ಬಳಿಕದ ದಾಖಲೆ
ನವದೆಹಲಿ: ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಶುಕ್ರವಾರ ಭಾರಿ ಅನಾಹುತ ಸೃಷ್ಟಿಸಿದ ಮಳೆ ಕಳೆದ 88 ವರ್ಷದಲ್ಲೇ ಜೂನ್ ತಿಂಗಳಲ್ಲಿ ಸುರಿದ ದಾಖಲೆ ಮಳೆಯಾಗಿದೆ. ಗುರುವಾರ ಬೆಳಗ್ಗೆ 8:30ರಿಂದ ಶುಕ್ರವಾರ ಬೆಳಗ್ಗೆ 8:30 ರವರೆಗೆ 228 ಮಿ.ಮೀ (22.8 ಮಿ.ಮೀ) ಮಳೆಯಾಗಿದೆ. ಇದು 1936ರ ಬಳಿಕ ಜೂನ್ ತಿಂಗಳಿನ ಏಕದಿನದ ಅತಿ ಹೆಚ್ಚಿನ ಮಳೆಯಾಗಿದೆ. ದೆಹಲಿಯಲ್ಲಿ ಸಾಮಾನ್ಯವಾಗಿ ಜೂನ್‌ನಲ್ಲಿ ಸರಾಸರಿ 80.6 ಮಿಮೀ. (ಸೆಂ.ಮೀ.) ಮಳೆಯಾಗುತ್ತದೆ.