
ನವದೆಹಲಿ (ಜೂ.28): ವಿಶಾಖಪಟ್ಟಣಂನ ಭೀಮಿಲಿ ಪ್ರದೇಶದಲ್ಲಿ ಆರ್‌ಟಿಸಿ ನಿವೃತ್ತ ಉದ್ಯೋಗಿ ಮತ್ತು ಅವರ ಮಗ ರೇಬಿಸ್‌ನಿಂದ ಸಾವು ಕಂಡಿದ್ದಾರೆ. ತಮ್ಮ ಮನೆಯ ಸಾಕು ನಾಯಿ ಕಚ್ಚಿದ್ದರೂ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳದ ಕಾರಣ ಇಬ್ಬರೂ ಕೂಡ ಶಂಕಿತ ರೇಬಿಸ್‌ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಮೃತರನ್ನು ಅಲ್ಲಿಪಿಲ್ಲಿ ನರಸಿಂಗ ರಾವ್ (59) ಮತ್ತು ಅವರ 28 ವರ್ಷದ ಮಗ ಅನಂತ್ ಗುರು ಭಾರ್ಗವ್ ಎಂದು ಗುರುತಿಸಲಾಗಿದೆ. ಅನಂತ್ ಗುರು ರೈಲ್ವೆಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದು ನಾಲ್ಕು ದಿನಗಳ ಅವಧಿಯಲ್ಲಿ ತಂದೆ-ಮಗ ಇಬ್ಬರೂ ಸಾವು ಕಂಡಿದ್ದಾರೆ. ನರಸಿಂಗ ಕಳೆದ ಒಂಬತ್ತು ತಿಂಗಳಿಂದ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಮೇ 29ರಂದು ಮೀನುಗಾರರ ಪ್ರಾಬಲ್ಯವಿರುವ ಯಗುವಪೇಟೆಯ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮನೆಯ ಸಾಕು ನಾಯಿಯೇ ಕುಟುಂಬ ಸದಸ್ಯರ ಮೇಲೆ ಏಕಾಏಖಿ ದಾಳಿ ನಡೆಸಿ ಕಚ್ಚಿದೆ ಎಂದು ವರದಿಯಾಗಿದೆ.
ಭಾರ್ಗವ್, ಅವರ ತಾಯಿ ಮತ್ತು ಅವರ ಹಾಸಿಗೆಯಲ್ಲಿ ಮಲಗಿದ್ದ ತಂದೆಗೆ ನಾಯಿ ಕಚ್ಚಿದೆ, ನಂತರ ಕುಟುಂಬದವರು ಮಾಹಿತಿ ನೀಡಿದ ನಂತರ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ (ಜಿವಿಎಂಸಿ) ಸಿಬ್ಬಂದಿ ಇವರನ್ನು ಕರೆದೊಯ್ಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಭಾರ್ಗವ್ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಮೊದಲು ಕೆಲವು ದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಎದೆ ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯರು ನೀಡಿದ ಸಾವಿನ ವರದಿಯ ಪ್ರಕಾರ, ಭಾರ್ಗವ್ ಅವರನ್ನು ಜೂನ್ 21 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಂಕಿತ ರೇಬಿಸ್‌ನಿಂದ ಉಂಟಾದ ಹೃದಯ ಸ್ತಂಭನದಿಂದ ಅವರು ಜೂನ್ 22 ರಂದು ಸಾವು ಕಂಡಿದ್ದಾರೆ. ಅವರ ತಂದೆ ನರಸಿಂಗ ಅವರು ಜೂನ್ 25 ರಂದು ನಿಧನರಾದರು. ಇನ್ನು ಜಿವಿಎಂಸಿ ಸಿಬ್ಬಂದಿ ನಾಯಿಯನ್ನು ಮನೆಯಿಂದ ತೆಗೆದುಕೊಂಡು ಹೋದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ. ಮನುಷ್ಯರಿಗೆ ಕಚ್ಚಿದ ನಾಯಿಯಾದ ಕಾರಣಕ್ಕೆ ಇದನ್ನು ಪ್ರತ್ಯೇಕ ಆವರಣದಲ್ಲಿ ಇರಿಸಲಾಗಿತ್ತು. ನಾಯಿಯಲ್ಲಿ ರೇಬೀಸ್ ರೋಗಲಕ್ಷಣಗಳು ಕಾಣುತ್ತಿತ್ತು. ಇದರ ಬೆನ್ನಲ್ಲಿಯೇ ನಾಯಿ ಸಾವು ಕಂಡಿದೆ ಎನ್ನಲಾಗಿದೆ.
ಶಾಂತಂ ಪಾಪಂ ಸೀಸನ್‌ನಲ್ಲಿ ದರ್ಶನ್ ಮರ್ಡರ್ ಕೇಸ್ ಎಪಿಸೋಡ್?
ಆರಂಭದಲ್ಲಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ ಭೀಮಿಲಿ ನಗರ ಆರೋಗ್ಯ ಕೇಂದ್ರದ ವೈದ್ಯ ಡಾ ಜಿ ಕಲ್ಯಾಣ ಚಕ್ರವರ್ತಿ, ಭಾರ್ಗವ್ ಅವರ ಸಾವು ರೇಬಿಸ್‌ನಿಂದ ಉಂಟಾಗಿರಬಹುದು ಎಂದು ಹೇಳಿದ್ದಾರೆ. "ತಮ್ಮ ಸಾಕು ನಾಯಿಯಲ್ಲಿ ರೇಬೀಸ್ ರೋಗಲಕ್ಷಣಗಳನ್ನು ನೋಡಿದ ನಂತರ, ಕುಟುಂಬ ಸದಸ್ಯರು ಪ್ರಾಣಿಯನ್ನು ತೆಗೆದುಕೊಂಡು ಹೋಗುವಂತೆ ಜಿವಿಎಂಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು' ಎಂದು ಅವರು ತಿಳಿಸಿದ್ದಾರೆ.
ರೇಣುಕಾಸ್ವಾಮಿಯನ್ನ ಹೀರೋ ಮಾಡ್ಬೇಡಿ, ದರ್ಶನ್ ಮೇಲಿನ ಗೌರವ ಕಡಿಮೆ ಆಗೋದಿಲ್ಲ ಎಂದ ವಿಜೆ ಹೇಮಲತಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ