ರೀಲ್ಸ್‌ನಲ್ಲಿ ಸೋದರನ ಮುರಿದ ಹಲ್ಲು ಗುರುತಿಸಿದ ಸೋದರಿ, 18 ವರ್ಷಗಳ ನಂತರ ಒಂದಾದ ಒಡಹುಟ್ಟಿದವರು!

By Santosh Naik  |  First Published Jun 28, 2024, 9:59 PM IST

18 ವರ್ಷಗಳ ಕಾಲ ದೂರವಿದ್ದ ನಂತರ, ಕಾನ್ಪುರದ ಮಹಿಳೆಯೊಬ್ಬರು ಬಾಲ್ಯದಲ್ಲಿ ಕಳೆದುಹೋದ ಸಹೋದರನನ್ನು ಇನ್‌ಸ್ಟಾಗ್ರಾಮ್ ರೀಲ್ಸ್‌ ಮೂಲಕ ಪತ್ತೆ ಮಾಡಿದ್ದಾರೆ. 
 


ನವದೆಹಲಿ (ಜೂ.28): ಸೋಶಿಯಲ್‌ ಮೀಡಿಯಾ ಮೂಲಕ ಪಾಸಿಟಿವ್‌ ನ್ಯೂಸ್‌ ಹೇಗೆ ಸಾಧ್ಯ ಅನ್ನೋದಕ್ಕೆ ಇದು ಉದಾಹರಣೆ. ಉತ್ತರ ಪ್ರದೇಶದ ಕಾನ್ಪುರದ ಮಹಿಳೆಯೊಬ್ಬಳು ಇನ್ಸ್‌ಟಾಗ್ರಾಮ್‌ ರೀಲ್‌ ಮೂಲಕ 18 ವರ್ಷದ ಹಿಂದೆ ಕಳೆದುಹೋದ ತನ್ನ ತಮ್ಮನನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಆತನ ಸಂಪರ್ಕ ಮಾಡಿ ಒಂದಾಗಿದ್ದಾರೆ. ಹಾಥಿಪುರ ಗ್ರಾಮದ ನಿವಾಸಿ ರಾಜ್‌ಕುಮಾರಿ ಅವರು ಎಂದಿನಂತೆ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ಗಳನ್ನು ಸ್ಕ್ರೋಲ್‌ ಮಾಡುವಾಗ ಎಲ್ಲೋ ನೋಡಿದ ಪರಿಚಿತ ಮುಖ ಆಕೆಗೆ ಕಂಡಿದೆ. ಆತನ ರೀಲ್ಸ್‌ ನೋಡುತ್ತಿದ್ದವಳಿಗೆ ಕಣ್ಣೀರು ಧಾರಾಕಾರವಾಗಿ ಸುರಿದಿದೆ. ಆಕೆ ನೋಡಿದ್ದು ಜೈಪುರ ಮೂಲದ ಹುಡುಗನ ರೀಲ್‌. ಆದರೆ, ಆತನ ಮುರಿದ ಹಲ್ಲನ್ನು ನೋಡಿದವಳೇ ಈಕೆಗೆ ಗೊತ್ತಾಗಿದ್ದೇನೆಂದರೆ,  ಆತ ಬೇರಾರೂ ಅಲ್ಲ.18 ವರ್ಷದ ಹಿಂದೆ ಕಳೆದುಹೋದ ತನ್ನ ತಮ್ಮ ಬಾಲ ಗೋವಿಂದ್‌. 

18 ವರ್ಷದ ಹಿಂದೆ ಬಾಲ ಗೋವಿಂದ್‌ ಕೆಲದ ಹುಡುಕೊಂಡಿರುವ ಫತೇಪುರದ ಇನ್ಯಾತ್‌ಪುರ ಹಳ್ಳಿಯಿಂದ ಮುಂಬೈಗೆ ಹೊರಟ್ಟಿದ್ದರು. ಆದರೆ, ಆತ ಮರಳಿ ಬಂದಿರಲೇ ಇಲ್ಲ. ಇನ್ನೊಂದೆಡೆ ಮುಂಬೈಗೆ ಮುಟ್ಟಿದ್ದ ಬಾಲ ಗೋವಿಂದ್‌, ತನ್ನ ಸ್ನೇಹಿತರನ್ನು ಬಿಟ್ಟು ಬೇರೆ ಸ್ಥಳದಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಆರಂಭದಲ್ಲ ಎಲ್ಲಾ ಸ್ನೇಹಿತರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಬಾಲ ಗೋವಿಂದ್‌, ದಿನಗಳು ಕಳೆದ ಹಾಗೆ ಎಲ್ಲರ ಸಂಪರ್ಕವನ್ನು ಕಳೆದುಕೊಂಡಿದ್ದ. ಆತನ ಎಲ್ಲಾ ಸ್ನೇಹಿತರು ಹಳ್ಳಿಗೆ ವಾಪಸಾದರೆ, ಬಾಲಗೋವಿಂದ್ ಮಾತ್ರ ಮುಂಬೈನಲ್ಲೇ ಉಳಿದುಕೊಂಡಿದ್ದ. ಮುಂಬೈ ಸಾಕು ಎಂದುಕೊಂಡು ಹಳ್ಳಿಗೆ ವಾಪಸಾಗಲು ರೈಲು ಹತ್ತಿದಾಗ ಬಾಲ ಗೋವಿಂದ್‌ ಅವರ ಜೀವನ ಸಂಪೂರ್ಣವಾಗಿ ಟರ್ನ್‌ ಆಯಿತು. ಅನಾರೋಗ್ಯದಲ್ಲಿದ್ದರೂ ರೈಲು ಏರಿದ್ದ ಬಾಲ ಗೋವಿಂದ್‌, ಕಾನ್ಪುರದ ಬದಲಾಗಿ ಜೈಪುರದಲ್ಲಿ ಇಳಿದುಕೊಂಡಿದ್ದ.ದಣಿದ ಮತ್ತು ದಿಗ್ಭ್ರಮೆಗೊಂಡ ಬಾಲ ಗೋವಿಂದ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾದರು. ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಅವರ ಕಾರ್ಖಾನೆಯಲ್ಲಿಯೇ ಬಾಲ ಗೋವಿಂದ್‌ ಕೆಲಸ ಮಾಡಲು ಆರಂಭ ಮಾಡಿದ್ದ.

Latest Videos

undefined

ದಿನಗಳು ಕಳೆದ ಹಾಗೆ ಜೈಪುರದಲ್ಲಿಯೇ ಬಾಲ ಗೋವಿಂದ್‌ ಹೊಸ ಜೀವನ ಕಟ್ಟಿಕೊಳ್ಳಲು ಆರಂಭಿಸಿದ್ದ. ಈಶ್ವರ್‌ ದೇವಿ ಎನ್ನುವ ಮಹಿಳೆಯನ್ನು ಮದುವೆಯಾದ ಬಳಿಕ ಎರಡು ಮಕ್ಕಳು ಕೂಡ ಆದವು. ಅವರ ಇಡೀ ಜೀವನ ಬದಲಾದರೂ ಚಿಕ್ಕಂದಿನಲ್ಲಿದ್ದ ಮುರಿದ ಹಲ್ಲು ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಹೊಸ ಜೀವನ ಕಂಡುಕೊಳ್ಳುವ ಹಾದಿಯಲ್ಲಿ ಬಾಲ ಗೋವಿಂದ್‌ಗೆ ಇನ್ಸ್‌ಟಾಗ್ರಾಮ್‌ನ ರೀಲ್‌ ಮಾಡುವ ಗೀಳು ಹುಟ್ಟುಕೊಂಡಿತು. ಜೈಪುರದ ವಿಶೇಷ ಸ್ಥಳಗಳ ಕುರಿತು ಈತ ರೀಲ್‌ ಮಾಡಲು ಆರಂಭಿಸಿದ. ಇದರಲ್ಲಿ ಒಂದು ರೀಲ್‌ ಆತನ ಅಕ್ಕ ರಾಜ್‌ಕುಮಾರಿ ಅವರ ಮೊಬೈಲ್‌ ಫೀಡ್‌ಗೆ ತಲುಪಿದೆ. ಇದರ ಬೆನ್ನಲ್ಲಿಯೇ ಅಕ್ಕ-ತಮ್ಮ ಒಂದಾಗಿದ್ದಾರೆ.

ಮುದಿರ ಹಲ್ಲು ಕಂಡ ರಾಜ್‌ಕುಮಾರಿಗೆ ಈತ ತನ್ನ ತಮ್ಮ ಆಗಿರಬಹುದು ಎನ್ನುವ ಅನುಮಾನ ಬಂದು, ಇನ್ಸ್‌ಟಾಗ್ರಾಮ್‌ ಮೂಲಕವೇ ಗೋವಿಂದ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆರಾಂಭದಲ್ಲಿ ಮಾತನಾಡಲು ಮುಜುಗರ ಆಗುತ್ತಿತ್ತಾದರೂ, ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಬಳಿಕ ಇಬ್ಬರಿಗೂ ತಾವು ಒಡಹುಟ್ಟಿದವರು ಎನ್ನುವುದು ಗೊತ್ತಾಗಿದೆ. ಬಳಿಕ ಗೋವಿಂದ್‌ಗೆ ಫೋನ್‌ ಕಾಲ್‌ ಮಾಡಿದ ರಾಜಕುಮಾರಿ, ತಮ್ಮನಿಗೆ ಮನಗೆ ಬಂದು ಹೋಗುವಂತೆ ಮನವಿ ಮಾಡಿದ್ದು, ಅದಕ್ಕೆ ಗೋವಿಂದ್‌ ಕೂಡ ಒಪ್ಪಿಕೊಂಡಿದ್ದರು.

'ಎರಡನೇ ಮದುವೆಗೆ ರೆಡಿನಾ..?' ಡಿವೋರ್ಸ್‌ ಬಳಿಕ ಬಾರ್ಬಿ ಡಾಲ್‌ ಆದ ನಿವೇದಿತಾ ಗೌಡಗೆ ಫ್ಯಾನ್ಸ್‌ ಪ್ರಶ್ನೆ!

ಜೂನ್‌ 20 ರಂದು ಹಾಥಿಯಪುರ್‌ಗೆ ಬಂದ ಗೋವಿಂದ್‌, 18 ವರ್ಷದ ಬಳಿಕ ತನ್ನ ಅಕ್ಕನನ್ನು ಭೇಟಿ ಮಾಡಿದ್ದಾರೆ. ಇವರ ಭಾವುಕ ಭೇಟಿ ಇಡೀ ಕುಟುಂಬವನ್ನು ಸಂತೋಷದ ಅಲೆಯಲ್ಲಿ ತೇಲಿಸಿದೆ. "ಒಳ್ಳೆಯ ವಿಷಯಗಳು ಸಾಮಾಜಿಕ ಮಾಧ್ಯಮದಿಂದ ಬರುವುದಿಲ್ಲ ಎಂದು ಅವರು ಹೇಳುತ್ತಾರೆ, ಆದರೆ ಕೆಲವೊಮ್ಮೆ, ಸರಳವಾದ ವೀಡಿಯೊವು ಜೀವನದ ನೆನಪುಗಳನ್ನು ರಿಫ್ರೆಶ್ ಮಾಡುತ್ತದೆ ಮತ್ತು ಎಲ್ಲವನ್ನೂ ಬದಲಾಯಿಸುತ್ತದೆ. ನನ್ನ ಸಹೋದರ ಹಿಂತಿರುಗಿದ್ದಾನೆ ಮತ್ತು ಅದು ನಾನು ಕೇಳಬಹುದಾದ ದೊಡ್ಡ ಸಂತೋಷ" ಎಂದು ರಾಜಕುಮಾರಿ ಸಂತೋಷದ ಕಣ್ಣೀರಿಡುತ್ತಾ ಹೇಳಿದ್ದಾರೆ.

ಭಾವಿ ಪತಿಯ ಜನ್ಮದಿನಕ್ಕೆ ಮಹೀಂದ್ರಾ XUV 700 ಕಾರ್‌ ಗಿಫ್ಟ್‌ ನೀಡಿದ ಕಿರುತೆರೆ ನಟಿ!

click me!