
ಬಿಹಾರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಧನ್ಯವಾದ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಸೈಲೆಂಟ್ ವೋಟರ್ಸ್' ಬಗ್ಗೆ ಚರ್ಚಿಸಿದ್ದರು. ಮೋದಿಯಬನ್ವಯ ಈ ಸೈಲೆಂಟ್ ವೋಟರ್ಸ್ ಕಳೆದ ಆರು ವರ್ಷಗಳಿಂದ ಬಿಜೆಪಿಯ ಶಕ್ತಿಯಾಗಿದೆ. ವಾಸ್ತವವಾಗಿ ಪಿಎಂ ಮೋದಿ ಮಹಿಳಾ ಮತದಾರರ ಬಗ್ಗೆ ಮಾತನಾಡುತ್ತಿದ್ದರು, ಅದರಲ್ಲೂ ವಿಶೇಷವಾಗಿ ಗೃಹಿಣಿಯರನ್ನು ಸ್ಮರಿಸಿದ್ದರು.
ಮೋದಿಗೆ ಜಮೀನು ನೀಡಲು ಸಜ್ಜಾದ ಮೈನ್‌ಪುರಿಯ ಬಿಟ್ಟನ್ ದೇವಿ
ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ನಿವಾಸಿ ವೃದ್ಧ ಮಹಿಳೆಯ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿರುವ ಮಹಿಳೆಡ ಮೋದಿ ಪರ ತೋರಿಸುವ ಆ ಪ್ರೀತಿ ಆ ವಿಶ್ವಾಸ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ.
'ಬಿ.ಸಿ.ಪಾಟೀಲ ರಣಹೇಡಿ ಮಂತ್ರಿ, ಬಿಎಸ್ವೈ ಹೊಣಗೇಡಿ ಮುಖ್ಯಮಂತ್ರಿ'
ಈ ವೃದ್ಧ ಮಹಿಳೆಯ ಹೆಸರು ಬಿಟ್ಟನ್ ದೇವಿ. ಇವರು ತಮ್ಮ ಹೆಸರಿನಲ್ಲಿರುವ ಹನ್ನೆರಡು ಬೀಘಾ ಹೊಲ ಮೋದಿ ಹೆಸರಿಗೆ ಮಾಡಲು ಕಳೆದ ಬುಧವಾರ ಮೈನ್‌ಪುರಿ ತಹಶೀಲ್ದಾರರ ಕಚೇರಿ ತಲುಪಿದ್ದರು. ಜಮೀನು ಮೋದಿಯ ಹೆಸರಿಗೆ ಮಾಡುವ ನಿರ್ಧಾರ ಕಂಡು ವಕೀಲರೇ ಅಚ್ಚರಿಗೀಡಾಗಿದ್ದಾರೆ.
ವೃದ್ಧ ತಾಯಿಯನ್ನು ಬಿಟ್ಟ ಮಕ್ಕಳು
ಜನರು ಅದೆಷ್ಟೇ ಅರ್ಥೈಸಿದರೂ ಬಿಟ್ಟನ್ ದೇವಿ ಮಾತ್ರ ತಮ್ಮ ಹಠ ಮುಂದುವರೆಸಿದ್ದಾರೆ. ಇದರ ಹಿಂದಿನ ಕಾರಣವೂ ಭಾವುಕರನ್ನಾಗಿಸುತ್ತದೆ. 85 ವರ್ಷದ ಬಿಟ್ಟನ್ ದೇವಿ ಪತಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ವೃದ್ಧ ತಾಯಿಯನ್ನು ಬಿಟ್ಟು ಹೋಗಿದ್ದಾರೆ. ಆದರೀಗ ಮೋದಿ ಕಾರ್ಯದಿಂದ ಬಹಳಷ್ಟು ಖುಷಿಯಾಗಿರುವ ಬಿಟ್ಟನ್ ದೇವಿ ತಮ್ಮ ಜಮೀನು ಮೋದಿಗೆ ನೀಡಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ